ನಿಮಗಿದು ತಿಳಿದಿದೆಯೇ? ಸೂರ್ಯಕಾಂತಿ ಹೂ ಹಾಗೂ ಸೂರ್ಯನ ನಡುವಿನ ಬಂಧನ ! ಅಧ್ಯಯನದಿಂದ ಅಚ್ಚರಿಯ ವಿಷಯ ಬಯಲು!
ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಆದರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗೆ ಮಾಡಿದ ಪ್ರಯತ್ನಗಳಲ್ಲಿ ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ. ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಕ್ರಿಯೆಗಳು, ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು, ಪರಿಸರ ವ್ಯವಸ್ಥೆಯಲ್ಲಿನ ವಿಚಿತ್ರಗಳು ಹೀಗೆ ಪ್ರತಿ ದಿನವೂ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ ಹಾಗಂತ ನಾವು ನಿಲ್ಲಿಸಲು ಸಹ ಸಾಧ್ಯವಿಲ್ಲ. ಈ ಎಲ್ಲಾ ಕ್ರಿಯೆಗಳು ಪ್ರಕೃತ್ತಿ ನಿಮಿತ್ತ ಆಗಿದೆ.
ಈ ಎಲ್ಲಾವುಗಳ ನಡುವೆ ನಮ್ಮನ್ನು ಆಕರ್ಷಿಸುವ ವಿದ್ಯಮಾನವೆಂದರೆ ಸೂರ್ಯಕಾಂತಿ ಸಸ್ಯವು ಸೂರ್ಯನಿಗೆ ಪ್ರತಿಕ್ರಿಯಿಸುವ ಬಗೆ ಹೌದು ಸೂರ್ಯನೆಡೆಗೆ ತಿರುಗುವ ಅದರ ಸಾಮರ್ಥ್ಯ. ಇದು ಸಂಭವಿಸುವುದನ್ನು ನೋಡುವುದೇ ಅತ್ಯಂತ ಖುಷಿಯ ಸಂಗತಿ.
ಸೂರ್ಯಕಾಂತಿಗಳು ಸೂರ್ಯನ ಕಡೆಗೆ ತಿರುಗಲು ಕಾರಣವೇನು ಅನ್ನೋದು ಈ ಹಿಂದೆ 2016 ರಲ್ಲಿ ಸಂಶೋಧನೆ ನಡೆದಿತ್ತು.
2016ರ ಅಧ್ಯಯನದ ಪ್ರಕಾರ ಸನ್‌ಫ್ಲವರ್ ಗಿಡಗಳ ಸೂರ್ಯನ ಟ್ರ್ಯಾಕಿಂಗ್ ಅನ್ನು ಸಿರ್ಕಾಡಿಯನ್ ಲಯಗಳಿಂದ ವಿವರಿಸಬಹುದುದಾಗಿದೆ. ಮತ್ತು ಸೂರ್ಯನನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೆಲಿಯೊಟ್ರೋಪಿಸಮ್ ಎಂದು ಕರೆಯಲಾಗುತ್ತದೆ.
ಇದಲ್ಲದೆ ಸಸ್ಯದ ಗಡಿಯಾರವು ನೈಸರ್ಗಿಕ ಪರಿಸರದಲ್ಲಿ ಬೆಳವಣಿಗೆಯನ್ನು ಮಾಡ್ಯುಲೇಟ್ ಮಾಡುವ ಮತ್ತು ಸಸ್ಯಕ್ಕೆ ನಿಜವಾದ ಪರಿಣಾಮಗಳನ್ನು ಹೊಂದಿರುವ ಮೊದಲ ಉದಾಹರಣೆ ಇದು ಎನ್ನುತ್ತಾರೆ
ಸಿರ್ಕಾಡಿಯನ್ ರಿದಮ್ ಎನ್ನುವುದು ಮಾನವರು ಹೊಂದಿರುವ ಆಂತರಿಕ ಗಡಿಯಾರಕ್ಕೆ ಸಂಬಂಧಿಸಿರುವ ನಡವಳಿಕೆಯ ಬದಲಾವಣೆಗಳನ್ನು ಸೂಚಿಸುತ್ತದೆ.
ಸಂಶೋಧಕರ ಅಭಿಪ್ರಾಯದಂತೆ ಸಸ್ಯದ ಕಾಂಡಗಳು ಹಗಲು ಮತ್ತು ರಾತ್ರಿಯಲ್ಲಿ ಅಸಮಾನವಾಗಿ ಬೆಳೆಯುತ್ತವೆ ಹಾಗೂ ಇದು ಸೂರ್ಯನಿಗೆ ಅನುಗುಣವಾಗಿ ಸಸ್ಯವು ಚಲಿಸುತ್ತಿರುವಂತೆ ತೋರುತ್ತದೆ. ಪೂರ್ವ ಭಾಗದಲ್ಲಿ ಕಾಂಡದ ಬೆಳವಣಿಗೆಯು ಹಗಲಿನಲ್ಲಿ ಹೆಚ್ಚು ಮತ್ತು ರಾತ್ರಿಯಲ್ಲಿ ತುಂಬಾ ಕಡಿಮೆ ಇರುತ್ತದೆ. ಪ್ರಬುದ್ಧ ಸೂರ್ಯಕಾಂತಿಗಳು ಸೂರ್ಯನಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಒಟ್ಟಾರೆ ಸಸ್ಯದ ಬೆಳವಣಿಗೆಯು ನಿಧಾನವಾಗುತ್ತಿದ್ದಂತೆ, ದಿನದ ಇತರ ಸಮಯಗಳಿಗಿಂತ ಮುಂಜಾನೆ ಬೆಳಕಿಗೆ ಸಸ್ಯವು ಹೆಚ್ಚು ಬಲವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಸಸ್ಯವು ಇಡೀ ದಿನ ಪೂರ್ವಕ್ಕೆ ಮುಖಮಾಡುತ್ತದೆ ಮತ್ತು ದಿನದಲ್ಲಿ ಪಶ್ಚಿಮಕ್ಕೆ ಚಲಿಸುವುದನ್ನು ನಿಲ್ಲಿಸುತ್ತದೆ. ಸಂಶೋಧಕರು ಪೂರ್ವಕ್ಕೆ ಎದುರಾಗಿರುವ ಪ್ರಬುದ್ಧ ಹೂವುಗಳನ್ನು ಪಶ್ಚಿಮಕ್ಕೆ ಎದುರಿಸುತ್ತಿರುವ ಹೂವುಗಳೊಂದಿಗೆ ಹೋಲಿಸಿದ್ದಾರೆ. ಪೂರ್ವಾಭಿಮುಖವಾಗಿರುವ ಹೂವುಗಳು ಐದು ಪಟ್ಟು ಹೆಚ್ಚು ಸಹಾಯಕವಾದ ಪರಾಗಸ್ಪರ್ಶಕಗಳನ್ನು ಆಕರ್ಷಿಸುತ್ತವೆ ಎಂಬುದನ್ನು ಸಂಶೋಧನೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಒಟ್ಟಾರೆ ಸೂರ್ಯಕಾಂತಿ ಮತ್ತು ಸೂರ್ಯನಿಗೆ ಇರುವ ಒಂದು ನಿಕಟವಾದ ಮತ್ತು ಪರೋಕ್ಷವಾಗಿ ಸಂಬಂಧ ಇದೆ ಎನ್ನಬಹುದಾಗಿದೆ.