MissCallPay : ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ | ಹೇಗಂತೀರಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಈಗೀನ ದಿನಗಳಲ್ಲಿ ಗೂಗಲ್ ಪೇ ,ಫೋನ್ ಪೇ ಮೂಲಕವೇ ಹಣ ವರ್ಗಾವಣೆಯಾಗುತ್ತದೆ ಇದು ಎಲ್ಲರಿಗೂ ತಿಳಿದಿರುವುದೇ. ಅಷ್ಟೇ ಅಲ್ಲದೆ, ಪೇಟಿಎಂ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ಹೀಗೆ ಕೆಲವೊಂದು ಹಣ ವರ್ಗಾವಣೆಗೆ ಮಾರ್ಗಗಳಿವೆ. ಆದರೆ ಮಿಸ್ಡ್ ಕಾಲ್ ಮೂಲಕವೂ ಹಣ ವರ್ಗಾವಣೆ ಮಾಡಬಹುದು ಎಂದರೆ ಆಶ್ಚರ್ಯವೆನಿಸುತ್ತದೆ ಅಲ್ಲವೇ! ಆದರೆ ಇದು ನಿಜ, ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ ಮಾಡಬಹುದು ಇದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಹೇಗೆ? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ ಮಾಡುವ ಸೇವೆಗಳಿವೆ. ಈ ಸೇವೆಗಳನ್ನು UPI ಮೂಲಕ ಪಡೆಯಬಹುದಾಗಿದೆ. Misscallpay ಎಂಬ ಕಂಪನಿ ಈ ರೀತಿಯ ಸೇವೆಗಳನ್ನು ನೀಡುತ್ತದೆ. ಕಂಪನಿ ಇತ್ತೀಚೆಗೆ ಬ್ಯಾಂಕ್ ಆಫ್ ಇಂಡಿಯಾ ಮತ್ತು IDFC ಫಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ. ಅಂದ್ರೆ ಈ ಬ್ಯಾಂಕಿನ ಗ್ರಾಹಕರು ಮಿಸ್ಡ್ ಕಾಲ್ ಸೇವೆಗಳನ್ನು ಪಡೆಯಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳ ಮುಖಾಂತರ ಕೆಲವೇ ಸೆಕೆಂಡುಗಳಲ್ಲಿ ಯುಪಿಐ ಮೂಲಕ ವಹಿವಾಟು ಮಾಡಬಹುದು. ಆದರೆ ಫೀಚರ್ ಫೋನ್ ಮೂಲಕವೂ ಯುಪಿಐ ವ್ಯವಸ್ಥೆಯಡಿ ಮಿಸ್ಡ್ ಕಾಲ್ ಮೂಲಕ ಹಣ ಪಡೆಯಬಹುದು. ಈ ಮಿಸ್ಡ್ ಕಾಲ್ ಪಾವತಿ ಸೇವೆಗಳು UPI123 ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತವೆ.
ಹಾಗೇ MisscallPay ಮೂಲಕ ಹಣ ಕಳುಹಿಸುವುದು ಹೇಗೆಂದು ತಿಳಿಯೋಣ. ಫೋನ್ ಬಳಕೆದಾರರು MisscallPay ಮೂಲಕ ತಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಿ, ಹಣ ವರ್ಗಾವಣೆ ಸೌಲಭ್ಯವನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಬಿಲ್ ಪಾವತಿಯನ್ನೂ ಮಾಡಬಹುದಾಗಿದೆ. ಒಂದು ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ, Misscallpay ಈ ಸೇವೆಗಾಗಿ NPCI ಜೊತೆಗೆ ಕಾರ್ಯನಿರ್ವಹಿಸುತ್ತಿದೆ.
ಇನ್ನೂ ಮಿಸ್ಡ್ ಕಾಲ್ ಮೂಲಕ ವಹಿವಾಟುಗಳನ್ನು ಹೇಗೆ ನಿರ್ವಹಿಸುವುದು ಎಂದರೆ, ಮೊದಲು 08066740740 ಗೆ ಕರೆ ಮಾಡಬೇಕು. ಕರೆ ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಕರೆ ಸಂಪರ್ಕ ಕಡಿತಗೊಂಡ ಬಳಿಕ ನಿಮ್ಮ ಸಂಖ್ಯೆಗೆ 10 ಸೆಕೆಂಡುಗಳ ಒಳಗೆ ಮರಳಿ ಕರೆ ಬರುತ್ತದೆ. ಆ ಕರೆಯನ್ನು ಸ್ವೀಕರಿಸಿ ನಂತರ ಪಿನ್ ಸಂಖ್ಯೆಯನ್ನು ನಮೂದಿಸಬೇಕು. ಅದಾದ ಬಳಿಕ ವಹಿವಾಟುಗಳು ಪೂರ್ಣಗೊಳ್ಳುತ್ತದೆ. ಈ ಮಿಸ್ಡ್ ಕಾಲ್ ಪಾವತಿ ಸೇವೆಗಳು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಲಭ್ಯವಿದೆ. ವಹಿವಾಟು ಮತ್ತು ಬಿಲ್ ಪಾವತಿಗಳನ್ನು ಸುಲಭವಾಗಿ ನಿರ್ವಹಿಸಬಹುದು.