ಆಧಾರ್ ಕಾರ್ಡ್ ನಿಯಮಗಳಲ್ಲಿ ತಿದ್ದುಪಡಿ!!

ಇದೀಗ ಸರ್ಕಾರ ಆಧಾರ್ ಕಾರ್ಡ್ ನಿಯಮಗಳಿಗೆ ತಿದ್ದುಪಡಿ ತಂದಿದೆ. ದಾಖಲಾತಿ ದಿನಾಂಕದಿಂದ 10 ವರ್ಷಗಳು ಪೂರ್ಣಗೊಂಡ ನಂತರ ಕನಿಷ್ಠ ಒಮ್ಮೆ ಪೋಷಕ ದಾಖಲೆಗಳನ್ನು ನವೀಕರಿಸಬೇಕು ಎಂದು ತಿಳಿಸಿದೆ.

 

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ (ಸಿಐಡಿಆರ್) ಆಧಾರ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಖಚಿತಪಡಿಸುತ್ತದೆ.

ಆಧಾರ್ ಸಂಖ್ಯೆಯನ್ನು ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳಿಗೆ ಒಮ್ಮೆ ಪೂರ್ಣಗೊಂಡ ನಂತರ ಗುರುತಿನ ಪುರಾವೆ (ಪಿಒಐ) ಮತ್ತು ವಿಳಾಸದ ಪುರಾವೆಯ (ಪಿಒಎ) ದಾಖಲೆಯನ್ನು ಸಲ್ಲಿಸಿ ಒಂದು ಬಾರಿಯಾದರೂ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ನವೀಕರಿಸಬಹುದು. ಸಿಐಡಿಆರ್ ನ ಪ್ರಕಾರ, ಕಾಲಕಾಲಕ್ಕೆ ಪ್ರಾಧಿಕಾರವು ನಿರ್ದಿಷ್ಟಪಡಿಸಬಹುದಾದ ರೀತಿಯಲ್ಲಿ ನಿರಂತರ ನಿಖರತೆಯನ್ನು ಖಚಿತಪಡಿಸಬಹುದು.

ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಕಳೆದ ತಿಂಗಳು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಸಂಖ್ಯೆಯನ್ನು ನೀಡುವ ಸರಕಾರಿ ಸಂಸ್ಥೆ, 10 ವರ್ಷಗಳ ಹಿಂದೆ ವಿಶಿಷ್ಟ ಐಡಿಯನ್ನು ನೀಡಿದ್ದವರು ವಿವರಗಳನ್ನು ನವೀಕರಿಸದಿದ್ದರೆ ಗುರುತಿನ ಮತ್ತು ನಿವಾಸದ ಪುರಾವೆ ದಾಖಲೆಗಳನ್ನು ನವೀಕರಿಸಲು ಜನರಿಗೆ ತಿಳಿಸಿತ್ತು.

Leave A Reply

Your email address will not be published.