ಬಾಂಬ್ ಎಸೆದು ಬಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ!

ಬಾಂಬ್ ಎಸೆದು ಬಜರಂಗದಳ ಕಾರ್ಯಕರ್ತನೋರ್ವನನ್ನು ಹತ್ಯೆ ಮಾಡಿದ ದಾರುಣ ಘಟನೆಯೊಂದು ನಡೆದಿದೆ.

 

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರೊಬ್ಬರ ಮೇಲೆ ಕಚ್ಚಾ ಬಾಂಬ್‌ ಅನ್ನು ಎಸೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ, ಈ ಘಟನೆ ಚಕ್ರಧರಪುರ ಪಟ್ಟಣದ ಭಾರತ್ ಭವನ ಚೌಕ್‌ನಲ್ಲಿ ನಡೆದಿದೆ.

ಬೈಕ್ ನಲ್ಲಿ ಬಂದ ವ್ಯಕ್ತಿಗಳು ಬಜರಂಗದಳ ಕಾರ್ಯಕರ್ತ ಕಮಲ್ ದೇವಗಿರಿ ಎಂಬವರ ಮೇಲೆ ಕಚ್ಚಾ ಬಾಂಬ್‌ಗಳನ್ನು ಎಸೆದು ಆತನ
ಹತ್ಯೆಮಾಡಿದ್ದಾರೆ. ತಕ್ಷಣವೇ ಕಮಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ ವೈದ್ಯರು ಆತ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದಾರೆ. ಇದೀಗ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ತಿಳಿಸಿದ್ದಾರೆ.

Leave A Reply

Your email address will not be published.