ಕಡೆಗೂ ಮೌನ ಮುರಿದ ರಿಷಬ್ ಶೆಟ್ಟಿ | ನಟಿಸಲು ಸಮಂತಾ ಜೊತೆ ಯಸ್ ರಶ್ಮಿಕಾ ಜೊತೆ ನೊ ಎಂದ ಕಾಂತಾರ ನಟ!!!

ಎಲ್ಲೆಡೆಯೂ ಅಬ್ಬರಿಸಿದ ಕಾಂತಾರದ ಹವಾ ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ ಕರಾವಳಿಯ ಪ್ರತಿಭೆ ರಿಷಬ್ ಶೆಟ್ಟಿಯ ನಟನೆಗೆ ಪ್ರಶಂಸನೆಯ ಸುರಿಮಳೆ ಸುರಿಸಿ ಫ್ಯಾನ್ ಇಂಡಿಯಾ ಆಗಿಬಿಟ್ಟಿದ್ದಾರೆ.

 

‘ಕಾಂತಾರ’ ಸಿನಿಮಾ ಒಟ್ಟು 350 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್ ಮಾಡಿದ್ದು, ರಿಷಬ್ ಸಿನಿಮಾ ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ ಜನಪ್ರಿಯತೆ ಗಳಿಸಿದೆ. ಕಾಂತಾರ (Kantara) ಎಂಬ ಕನ್ನಡದ ಸಿನಿಮಾ ಇದೀಗ ಗಡಿ ದಾಟಿ ಸೌಂಡ್ ಮಾಡಿ ಎಲ್ಲ ಚಿತ್ರರಂಗ ತಿರುಗಿ ನೋಡುವಂತೆ ಕರಾವಳಿಯ ಕಲೆಯನ್ನು ಬಿಂಬಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕಾಂತಾರ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ(Rishab Shetty) ಸದ್ಯ ಹಿಂದಿ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ಮಂದಣ್ಣ(Rashmika Mandanna) ಕುರಿತು ಮೌನ ಮುರಿದಿದ್ದಾರೆ.

ರಿಷಬ್ ಶೆಟ್ಟಿ ಈಗಾಗಲೇ ಅನೇಕ ಸಿನಿಮಾಗಳ ಮೂಲಕ ನಟಿಸಿದ್ದರು ಕೂಡ ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ದೊಡ್ದ ಮಟ್ಟದಲ್ಲಿ ಯಶಸ್ಸನ್ನು ತಂದು ಕೊಟ್ಟಿದೆ. ರಿಷಬ್ ಶೆಟ್ಟಿ ಸದ್ಯ `ಕಾಂತಾರ’ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜನಪ್ರಿಯತೆ ಗಳಿಸುತ್ತಿದ್ದಾರೆ.

ಹೀಗಿರುವಾಗ ಇತ್ತೀಚಿನ ಹಿಂದಿ ಸಂದರ್ಶನವೊಂದರಲ್ಲಿ ರಶ್ಮಿಕಾ ಅಥವಾ ಸಮಂತಾ ಯಾರೊಂದಿಗೆ ನಟಿಸಲು ಇಷ್ಟ ಎಂದು ನಿರೂಪಕಿ ಯೊಬ್ಬರು ರಿಷಬ್‌ಗೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಡಿವೈನ್ ಸ್ಟಾರ್ ಸಮಂತಾ ಪರ್ಫಾಮೆನ್ಸ್ ನನಗೆ ತುಂಬಾ ಇಷ್ಟವಾಗುತ್ತಿದೆ. ಹೊಸ ಹೊಸ ಕಲಾವಿದರನ್ನು ಕರೆದು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇದೆ. ವಿಭಿನ್ನ ಪಾತ್ರಗಳಿರುತ್ತವೆ. ಹಾಗಾಗಿ, ಯಾವುದೇ ಬ್ಯಾಗೇಜ್ ಹೊತ್ತಿಕೊಂಡು ಬರುವುದಿಲ್ಲ ಜೊತೆಗೆ ನಮಗೂ ಯಾವ ಬ್ಯಾಗೇಜ್ ಇರುವುದಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ ರಶ್ಮಿಕಾ ಅಥವಾ ಸಮಂತಾ ಎಂದಾಗ ಸ್ಯಾಮ್ ಗೆ ಓಕೆ ಎಂದು ಸಮಂತಾ ಅವರ ಹೆಸರನ್ನು ರಿಷಬ್ ಸೂಚಿಸಿದ್ದಾರೆ. ಇದೀಗ, ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ರಿಷಬ್ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ.

Leave A Reply

Your email address will not be published.