ಕಾಂತಾರ ಮತ್ತು ಪುಷ್ಪ ಸಿನಿಮಾ ಹಿಟ್​ ಆಗಲು ಕಾರಣ ಇದೇ ಅಂತೆ!

2021ರಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಪ್ಯಾನ್ ಇಂಡಿಯಾ ಚಿತ್ರ ಅಂತ ಹೇಳಿದರೆ ಬಹುತೇಕರಿಗೆ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ನೆನಪಿಗೆ ಬರುತ್ತದೆ. ಹೌದು..ಅಲ್ಲು ಅರ್ಜುನ್ ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮುಖ್ಯವಾದ ಪಾತ್ರಗಳಲ್ಲಿ ಅಭಿನಯಿಸಿದ್ದ ಪುಷ್ಪಾ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲೂ ಸಹ ಕೋಟಿ ಕೋಟಿ ಹಣವನ್ನು ಗಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದ ಬಿಡುಗಡೆ ನಂತರ ಇದರ ಹಾಡುಗಳು ಮತ್ತು ನಟ ಮತ್ತು ನಟಿಯ ಡ್ಯಾನ್ಸ್ ಸ್ಟೆಪ್ಸ್ ಮತ್ತು ಡೈಲಾಗ್ ಗಳು ಎಷ್ಟರ ಮಟ್ಟಿಗೆ ಜನರಿಗೆ ಹಿಡಿಸಿದ್ದವು ಎಂದರೆ ಅನೇಕರು ಆ ಶೈಲಿಯನ್ನು ಅನುಕರಿಸಿ ವೀಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು.

 

ಆ ಪುಷ್ಪಾ ರೀತಿಯಲ್ಲಿಯೇ ಈ ವರ್ಷ ಕನ್ನಡದ ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಸಹ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಹಣವನ್ನು ಗಳಿಸಿದೆ. ಚಿತ್ರ ಬಿಡುಗಡೆಯಾಗಿ ಇಷ್ಟು ದೊಡ್ಡ ಯಶಸ್ಸನ್ನು ಕಂಡ ನಂತರ ಬೇರೆ ಇತರೆ ಭಾಷೆಗಳಲ್ಲಿ ಡಬ್ ಮಾಡಲಾಯಿತು ಮತ್ತು ಇದು ಸಹ ಪ್ಯಾನ್ ಇಂಡಿಯಾ ಚಿತ್ರವಾಗಿ ಇನ್ನೂ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕಾಂತಾರ ಚಿತ್ರವು ಈಗಾಗಲೇ ಭಾರಿ ಮಟ್ಟದ ಯಶಸ್ಸನ್ನು ಕಂಡಿದ್ದು ಗಲ್ಲಾ ಪೆಟ್ಟಿಗೆಯ ಕಲೆಕ್ಷನ್ ನಲ್ಲಿ ಪುಷ್ಪಾ ಚಿತ್ರವನ್ನು ಹಿಂದಿಕ್ಕಿದೆ ಎಂಬ ಚರ್ಚೆಗಳು ಇದೀಗ ಕೇಳಿ ಬರುತ್ತಿವೆ. ಈ ಸಮಯದಲ್ಲಿ, ಅನೇಕ ತೆಲುಗು ಅಭಿಮಾನಿಗಳು ಕಾಂತಾರ ನಿಜವಾಗಿಯೂ ಪುಷ್ಪಕ್ಕಿಂತ ಉತ್ತಮ ಚಿತ್ರವೇ ಅಥವಾ ಇದಕ್ಕೆ ತದ್ವಿರುದ್ಧವಾಗಿದೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟವಾದ ಒಂದು ಅಭಿಪ್ರಾಯವನ್ನು ನೀಡಬೇಕಾದರೆ, ಈ ಎರಡೂ ಚಲನಚಿತ್ರಗಳು ಭಾರಿ ಯಶಸ್ಸನ್ನು ಕಂಡಿವೆ ಮತ್ತು ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಾಗಿವೆ. ಆದರೆ ಅವುಗಳ ಯಶಸ್ಸಿಗೆ ಕಾರಣವಾದ ಅಂಶಗಳು ಬೇರೆ ಬೇರೆ ಆಗಿವೆ ಅಂತ ಹೇಳಬಹುದು.

ಪುಷ್ಪಾ ಚಿತ್ರದ ಬಗ್ಗೆ ಹೇಳುವುದಾದರೆ, ಸುಕುಮಾರ್ ಅವರ ಸೃಜನಶೀಲತೆಗಿಂತ ಹೆಚ್ಚಾಗಿ, ನಟ ಅಲ್ಲು ಅರ್ಜುನ್ ಅವರ ಅಭಿನಯ ಮತ್ತು ಸ್ಟೈಲ್ ಜನರನ್ನು ಮೋಡಿ ಮಾಡಿತ್ತು ಅಂತ ಹೇಳಬಹುದು. ಇದೆಲ್ಲವೂ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಮೊತ್ತದ ಹಣ ಗಳಿಸುವಲ್ಲಿ ಕೆಲಸ ಮಾಡಿದವು. ಡೈಲಾಗ್ ಹೇಳಿರುವ ಸ್ಟೈಲ್, ಅವರ ಹಾವಭಾವಗಳು, ಹಾಡುಗಳಲ್ಲಿನ ಅವರ ಡ್ಯಾನ್ಸ್ ಮತ್ತು ಅವರ ಆಕ್ಷನ್ ದೃಶ್ಯಗಳು ಎಲ್ಲವೂ ಸಹ ಪ್ರೇಕ್ಷಕರಿಗೆ ಇಷ್ಟವಾದವು.

ಪುಷ್ಪಾ ಚಿತ್ರದಲ್ಲಿನ ಕಮರ್ಷಿಯಲ್ ಅಂಶಗಳು ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾದವು, ಅದಕ್ಕಾಗಿಯೇ ಈಗ ಪುಷ್ಪಾ 2 ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದೆ ಅಂತ ಹೇಳಬಹುದು. ಪುಷ್ಪಾ 2 ಮತ್ತೊಂದು ಸರಳವಾದ ಕಥಾ ಹಂದರವನ್ನು ಹೊಂದಿರುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಪುಷ್ಪಾ ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಅವರ ಹಿಟ್ ಅಭಿನಯವನ್ನು ಮತ್ತೊಮ್ಮೆ ಕಣ್ತುಂಬಿ ಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.