LG Company : ಹೊಸ ಫೋಲ್ಡೇಬಲ್ ಡಿಸ್ ಪ್ಲೇ ಎಲ್ ಜಿ ಕಂಪನಿಯಿಂದ ಬಿಡುಗಡೆ | ನೋಡೋಕೂ ಆಕರ್ಷನೀಯ!

ಕಾಲ ಬದಲಾದಂತೆ ತಂತ್ರಜ್ಞಾನದಲ್ಲೂ ಅನೇಕ ಆವಿಷ್ಕಾರ, ಬದಲಾವಣೆಗೆಳು ನಡೆಯುತ್ತಲಿವೆ. ಇದೀಗ ಕೊರಿಯನ್ ದೊಡ್ಡ ಟೆಕ್ ಬ್ಯಾಂಡ್ ಎಲ್‌ಜಿ (LG) ಕಂಪೆನಿಯು ಹೊಸದಾಗಿ ತನ್ನ ಗ್ರಾಹಕರಿಗೆ ವಿಶಿಷ್ಟ ಫೀಚರ್ಸ್‌ನೊಂದಿಗೆ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡುತ್ತಿದೆ. ಇದರ ವಿಶೇಷತೆ ಏನಂದರೆ ಡಿಸ್‌ಪ್ಲೇಯನ್ನು ನಾವು ಬೇಕಾದ ರೀತಿಯಲ್ಲಿ, ಸೈಜ್‌ನ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

 

ಎಲ್‌ಜಿ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಪ್ರಕಟಣೆಯ ಮೂಲಕ ಹೊಸದಾದ ಫೋಲ್ಡೇಬಲ್ ಡಿಸ್‌ಪ್ಲೇಯನ್ನು ಅನಾವರಣಗೊಳಿಸಿದ್ದು, ಈ ಡಿಸ್‌ಪ್ಲೇಯನ್ನು ಅದರ ನೈಜ ಗಾತ್ರದಿಂದ ಶೇಕಡಾ 20 ಪ್ರತಿಶತದಷ್ಟು ವಿಸ್ತರಿಸಲು ಸಾಧ್ಯ ಎಂದು ಕಂಪೆನಿ ಹೇಳಿಕೊಂಡಿದೆ.

ಈ ಹೊಸ ಎಲ್‌ಜಿ ಡಿಸ್‌ಪ್ಲೇಯು 100 ಪಿಕ್ಸೆಲ್‌ನೊಂದಿಗೆ ಉತ್ತಮ ರೆಸಲ್ಯುಶನ್ ಸಾಮರ್ಥ್ಯವನ್ನು ಹೊಂದಿದ್ದೂ,12 ಇಂಚಿನ ಗಾತ್ರವನ್ನು ಹೊಂದಿದೆ. ರಬ್ಬರ್ ಬ್ಯಾಂಡ್‌ನಂತೆ 12 ಇಂಚಿನಿಂದ 14 ಇಂಚಿನವರೆಗೆ ಇದರ ಗಾತ್ರವನ್ನು ವಿಸ್ತರಿಸಲು ಸಾಧ್ಯವಿದೆ. ಈ ಡಿಸ್‌ಪ್ಲೇಯು ಸಂಪೂರ್ಣ RGB ಬಣ್ಣದೊಂದಿಗೆ 4K ಟಿವಿಯ ರೆಸಲ್ಯೂಶನ್‌ಗೆ ಸಮಾನವಾಗಿದೆ ಎಂದು ಹೇಳಲಾಗಿದೆ. ಕಂಪನಿಯ ಹೊಸ ಡಿಸ್‌ಪ್ಲೇ ಬಹಳ ವಿಶೇಷತೆಯಿಂದ ಕೂಡಿದ್ದು ಜನರನ್ನು ಬಹಳ ಬೇಗ ಆಕರ್ಷಿಸುತ್ತದೆ.

ಫೋಲ್ಡೇಬಲ್ ಡಿಸ್‌ಪ್ಲೇಯು ವಿಶ್ವದಲ್ಲಿ ಪ್ರಾರಂಭವಾದ ಮೊದಲ ತಂತ್ರಜ್ಞಾನವಾಗಿದೆ. ದಕ್ಷಿಣ ಕೊರಿಯಾದಲ್ಲಿರುವ ದೊಟ್ಟ ತಂತ್ರಜ್ಞಾನ ಕಂಪನಿಯಾಗಿರುವ ಸ್ಯಾಮ್‌ಸಂಗ್ ಕಂಪನಿ ಕೂಡ ಈ ತಂತ್ರಜ್ಞಾನವನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ರೀತಿಯ ಬ್ರಾಂಡ್ ಈ ಹಿಂದೆಯೂ ಬಿಡುಗಡೆಯಾಗಿತ್ತು. ಆದರೆ ಅದು ಕೇವಲ ಮಡಚುವಂತಹ ಟಿವಿಗಳಾಗಿತ್ತು. ಆದರೆ ಈ ಬಾರಿ ರಿಲೀಸ್ ಆಗುತ್ತಿರುವುದು ಇಲ್ಲಿಯವರೆಗೆ ಇರುವ ಡಿಸ್‌ಪ್ಲೇಗಿಂತಲೂ ಬಹಳ ಗುಣಮಟ್ಟದ್ದಾಗಿದೆ. ಇದು ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಡಿಸ್‌ಪ್ಲೇ ತಂತ್ರಜ್ಞಾನದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಸಲುವಾಗಿ ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿದ್ದೇವೆ ಎಂದು ಎಲ್‌ಜಿ ಡಿಸ್‌ಪ್ಲೇ ಉಪಾಧ್ಯಕ್ಷ ಮತ್ತು ಸಿಟಿಒ ಆಗಿರುವ ಸೂ-ಯಂಗ್ ಯೂನ್ ಅವರು ಹೇಳಿದ್ದಾರೆ.

ಸಿಗ್ರೇಚರ್ ಒಎಲ್‌ಇಡಿ ಆರ್ ಟಿವಿ: ಈ ಟಿವಿಯನ್ನು ನಿಮಗೆ ಬೇಕಾದಾಗ ತೆಗೆಯುವ, ಬೇಡವಾದಾಗ ಈ ಟಿವಿಯನ್ನು ಮಡಚಿಡಬಹುದಾದ ಅವಕಾಶವಿದೆ. ಎಲ್ ಜಿ ಇಂಡಿಯಾ ಇತ್ತೀಚೆಗೆ ಎಲ್‌ಜಿ ಸಿಗ್ನಚರ್ OLEDR ಎಂಬ ತನ್ನ ರೋಲ್ ಮಾಡಬಹುದಾದ ಟಿವಿಯನ್ನು ಬಿಡುಗಡೆ ಮಾಡಿತ್ತು. ಇದೀಗ ನವದೆಹಲಿಯಲ್ಲಿ ರಿಲಯನ್ಸ್ ಡಿಜಿಟಲ್ ಫ್ಲ್ಯಾಗ್‌ ಶಿಪ್ ಸ್ಟೋರ್‌ನಲ್ಲಿ ವಿಶ್ವದ ಏಕೈಕ ರೋಲೇಬಲ್ OLEDR ಟಿವಿ ಲಭ್ಯವಿರುವ ಬಗ್ಗೆ ಕಂಪನಿ ಘೋಷಿಸಿದೆ. LG ಸಿಗ್ರೇಚರ್ OLEDR ಟಿವಿ, ದೆಹಲಿಯ ಸೌತ್ ಎಕ್ಸ್-II ನಲ್ಲಿರುವ ಸ್ಟೋರ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.

Leave A Reply

Your email address will not be published.