ಆಫ್ಟರ್ ಮ್ಯಾರೇಜ್ ಲೈಫ್ ರೂಲ್ಸ್ ಅಗ್ರಿಮೆಂಟ್ | ಮದುವೆಯ ನಂತರ ರಾತ್ರಿ 9 ಗಂಟೆವರೆಗೆ ಪತಿಗೆ ತೊಂದರೆಯೇ ಕೊಡೋದಿಲ್ಲ ಎಂದ ಪತ್ನಿ!!

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರ್ಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ ಅತಿಥಿಗಳಿಗೆ ಯಾವ ರೀತಿ ಉಪಚಾರ ನೀಡುವುದು ಎಂದಾದರೆ, ಇನ್ನೂ ಕೆಲವರಿಗೆ ತಮ್ಮ ಮದುವೆಯ ಡ್ರೆಸ್ಸಿಂಗ್, ಫೋಟೋಗ್ರಾಫರ್ ಬಗ್ಗೆ ಚಿಂತೆ. ಇವಾಗ ಅಂತೂ ಪ್ರಿ ವೆಡ್ಡಿಂಗ್ ಫೋಟೋ ಶೂಟ್, ಹಳದಿ, ಮೆಹಂದಿ ಹೀಗೆಲ್ಲ ವೆರೈಟಿ ಪ್ಲಾನಿಂಗ್ ಇದೆ.

 

ಇಲ್ಲೊಬ್ಬಳು ಪತ್ನಿಯಾಗಲಿರುವ ಹುಡುಗಿ ಮದುವೆಯ ನಂತರ ರಾತ್ರಿ 9 ಗಂಟೆಯವರೆಗೆ ಪತಿಗೆ ಏನೂ ತೊಂದರೆ ಕೊಡಲ್ಲ ಎಂದು ಅಗ್ರಿಮೆಂಟ್ ಮಾಡಿ ಸಹಿ ಹಾಕಿದ್ದಾಳೆ. ಅವಳ ಸೆಲ್ಫ್ ಅಫಿಡವಿಟ್ ಈಗ ಸುದ್ದಿಯಾಗಿದೆ.

ಈಗಿನ ಪ್ರತಿಯೊಂದು ಯುವಜೋಡಿಯು, ತಾನು ಮದುವೆಯಾದ ಮೇಲೆ ಯಾವ ರೀತಿಲಿ ಜೀವನ ನಡೆಸಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿರುತ್ತಾರೆ. ಹೌದು. ಮೊದಲೆಲ್ಲ ಮದುವೆಯ ಮುಂಚೆ ವರದಕ್ಷಿಣೆಯ ಮಾತುಕತೆ ನಡೆಸುತ್ತಿದ್ದರು. ಆದರೆ, ಇದೀಗ ವರದಕ್ಷಿಣೆ ಎಂಬ ಮಾತು ಅಳಿಸಿಹೋಗಿ ‘ಆಫ್ಟರ್ ಮ್ಯಾರೇಜ್ ಲೈಫ್ ರೂಲ್ಸ್’ ಎಂಬ ಅಗ್ರಿಮೆಂಟ್ ಗೆ ಸಹಿ ಹಾಕುತ್ತಿದ್ದಾರೆ.

ಮದುವೆಯಾದ ಬಳಿಕ ಪತಿ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಬರಬಾರದು ಎಂಬ ಕಾರಣಕ್ಕೆ ಮದುವೆಗಿಂತ ಮೊದಲೇ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಜೋಡಿಗಳು. ಕೆಲವು ಒಪ್ಪಂದ ಮಾಡಿಕೊಂಡು ಇದನ್ನು ಮದುವೆಯಾದ ಬಳಿಕ ಇಬ್ಬರೂ ಪಾಲಿಸಬೇಕೆಂದು ಮತ್ತು ಈ ಒಪ್ಪಂದಕ್ಕೆ ಬದ್ದವಾಗಿರಬೇಕು ಎಂದು ಮದುವೆ ಮೊದಲೇ ಅಗ್ರಿಮೆಂಟ್ ಮಾಡಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ.

ಕೇರಳದಲ್ಲೊಂದು ಇಂತದ್ದೇ ಪ್ರಕರಣ ನಡೆದಿದ್ದು, ಎಸ್‌.ಅರ್ಚನಾ ಎಂಬ ಯುವತಿ ರಘು ಎಸ್‌ ಕೆಡಿಆರ್‌ ಎಂಬ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವಾಗ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮದುವೆಯ ನಂತರ ನಾನು ರಾತ್ರಿ 9 ಗಂಟೆವರೆಗೆ ಪತಿಗೆ ಕರೆ ಮಾಡಿ ತೊಂದರೆ ಕೊಡುವುದಿಲ್ಲ. ಅಲ್ಲಿಯವರೆಗೆ ಪತಿ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಅವಕಾಶ ನೀಡುತ್ತೇನೆ’ ಎಂಬುದೇ ಈ ಒಪ್ಪಂದದಲ್ಲಿರುವ ಅಂಶವಾಗಿದೆ.

ಮದುವೆಯಾದ ಮೇಲೆ ರಾತ್ರಿ 9 ಗಂಟೆಯ ಮೇಲೆ ಮಾತ್ರ ತೊಂದರೆ ಕೊಡುವೆ, ಅಲ್ಲಿಯವರೆಗೆ ತೊಂದ್ರೆ ಕೊಡಲ್ಲ ಅಂದಿದ್ದಾರೆ ಪತ್ನಿ. ಆಕೆ ಹಾಗೆ ಸರಿ ರಾತ್ರಿಯಲ್ಲಿ ನೀಡಬಹುದಾದ ಮುಧುರ ತೊಂದರೆ ಏನಿರಬಹುದು ಎನ್ನುವುದು ಕುತೂಹಲಿಗರ ಊಹೆ.

ರಘು ಮೂಲತಃ ಬ್ಯಾಡ್ಮಿಂಟನ್‌ ಆಟಗಾರ ಅವರು ಇನ್ನಿತರೆ ಆಟಗಾರರೊಂದಿಗೆ 17 ಮಂದಿಯಿರುವ ವಾಟ್ಸ್‌ಆಯಪ್‌ ಗುಂಪು ಮಾಡಿಕೊಂಡಿದ್ದಾರೆ. ಈ ಗುಂಪಿನ ಪ್ರತಿಯೊಬ್ಬರೂ ವಿವಾಹವಾಗುವಾಗ ಇಂತಹದ್ದೇನಾದರೂ ಮಾಡಿ ಸುದ್ದಿಯೆಬ್ಬಿಸುತ್ತಾರೆ. ಈ ಬಾರಿಯೂ ಅಂತಹದ್ದೇ ಒಂದು ಅಚ್ಚರಿ ನೀಡಿದ್ದಾರೆ. ಒಟ್ಟಾರೆ ಇದೀಗ ಸಾಮಾಜಿಕ ತಾಣಗಳಲ್ಲೂ ವೈರಲ್‌ ಆಗಿಬಿಟ್ಟಿದೆ.

Leave A Reply

Your email address will not be published.