ಟಾಲಿವುಡ್ ಹಿರಿಯ ನಟ ‘ಡಿಎಂಕೆ ಮುರಳಿ’ ಇನ್ನಿಲ್ಲ

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ ಡಿಎಂಕೆ ಮುರಳಿ ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

 

ನಟನೆಯ ಆಸಕ್ತಿಯಿಂದ ರಂಗ ಪ್ರವೇಶಿಸಿದ ಮುರಳಿ ಹಲವು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದರು. ದುರ್ಯೋಧನನ ಮಯಸಭಾ ಸ್ವಗತದಿಂದ ಡಿಎಂಕೆ ಮುರಳಿ ಒಳ್ಳೆಯ ಮನ್ನಣೆ ಪಡೆದರು.

ಡಿಎಂಕೆ ಮುರಳಿ ನಟಿಸಿದ ಅಂದಾಲ ರಾಕ್ಷಸಿ, ಮಾರುತಿ ನಿರ್ದೇಶನದ ಬಸ್ಟಾಪ್, ನಾಗ ಚೈತನ್ಯ-ಸುನೀಲ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ತಡಾಖಾ, ಕೊತ್ತ ಜಂಟ, ಕಾಯ್ ರಾಜ ಕಾಯ್ ಉತ್ತಮ ಮನ್ನಣೆ ಗಳಿಸಿವೆ. ಇನ್ನು ಡಿಎಂಕೆ ಮುರಳಿ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.