ಒಂದು email ನಿಂದ ಮತ್ತೆ ಮದುವೆಯಾದ ವಿಚ್ಛೇದಿತ ಜೋಡಿ | ಇಲ್ಲಿದೆ ಒಂದು ಇಂಟೆರೆಸ್ಟಿಂಗ್ ಸ್ಟೋರಿ!!
ಮದುವೆಯಾಗಿ ವಿಚ್ಛೇದನ ಆಗಿರುವಂತಹ ಎಷ್ಟೋ ಉದಾಹರಣೆಗಳಿವೆ ಹಾಗೂ ನಾವು ಕೇಳಿದ್ದೇವೆ ಕೂಡ. ಆದರೆ ವಿಚ್ಛೇದನವಾದ ನಂತರ ಮರುಮದುವೆ ಅಥವಾ ಆ ವಿಚ್ಛೇದಿತ ಜೋಡಿಗಳು ಒಂದಾಗುವುದು ಬೆರಳೆಣಿಕೆಯಷ್ಟು ಮಾತ್ರ. ಆದರೆ ವಿಚ್ಛೇದನವಾದ ನಂತರ ಮರುಮದುವೆಯಾದ ವಿಚ್ಛೇದಿತ ದಂಪತಿಗಳ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಹಾಗಾದರೆ ಆ ಕುತೂಹಲಕಾರಿ ಸ್ಟೋರಿ ಏನು ಎಂದು ನೋಡೋಣ.
ಆಸ್ಟ್ರೇಲಿಯಾದಲ್ಲಿ 2004 ರಲ್ಲಿ ವಿವಾಹವಾದ ಈ ದಂಪತಿಗಳು 2015 ರಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ ಇಮೇಲ್ ವಿನಿಮಯದ ಪರಿಣಾಮದಿಂದಾಗಿ ಈ ದಂಪತಿಗಳು 2019 ರಲ್ಲಿ ಮರುಮದುವೆಯಾಗಿದ್ದಾರೆ. ಇನ್ನೂ ಈ ಪ್ರೇಮಕಥೆಯ ಕಥೆ ಏನೆಂದು ತಿಳಿಯೋಣ.
2015 ರಲ್ಲಿ ವಿಚ್ಛೇದನ ಪಡೆದ ನಂತರ, ದಂಪತಿಗಳಾದ ಡೇನಿಯಲ್ ಕರ್ಟಿಸ್ ಮತ್ತು ಟಿಮ್ ಕರ್ಟಿಸ್ ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಮಾತನಾಡುತ್ತಿರಲಿಲ್ಲ. ಆದರೆ, ಪತ್ನಿ 2017 ರಲ್ಲಿ ವಿಚ್ಛೇದಿತ ಪತಿ ಟಿಮ್ ಕರ್ಟಿಸ್ ಗೆ ಇ-ಮೇಲ್ ಕಳುಹಿಸಿದ್ದಾರೆ. ಈ ವೇಳೆ ಇ-ಮೇಲ್ ನಲ್ಲಿ ಆಕೆ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಇದಾದ ಬಳಿಕ ಈ ದಂಪತಿಗಳ ಜೀವನ ದೊಡ್ಡ ತಿರುವು ಪಡೆದುಕೊಂಡಿದೆ. ಇವರಿಬ್ಬರ ಇಮೇಲ್ ವಿನಿಮಯದಿಂದಾಗಿ ಮತ್ತೆ ಇಬ್ಬರಿಗೂ ಪ್ರೀತಿ ಮರುಜೀವ ಪಡೆದು 2019 ರಲ್ಲಿ ಮರುಮದುವೆಯಾದರು.
ಡೇನಿಯಲ್ ಕರ್ಟಿಸ್ ಇತ್ತೀಚೆಗೆ ನ್ಯೂಸ್ ಕಾರ್ಪ್ ಆಸ್ಟ್ರೇಲಿಯಾದೊಂದಿಗೆ ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಜನವರಿ 9, 2002 ರಂದು ಆನ್‌ಲೈನ್ ಡೇಟಿಂಗ್ ಮೂಲಕ ತನ್ನ ಪತಿ ಟಿಮ್ ಕರ್ಟಿಸ್ ಅವರ ಭೇಟಿಯಾಯಿತು ಎಂದು ಡೇನಿಯಲ್ ಸುದ್ದಿ ಔಟ್‌ಲೆಟ್‌ಗೆ ತಿಳಿಸಿದರು. ಸುದೀರ್ಘ ಸಮಯದ ಚಾಟಿಂಗ್ ಮತ್ತು ಡಿನ್ನರ್ ನ ಬಳಿಕ ಟಿಮ್ ಕರ್ಟಿಸ್ ಏಪ್ರಿಲ್ 9, 2003 ರಂದು ವಿವಾಹದ ಬಗ್ಗೆ ಪ್ರಸ್ತಾಪಿಸಿದರು. ನಂತರ ಜನವರಿ 2004 ರಲ್ಲಿ ಅವರಿಬ್ಬರು ವಿವಾಹವಾದರು ಇದಾದ 18 ತಿಂಗಳ ನಂತರ ಟಿಮ್ ಕರ್ಟಿಸ್ ಅಧಿಕೃತವಾಗಿ ಮಕ್ಕಳನ್ನು ದತ್ತು ಪಡೆದರು.
ನಂತರ ಈ ದಂಪತಿಗಳು 2012 ರಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಒಳಗಾದರು. ಅಷ್ಟೇ ಅಲ್ಲದೆ, ಬಹುಬೇಗನೆ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿತು. ಹಾಗೇ 2015 ರಲ್ಲಿ ವಿಚ್ಛೇದನವನ್ನೂ ಪಡೆದರು. ನಂತರ ಡೇನಿಯಲ್ ಕರ್ಟಿಸ್, 2017 ರಲ್ಲಿ ತನ್ನ ಪತಿಗೆ ಇಮೇಲ್ ಬರೆದಿದ್ದಾಳೆ. ಈ ವೇಳೆ ಮಕ್ಕಳು ಹಾಗೂ ಕುಟುಂಬದ ಬಗ್ಗೆ ವಿಚಾರಿಸಿದ್ದಾರೆ. ನಂತರ ಅವರನ್ನು ವೈಯಕ್ತಿಕವಾಗಿ ಏಕೆ ಭೇಟಿಯಾಗುವುದೆಂದು ಬಯಸಿದೆ. ಇಲ್ಲಿಂದ ನಮ್ಮ ಸಂಬಂಧ ಮತ್ತೆ ಮುಂದುವರೆಯಿತು. ನಾವು ಮತ್ತೆ ಪ್ರೀತಿಸಿ 2019 ರಲ್ಲಿ ಮರುಮದುವೆಯಾದೆವು ಎಂದು ತಿಳಿಸಿದ್ದಾರೆ.