ರೈತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರಕಾರ!

ರೈತರ ಹಿತ ಕಾಪಾಡುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದರ ಜೊತೆಗೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ನೀಡುವುದಲ್ಲದೆ, ಆರ್ಥಿಕ ನೆರವನ್ನು ನೀಡುತ್ತಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಸೌಲಭ್ಯ, ರಸಗೊಬ್ಬರ ಇಳುವರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಿದೆ.

ಇದಲ್ಲದೆ, ರೈತರ ಶ್ರೇಯೋಭಿವೃದ್ಧಿಗೆ ನಾನಾ ಯೋಜನೆಗಳನ್ನ ಜಾರಿಗೆ ತರುತ್ತಿರುವ ಕೇಂದ್ರ ಸರಕಾರ ಮತ್ತೊಂದು ಹೊಸ ಯೋಜನೆ ತಂದಿದೆ. ಇದೀಗ, ರೈತರಿಗೆ 3 ಲಕ್ಷ ಸಹಾಯಧನ ಸಿಗಲಿದ್ದು, ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಈ ಯೋಜನೆ ಜಾರಿಗೆ ತಂದಿದೆ.

ಹಸು, ಎಮ್ಮೆ, ಮೇಕೆ, ಮೀನು ಸಾಕುತ್ತಿರುವ ಎಲ್ಲ ರೈತರಿಗೆ ಸರಕಾರ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದೆ. ಪಶುಸಂಗೋಪನೆಯನ್ನು ಉತ್ತೇಜಿಸುವ ಜೊತೆಗೆ ಬೆಂಬಲಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಹಾಲು, ಹಾಲಿನ ಉತ್ಪನ್ನಗಳು ಮತ್ತು ಮಾಂಸದ ಕೊರತೆಯನ್ನ ನೀಗಿಸುವ ಉದ್ದೇಶದಿಂದ ಕೇಂದ್ರವು ಈ ಯೋಜನೆ ಪ್ರಾರಂಭಿಸಿದೆ.

ಈ ಕಾರ್ಡ್ ಪಡೆಯಲು ಬಯಸುವ ರೈತರು ಮೊದಲು ಹತ್ತಿರದ ಬ್ಯಾಂಕುಗಳಿಗೆ ತೆರಳಿ ಮಾಹಿತಿ ಪಡೆಯಬಹುದು. ಬಳಿಕ ಅರ್ಜಿ ನಮೂನೆಯನ್ನೂ ತೆಗೆದುಕೊಂಡು ಸಂಬಂಧಿತ ವಿವರಗಳನ್ನ ನಮೂದಿಸಬೇಕು. ಇದಲ್ಲದೇ KYC ಗಾಗಿ ಕೆಲವು ದಾಖಲೆಗಳನ್ನ ಸಲ್ಲಿಸಬೇಕಾಗುತ್ತದೆ. ಇದರ ಪರಿಶೀಲನೆಯ ನಂತರ 15 ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್, ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಜಮೀನು ದಾಖಲೆಗಳು, ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನ ಒದಗಿಸಬೇಕಾಗುತ್ತದೆ.

ಈ ಕಾರ್ಡ್ ಸಹಾಯದಿಂದ ರೈತರಿಗೆ ಸುಲಭವಾಗಿ ಸಾಲ ಪಡೆಯಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಪಿಎಂ ಕಿಸಾನ್ ಬಳಸುವವರು ಸಹಿತ ಈ ಕಾರ್ಡ್ ಪಡೆಯಬಹುದಾಗಿದೆ. ಶೇಕಡಾ 7ರಷ್ಟು ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ ಪಡೆಯಬಹುದಾಗಿದ್ದು, ಇನ್ನು ಒಂದು ವರ್ಷದೊಳಗೆ ಸಾಲ ಮರುಪಾವತಿ ಮಾಡುವವರಿಗೆ ಹೆಚ್ಚುವರಿ ಸಬ್ಸಿಡಿ ಕೂಡ ನೀಡಲಾಗುತ್ತದೆ ಆದರೆ, ರೈತರು ಐದು ವರ್ಷದೊಳಗೆ ಸಾಲ ಮರುಪಾವತಿ ಮಾಡಬೇಕಾಗುತ್ತದೆ.

Leave A Reply

Your email address will not be published.