Karnataka Bank Recruitment 2022: ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗವಕಾಶ | ಮಂಗಳೂರಿನಲ್ಲಿ ಉದ್ಯೋಗ | ಆಸಕ್ತರು ಅರ್ಜಿ ಸಲ್ಲಿಸಿ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿ
ಸುದ್ದಿ ಇದೆ. ಕರ್ನಾಟಕ ಬ್ಯಾಂಕ್(Karnataka Bank)
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

 

ಮಂಗಳೂರು ಬ್ರಾಂಚ್‌ನಲ್ಲಿ(Mangalore Branch) ಒಂದು ಕಂಪನಿ ಸೆಕ್ರೆಟರಿ ಹುದ್ದೆ ಖಾಲಿ ಇದ್ದು ಆಸಕ್ತರು ಕೂಡಲೇ ಅರ್ಜಿ ಹಾಕಿ. ಕಂಪನಿ ಸೆಕ್ರೆಟರಿ ಹುದ್ದೆಗೆ ಪದವಿ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು‌. ನವೆಂಬರ್ 24, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಇ-ಮೇಲ್(E-Mail) ಮಾಡಬೇಕು.

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/11/2022 ಇ-ಮೇಲ್ ಕಳುಹಿಸಲು ಕೊನೆ ದಿನ: 24/11/2022

ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಪ್ರಕಾರ, ಕಂಪನಿ ಸೆಕ್ರೆಟರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಧಿಸೂಚನೆ ಪ್ರಕಾರ, ಕಂಪನಿ ಸೆಕ್ರೆಟರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 50 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ: ಅಧಿಸೂಚನೆ ಪ್ರಕಾರ, ಕಂಪನಿ ಸೆಕ್ರೆಟರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ recruitment@ktkbank.com ನವೆಂಬರ್ 24, 2022ಕ್ಕೆ ಮುನ್ನ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.