Real me Smartphone : ನಿಮಗೆ ಗೊತ್ತಾ? ಅಬ್ಬಾ ಕೇವಲ 20 ನಿಮಿಷಕ್ಕೆನೇ ಫುಲ್ ಚಾರ್ಜ್ ಆಗೋ ಈ ಫೋನ್ !!! ಹೆಚ್ಚಿನ ಮಾಹಿತಿ ಇಲ್ಲಿದೆ!

ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ನಡುವೆ ಗ್ರಾಹಕರಿಗೆ ನವೀನ ಮಾದರಿಯ ಜೊತೆಗೆ ಬಂಪರ್ ಆಫರ್ ಗಳು ಕೂಡ ದೊರೆಯುತ್ತಿದ್ದು, ಯಾವುದನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಕೂಡ ಸೃಷ್ಟಿಯಾದರು ಅಚ್ಚರಿಯಿಲ್ಲ.

 

ರಿಯಲ್‌ಮಿ ಸ್ಮಾರ್ಟ್‌ಫೋನ್‌ ಕಂಪನಿ ತನ್ನ ಉತ್ಪನ್ನಗಳ ಮೂಲಕ ಪ್ರಪಂಚದಾದ್ಯಂತ ಗ್ರಾಹಕರನ್ನು ಹೊಂದಿದೆ. ಇದು ಇತ್ತೀಚಿಗೆ ತನ್ನ ಕಂಪನಿಯಲ್ಲಿ ಸ್ಮಾರ್ಟ್‌ವಾಚ್‌ (Smartwatch) ಅನ್ನು ಕೂಡ ಆರಂಭಿಸಿದ್ದು ಇದು ಕೂಡ ಬಹಳಷ್ಟು ಪ್ರಚಾರವನ್ನು ಹೊಂದಿದೆ. ಇದೀಗ, ರಿಯಲ್‌ಮಿ (Realme) ಹೊಸ ಮೊಬೈಲ್ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಲಗ್ಗೆ ಇಡಲೂ ತಯಾರಾಗಿದೆ.

ಈ ವರ್ಷದ ಹೊಸ ಸ್ಮಾರ್ಟ್‌ಫೋನ್‌ ಆಗಿದ್ದು, ರಿಯಲ್‌ಮಿ ಸಂಸ್ಥೆ ಈ ವರ್ಷ ತನ್ನ 10ನೇ ಸೀರಿಸ್‌ನಲ್ಲಿ (Realme 10 Series) ಹೊಸ ಮೊಬೈಲನ್ನು ಲಾಂಚ್‌ (Launch) ಮಾಡಲು ಹೊರಟಿದೆ. ಈ ಸ್ಮಾರ್ಟ್‌ಫೋನ್‌ ಮೊದಲಿಗೆ ನವೆಂಬರ್‌ 17 ರಂದು ಚೀನಾದಲ್ಲಿ ಪ್ರಾರಂಭವಾಗಲಿದೆ.

ಈ ಮೊದಲಿಗೆ ಬಿಡುಗಡೆಯಾಗಿದ್ದ ರಿಯಲ್‌ಮಿ 10 ಸೀರಿಸ್‌ನ ಸ್ಮಾರ್ಟ್‌ಫೋನ್‌ಗಳಾದ ರಿಯಲ್‌ಮಿ 10, ರಿಯಲ್‌ಮಿ 10 ಪ್ರೊ ಮೊಬೈಲ್‌ಗಳು ಕೇವಲ ಎರಡು ಸ್ಟೋರೇಜ್‌ ಆಯ್ಕೆ ಮತ್ತು ಎರಡು ಬಣ್ಣಗಳಲ್ಲಿ ಲಭ್ಯವಿತ್ತು.ಆದರೆ ಮುಂಬರುವ ರಿಯಲ್‌ಮಿ 10 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಮೂರು‌ ರೀತಿಯ ಸ್ಟೋರೇಜ್ ಮತ್ತು ಮೂರು ವಿಧದ ಬಣ್ಣಗಳೊಂದಿಗೆ ಲಭ್ಯವಿರಲಿದೆ ಎನ್ನಲಾಗುತ್ತಿದೆ.

