ಈ ಕಾರುಗಳ ಮೇಲೆ ಸಿಗ್ತಿದೆ 50ಸಾವಿರ ರೂಪಾಯಿ ಡಿಸ್ಕೌಂಟ್ | ಹಬ್ಬ ಮುಗಿದರೇನು…ಗ್ರಾಹಕರಿಗಂತೂ ಬಂಪರ್ ಆಫರ್!

Share the Article

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ಆಫರ್ಗಳನ್ನು ತರುತ್ತಲೇ ಇದೆ.

ಪ್ರಸ್ತುತ ದೀಪಾವಳಿ ಮತ್ತು ಹಬ್ಬದ ಸೀಸನ್ ಮುಗಿದಿದೆ. ಆದರೂ ಕಾರ್‌ಗಳ ಖರೀದಿ ಮೇಲೆ ಆಫರ್‌ಗಳು ಮುಗಿದಿಲ್ಲ. ಹ್ಯುಂಡೈ ಮತ್ತು ಮಾರುತಿ ಸುಜುಕಿಯಂತಹ ಕಂಪನಿಗಳು ತಮ್ಮ ಕಾರುಗಳನ್ನು ಅಗ್ಗದ ದರಗಳಿಗೆ ಮಾರಾಟ ಮಾಡುತ್ತಿವೆ. ನಿಮಗೆ ಗೊತ್ತೇ ಮಾರುತಿ ಸುಜುಕಿ ಕಾರುಗಳನ್ನಂತೂ 50 ಸಾವಿರ ರೂಪಾಯಿ ರಿಯಾಯಿತಿಯಲ್ಲಿ ಖರೀದಿಸಬಹುದು.

ವಿಶೇಷವೆಂದರೆ ಅಕ್ಟೋಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಕೂಡ ಇದರಲ್ಲಿ ಸೇರಿದೆ. ಅಕ್ಟೋಬರ್‌ನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಅಂದ್ರೆ ಮಾರುತಿ ಕಾರು ಆಗಿದೆ .

ಮಾರುತಿ ಆಲ್ಟೊ ಎರಡು ರೂಪಾಂತರಗಳಲ್ಲಿ ಇದೆ.
• ಆಲ್ಲೊ 800 ಮತ್ತು
• ಆಲ್ಲೊ ಕೆ10.

ಮಾರುತಿ ವಾಹನದಲ್ಲಿ 21,260 ಯೂನಿಟ್‌ಗಳು ಇದ್ದು ಬರೋಬ್ಬರಿ 50 ಸಾವಿರ ರೂಪಾಯಿ ಡಿಸ್ಕ್‌ಂಟ್‌ನಲ್ಲಿ ಸಿಗಲಿದೆ.

ಹೌದು ನವೆಂಬರ್‌ನಲ್ಲಿ ಕಂಪನಿಯು ಆಲ್ಟೊ ಕೆ 10 ಮೇಲೆ 50,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಮತ್ತು ಮಾರುತಿ ಸುಜುಕಿ ಆಲ್ಟೊ ಕೆ10 ಬೆಲೆ 4.59 ಲಕ್ಷ ರೂಪಾಯಿಯಿಂದ ಪ್ರಾರಂಭ ಆಗಲಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ನವೆಂಬರ್‌ನಲ್ಲಿ ನೀವು ಈ ಕಾರನ್ನು ಇನ್ನಷ್ಟು ಅಗ್ಗವಾಗಿ ಖರೀದಿಸಬಹುದು. ಈ ವಾಹನದ ಮೇಲೆ 30,000 ನಗದು ರಿಯಾಯಿತಿ, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಮತ್ತು 5,000 ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಜೊತೆಗೆ ಆಲ್ಟೊ ಮಾರುತಿ ಸುಜುಕಿ ತನ್ನ ಎಸ್-ಪ್ರೆಸ್ಟೋ ಕಾರಿನ ಮೇಲೆ ಕೂಡ 50 ಸಾವಿರ ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಇದರಲ್ಲಿ 30 ಸಾವಿರ ರೂಪಾಯಿ ನಗದು ರಿಯಾಯಿತಿ ನೀಡಲಾಗುತ್ತಿದೆ. ಹಾಗೂ 15,000 ರೂಪಾಯಿ ಎಕ್ಸ್ ಚೇಂಜ್ ಬೋನಸ್ ಮತ್ತು 5 ಸಾವಿರ ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಇದು ಒಳಗೊಂಡಿದ್ದು ಈ ವಾಹನದ ಆರಂಭಿಕ ಬೆಲೆ 4.88 ಲಕ್ಷ ರೂಪಾಯಿ ಇದೆ ತಿಳಿಸಲಾಗಿದೆ.

ಹೊಸ ಕಾರು ಖರೀದಿ ಮಾಡುವ ಯೋಚನೆಯಲ್ಲಿ ಇದ್ದರೆ ತಡಮಾಡದಿರಿ ಬರೋಬ್ಬರಿ ಡಿಸ್ಕೌಂಟ್ ನೊಂದಿಗೆ ಆಲ್ಟೊ ಕಾರು ನಿಮ್ಮದಾಗಲಿದೆ

Leave A Reply