ಪುತ್ತೂರು: ಆರೋಗ್ಯದಲ್ಲಿ ಏರುಪೇರು | ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೃತ್ಯು!!

Share the Article

ಪುತ್ತೂರು:ಹಠಾತ್ತನೇ ಆರೋಗ್ಯದಲ್ಲಿ ಏರುಪೇರಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಪುತ್ತೂರು ಸಮೀಪದ ನೆಲ್ಲಿಕಟ್ಟೆ ನಿವಾಸಿ ಸತೀಶ್ ಭಂಡಾರಿ ಎಂಬವರ ಪುತ್ರಿ, ಪುತ್ತೂರಿನ ವಿಕ್ಟರ್ಸ್ ಶಾಲೆಯ ವಿದ್ಯಾರ್ಥಿನಿ ಹಿಮಾನಿ ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿಗೆ ನಿನ್ನೆ ರಾತ್ರಿ ವೇಳೆಗೆ ಆರೋಗ್ಯದಲ್ಲಿ ಹಠಾತ್ತನೆ ಏರು ಪೇರಾಗಿದ್ದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

1 Comment
  1. xxxfast.com says

    I ppay a quick visit day-to-day a few weeb pages and information sites tto read articlles orr reviews,
    howeve thius webb siote gives quality baed content.

Leave A Reply

Your email address will not be published.