ಮತ್ತೆ ಸಂಭವಿಸಿದ 4.1 ತೀವ್ರತೆಯ ಭೂಕಂಪ | ಕಂಗಾಲಾದ ಜನ, ಯಾವುದೇ ಜೀವ ಹಾನಿ ಇಲ್ಲ

Share the Article

ದೇಶದಲ್ಲಿ ಅಲ್ಲಲ್ಲಿ ಮಳೆ ಅವಾಂತರ ಹೆಚ್ಚಿದ್ದು, ರಾಜ್ಯದಲ್ಲಿ ಕೂಡಾ ಮಳೆ ಆರ್ಭಟ ಹೆಚ್ಚಿದೆ ಎಂದೇ ಹೇಳಬಹುದು. ಈ ಮಳೆ ಆರ್ಭಟದ ಜೊತೆಗೆ ಅಲ್ಲಲ್ಲಿ ಭೂಕಂಪನ ವರದಿಯಾಗುತ್ತಿದ್ದು, ಜನತೆಯಲ್ಲಿ ಭಯ ಆತಂಕ ಮೂಡಿದೆ. ಇಂದು ಕೂಡಾ ಪಂಜಾಬ್ ರಾಜ್ಯದ ಅಮೃತಸರ ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಭೂಕಂಪನವಾಗಿದೆ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಬುಧವಾರ (ನ.9) ಹಾಗೂ ಶನಿವಾರ (ನ.12) ರಾತ್ರಿ 8 ಗಂಟೆ ಸುಮಾರಿಗೆ ಕಂಪನವಾಗಿತ್ತು. ಆದರೆ ಯಾವುದೇ ಹಾನಿಯಾಗಿರಲಿಲ್ಲ.

Leave A Reply