ಇದು ಹಲವಾರು ವೈಶಿಷ್ಟ್ಯದೊಂದಿಗೆ ಜನರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ರಿಯಲ್‌ಮಿ 10 ಸೀರಿಸ್‌ನಲ್ಲಿ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ ರಿಯಲ್‌ಮಿ 10 ಪ್ರೊ ಪ್ಲಸ್‌ ಆಗಿದ್ದು, ಇದು ಈವರೆಗೆ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ವಿಶೇಷತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ರಿಯಲ್‌ಮಿ 10‌ ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿದೆ? ಎಂಬುದಕ್ಕೆ ಉತ್ತರ ಇಲ್ಲಿದೆ

ರಿಯಲ್‌ಮಿ 10 ಪ್ರೊ ಪ್ಲಸ್ಇತ್ತೀಚಿನ ವರದಿಯ ಪ್ರಕಾರ, ರಿಯಲ್‌ಮಿ 10 Pro+ ನ 2.33mm ನಷ್ಟು ತೆಳುವಾಗಿರುತ್ತದೆ ಎನ್ನಲಾಗುತ್ತಿದೆ. ರಿಯಲ್‌ಮಿ 10 Pro+ 6.7-ಇಂಚಿನ HD+ AMOLED ಡಿಸ್‌ಪ್ಲೇಯೊಂದಿಗೆ ಬರುವ ನಿರೀಕ್ಷೆಯಿದೆ.

ರಿಯಲ್‌ಮಿ 10 Pro+ 108 ಮೆಗಾಪಿಕ್ಸೆಲ್, 8-ಮೆಗಾಪಿಕ್ಸೆಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಅನ್ನು ಒಳಗೊಂಡಿದ್ದು ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕೂಡ ಹೊಂದಿರಲಿದೆ.

67 ವ್ಯಾಟ್ಸ್ ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,890mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದ್ದು, ಇನ್ನು ಈ ಸ್ಮಾರ್ಟ್‌ಫೋನ್‌ 16-ಮೆಗಾಪಿಕ್ಸೆಲ್ ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ.

ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ನಿಂದ ಕಾರ್ಯನಿರ್ವಹಿಸಬಹುದಾಗಿದೆ. ರಿಯಲ್‌ಮಿ 10 ಪ್ರೊ ಪ್ಲಸ್ಇದು ರಿಯಲ್‌ಮಿ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್‌ಫೋನ್‌ ಆಗಿದ್ದು, ಮೊದಲು ಚೀನಾದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು ತದನಂತರ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ.

ಈ ಮೊದಲು ರಿಯಲ್‌ಮಿ 9 ಪ್ರೊ ಮತ್ತು 9 ಪ್ರೊ ಪ್ಲಸ್‌ ಬಿಡುಗಡೆಯಾಗಿತ್ತು. ಇದು ಕೂಡ ಬಹಳಷ್ಟು ಫೀಚರ್ಸ್‌ ಅನ್ನು ಹೊಂದಿದೆ. ರಿಯಲ್ ಮಿ 9 ಪ್ರೋ ಪ್ಲಸ್ 8ಜಿಬಿ ರ‍್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಇದು 60 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4500 ಎಂಎಎಚ್ ಬ್ಯಾಟರಿಯೊಂದಿಗೆ ಬಂದಿದೆ. ರಿಯಲ್ ಮಿ 9 ಪ್ರೋ ಪ್ಲಸ್ ರಿಯಲ್ ಮಿ ಯುಐ 3.0 ನೊಂದಿಗೆ ಬಂದ ಮೊದಲ ಫೋನ್ ಆಗಿದೆ. ಇದು ಆ್ಯಂಡ್ರಾಯ್ಡ್ 12 ಅನ್ನು ಆಧರಿಸಿದೆ.

ರಿಯಲ್ ಮಿ 9 ಪ್ರೋ, 9 ಪ್ರೋ ಪ್ಲಸ್ ವಿಶೇಷತೆ ಗಮನಿಸಿದರೆ, ರಿಯಲ್ ಮಿ 9 ಪ್ರೋ ಸೀರೀಸ್ 5ಜಿಯನ್ನು ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿದ್ದು, 9 ಪ್ರೋ ಪ್ಲಸ್ ಡೈಮೆನ್ಸಿಟಿ 920 ಪ್ರೊಸೆಸರ್‌ನೊಂದಿಗೆ ಬರಲಿದೆ ಮತ್ತು ಮುಖ್ಯ ಕ್ಯಾಮೆರಾದಲ್ಲಿ ಸೋನಿ ಐಎಂಎಕ್ಸ್ 766 ಸೆನ್ಸರ್ ಅನ್ನು ಒಳಗೊಂಡಿದೆ. 9 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಇರುವ ಬಣ್ಣಗಳು ಬೇರೆ ಬೇರೆ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.

Leave A Reply

Your email address will not be published.