Crime News : ಗಂಡ ತಂದ ಬಿರಿಯಾನಿಯಲ್ಲಿ ಪಾಲು ಕೇಳಿದ ಹೆಂಡತಿ | ಕೋಪಗೊಂಡ ಗಂಡ ಬೆಂಕಿ ಹಚ್ಚೇ ಬಿಟ್ಟ | ಆದರೆ ಅದರ ನಂತರ ಆದದ್ದು ಮಾತ್ರ ಊಹಿಸಲಸಾಧ್ಯ!

ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಎಂಬ ಮಾತಿಗೆ ತದ್ವಿರುದ್ದವಾಗಿ ಕೆಲ ಪ್ರಕರಣಗಳು ನಡೆಯುತ್ತವೆ. ದಿನಂಪ್ರತಿ ಒಂದಲ್ಲ ಒಂದು ಗಲಾಟೆ ಪ್ರಕರಣಗಳೂ ವರದಿಯಾಗುತ್ತಲೆ ಇರುತ್ತವೆ. ಅದರಲ್ಲೂ ಕೆಲ ವಿಚಾರಗಳನ್ನೂ ನೋಡಿದಾಗ ಸಣ್ಣ ಸಣ್ಣ ವಿಷಯಕ್ಕೂ ಜಗಳ ಸಾವಿನ ದವಡೆಗೆ ದೂಡುತ್ತಿರುವ ಪ್ರಸಂಗಗಳೇ ಹೆಚ್ಚು.ಇದೆ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

 

ತಮಿಳುನಾಡಿನ ಚೆನ್ನೈನ ಐನಾವರಂ ನೆರೆಹೊರೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, (Shocking News) ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ತನ್ನ ಬಳಿಯಿದ್ದ ಬಿರಿಯಾನಿಯಲ್ಲಿ ತನಗೂ ಪಾಲು ಬೇಕೆಂದು ಕೇಳಿದ್ದರಿಂದ ಕೋಪ ಗೊಂಡು ಪತ್ನಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಕರುಣಾಕರನ್ ಮತ್ತು ಅವರ ಪತ್ನಿ ನಡುವೆ ಜಗಳ ಸಾಮಾನ್ಯವಾಗಿ ನಡೆಯುತ್ತಿತ್ತು ಎನ್ನಲಾಗಿದೆ. ಕರುಣಾಕರನ್ (74) ಅವರ ಹೆಂಡತಿ ಪದ್ಮಾವತಿ (70) ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ಅವರ 4 ಮಕ್ಕಳು ನಗರದ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿದ್ದಾರೆ.ಜೊತೆಗೆ ಆಗಾಗ ಅವರ ಮಕ್ಕಳು ಬಂದು ತಂದೆ-ತಾಯಿಯನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಮಕ್ಕಳು ದೂರ ಇದ್ದುದರಿಂದ, ದಂಪತಿಗಳು ಒಂಟಿತನದಿಂದ ಖಿನ್ನತೆಗೆ ಒಳಗಾಗಿದ್ದಾರೆ.

ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಕರುಣಾಕರನ್ ತಾವು ತಂದಿದ್ದ ಬಿರಿಯಾನಿಯನ್ನು ತಮ್ಮ ಹೆಂಡತಿಗೆ ಕೊಡಲಿಲ್ಲವೆಂದು ಮುನಿಸಿಕೊಂಡ ಹೆಂಡತಿ ಗಂಡನೊಂದಿಗೆ ಜಗಳವಾಡಿದ್ದಾರೆ. ಜೊತೆಗೆ ತನಗೂ ಬಿರಿಯಾನಿ ಬೇಕೆಂದು ಕೇಳಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು ಜಗಳ ತಾರಕಕ್ಕೇರಿದೆ. ಈ ಸಂದರ್ಭ ಕರುಣಾಕರನ್ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ತನಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗಾಬರಿಗೊಂಡ ಮಹಿಳೆ ಗಂಡನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಆಗ ಆತನಿಗೂ ಬೆಂಕಿ ಹೊತ್ತಿಕೊಂಡು ಹೆಂಡತಿಯೊಂದಿಗೆ ಗಂಡನಿಗು ಬೆಂಕಿ ಹೊತ್ತಿಕೊಂಡಿದೆ.

ಆಗ ಜೋರಾಗಿ ಕಿರುಚಾಟ ನಡೆಸಿದ್ದು, ಇದನ್ನು ಕೇಳಿದ ಅಕ್ಕಪಕ್ಕದ ಮನೆಯವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಕೆಎಂಸಿಎಚ್) ವೈದ್ಯರು ಪದ್ಮಾವತಿ ಅವರಿಗೆ 65% ಸುಟ್ಟಗಾಯಗಳು ಮತ್ತು ಕರುಣಾಕರನ್ ಅವರಿಗೆ 50% ಸುಟ್ಟ ಗಾಯಗಳಾಗಿದ್ದವು. ತಮ್ಮ ಮೈ ಸುಟ್ಟುಹೋಗಿರುವುದನ್ನು ನೋಡಿದ ಬಳಿಕ ದಂಪತಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಆಸ್ಪತ್ರೆಯ ವೈದ್ಯರು ಅದನ್ನು ನೋಡಿದ್ದರಿಂದ ಆತ್ಮಹತ್ಯೆಯ ಪ್ರಯತ್ನ ವಿಫಲವಾಗಿದೆ.

ಮಂಗಳವಾರ ಪದ್ಮಾವತಿಗೆ ಪ್ರಜ್ಞೆ ಬಂದ ಮೇಲೆ ಅಲ್ಲಿ ಏನು ನಡೆಯಿತೆಂಬ ಸತ್ಯ ಬಯಲಾಗಿದ್ದು, ಆಕೆ ನಡೆದ ಘಟನೆಯನ್ನು ಪೊಲೀಸರಿಗೆ ಹೇಳಿದ ಒಂದೆರಡು ಗಂಟೆಯಲ್ಲೇ ಮೃತಪಟ್ಟಿದ್ದಾರೆ. ಆಕೆಯ ಗಂಡ ಕರುಣಾಕರನ್ ಮಾರನೇ ದಿನ ಬೆಳಿಗ್ಗೆ ಮೃತ ಪಟ್ಟಿದ್ದಾರೆ. ಕೆಲವೊಮ್ಮೆ ಸಣ್ಣ ಮನಸ್ತಾಪಗಳು ದೊಡ್ಡ ರಾದ್ದಂತಕ್ಕೆ ಎಡೆ ಮಾಡಿಕೊಟ್ಟು ಸಾವಿನ ಸುಳಿಗೆ ತಳ್ಳುತ್ತದೆ ಎಂಬುದಕ್ಕೆ ಈ ವಿಚಾರವೇ ಸಾಕ್ಷಿಯಾಗಿದೆ.

Leave A Reply

Your email address will not be published.