BBK9 : ಬಿಗ್ ಬಾಸ್ ಮನೆ ವೈಲ್ಡ್ ಕಾರ್ಡ್ ಎಂಟ್ರಿಗೆ ಕೇಳಿ ಬಂತು ಈ ಹೆಸರು | ಕಾರಣ ಏನಿರಬಹುದು? ನೀವು ಊಹಿಸೋಕೂ ಸಾಧ್ಯವಿಲ್ಲ!!!

ಬಿಗ್ ಬಾಸ್ ಸೀಸನ್ ಕನ್ನಡ ಈಗಾಗಲೇ ಏಳು ವಾರಗಳನ್ನು ಮುಗಿಸಿದೆ. ಆದರೆ ಇಲ್ಲಿಯವರೆಗೂ ಯಾವುದೇ ವೈಲ್ಡ್ ಕಾರ್ಡ್ ಎಂಟ್ರಿ ಆಗಿಲ್ಲ. ಹಾಗಾಗಿ ಜನ ಈಗಾಗಲೇ ಬಹಳ ಕುತೂಹಲದಿಂದ ಕಾಯುವ ಸಮಯ ಇನ್ನೇನು ಬರಬಹುದು. ಅಂದ ಹಾಗೆ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಒಂದು ಕಡೆ ಸೋನು ಶ್ರೀನಿವಾಸ್ ಗೌಡ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರನ್ನು ಕಟ್ಟಿಹಾಕಲು ಚಕ್ರವರ್ತಿ ಚಂದ್ರಚೂಡ ಸರಿಯಾದ ಆಟಗಾರ. ಹಾಗಾಗಿ ಚಕ್ರವರ್ತಿ ಚಂದ್ರಚೂಡಗೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂಬ ಮಾತಿನ ಜೊತೆಗೆ ಇನ್ನೊಂದು ಅಚ್ಚರಿಯ ವಿಷಯ ಕೇಳಿ ಬರುತ್ತಿದೆ.

 

ಹೌದು, ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿರುವುದರಿಂದ ಈ ಬೆಳವಣಿಗೆ ನಡೆದಿರಬಹುದು. ಅಷ್ಟು ಮಾತ್ರವಲ್ಲ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಸಂದರ್ಶನ ನೀಡಿದ್ದು ಯಾವ ಮಾಧ್ಯಮದಲ್ಲಿ ಕಂಡು ಬಂದಿಲ್ಲ. ಹಾಗಾಗಿ ಇಂಥದ್ದೊಂದು ಮಾತು ದಟ್ಟವಾಗಿ ಕೇಳಿ ಬರುತ್ತಿದೆ.

ಸಾನ್ಯ ಅಯ್ಯರ್, ಸೋನು ಶ್ರೀನಿವಾಸ್ ಗೌಡ, ಚಕ್ರವರ್ತಿ ಚಂದ್ರಚೂಡ ಮುಂತಾದವರ ಹೆಸರು ವೈಲ್ಡ್ ಕಾರ್ಡ್ ಎಂಟ್ರಿಗೆ ಕೇಳಿ ಬರುತ್ತಿವೆ. ಅಂದ ಹಾಗೆ ಈ ಮೂವರು ಎಂಟ್ರಿ ಕೊಟ್ಟರೆ ಏನಾಗಬಹುದು ಅಥವಾ ಮೂವರಲ್ಲಿ ಒಬ್ಬರು ಎಂಟ್ರಿ ಕೊಟ್ಟರೆ ಯಾವ ರೀತಿಯ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಈಗಲೇ ಊಹಿಸಿ ಜನ ಥ್ರಿಲ್ ಆಗಿರುವುದಂತೂ ಖಂಡಿತ ಸತ್ಯ.

Leave A Reply

Your email address will not be published.