Blood Pressure : ರಕ್ತದೊತ್ತಡ ಪುರುಷರು ಹಾಗೂ ಮಹಿಳೆಯರಲ್ಲಿ ಎಷ್ಟಿರುತ್ತೆ? ವ್ಯತ್ಯಾಸ ಇದೆಯೇ? ಉತ್ತರ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕೆಲಸದ ಒತ್ತಡ ಮತ್ತು ಅತಿಯಾದ ಉದ್ವೇಗವನ್ನು ಹೊಂದಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದೂ, ಈ ಕಾಯಿಲೆಗೆ ನಮ್ಮ ಹದಗೆಟ್ಟ ಜೀವನಶೈಲಿಯೇ ಕಾರಣ.
ರಕ್ತದೊತ್ತಡವು ನವಜಾತ ಶಿಶುವಿನಿಂದ ಹಿಡಿದು ವೃಧ್ಯಾಪ್ಯದವರೆಗೂ ಇರುತ್ತದೆ. ಪುರುಷರು ಮತ್ತು ಮಹಿಳೆಯರ ರಕ್ತದೊತ್ತಡವು ವಯಸ್ಸಿಗೆ ಅನುಗುಣವಾಗಿ ಎಷ್ಟಿರಬೇಕು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಸಾಮಾನ್ಯವಾಗಿ ಜನರು 120/80 ಸಾಮಾನ್ಯ ರಕ್ತದೊತ್ತಡ ಎಂದು ನಂಬಿದ್ದಾರೆ, ಆದರೆ ಆರೋಗ್ಯ ತಜ್ಞರ ಪ್ರಕಾರ ವಯಸ್ಸಾದಂತೆ ಪುರುಷರು ಮತ್ತು ಮಹಿಳೆಯರಲ್ಲಿ ರಕ್ತದೊತ್ತಡದ ಪ್ರಮಾಣವು ಬದಲಾಗುತ್ತದೆ. ವಯಸ್ಸಿನ ಆಧಾರದ ಮೇಲೆ ಸಾಮಾನ್ಯ ರಕ್ತದೊತ್ತಡವು 90/60 ರಿಂದ 145/90 ರ ನಡುವೆ ಇರಬಹುದು.
ಬಾಲ್ಯದಲ್ಲಿ, ಹುಡುಗಿಯರ ರಕ್ತದೊತ್ತಡವು ಹುಡುಗರಷ್ಟೇ ಇರುತ್ತದೆ. ಹದಿಹರೆಯದ ನಂತರ, ಹುಡುಗಿಯರ ರಕ್ತದೊತ್ತಡವು ಹುಡುಗರಿಗಿಂತ ಸ್ವಲ್ಪ ಕಡಿಮೆ ಆಗುತ್ತದೆ, ಆದರೆ ಋತುಬಂಧದ ನಂತರ, ಮಹಿಳೆಯರಲ್ಲಿ ರಕ್ತದೊತ್ತಡವು ಪುರುಷರಿಗಿಂತ ಹೆಚ್ಚಾಗಿರುತ್ತದೆ.
ಸಾಮಾನ್ಯವಾಗಿ, ಪುರುಷರು ಮತ್ತು ಮಹಿಳೆಯರ ವಯಸ್ಸು ಹೆಚ್ಚಾದಂತೆ ರಕ್ತದೊತ್ತಡದ ವ್ಯಾಪ್ತಿಯು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಇದು ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ನವಜಾತ ಶಿಶುಗಳಲ್ಲಿ 90/60, 6 ತಿಂಗಳಿಂದ 2 ವರ್ಷದ ಮಕ್ಕಳಲ್ಲಿ 100/70, 18 ವರ್ಷದೊಳಗಿನ ಮಕ್ಕಳಲ್ಲಿ 120/80 ರಕ್ತದೊತ್ತಡವು ಇರುತ್ತದೆ. 40 ವರ್ಷ ವಯಸ್ಸಿನವರಲ್ಲಿ 135/80 ಮತ್ತು ಅದಕ್ಕಿಂತ ಹೆಚ್ಚಿನ ಜನರಲ್ಲಿ 145/90 ವರೆಗೆ ರಕ್ತದೊತ್ತಡ ಇರುತ್ತದೆ. ಪುರುಷರಲ್ಲಿ ರಕ್ತದೊತ್ತಡದ ಮೇಲಿನ ವ್ಯಾಪ್ತಿಯು 90/60 ರಿಂದ 145/90 ವರೆಗೆ ಇರುತ್ತದೆ.
ರಕ್ತದೊತ್ತಡ ಸಮಸ್ಯೆಯು ಅತಿಯಾದ ಒತ್ತಡದಿಂದಾಗಿ ಕಾಣಿಸಿಕೊಳ್ಳುವುದರಿಂದ, ಯಾವುದೇ ವ್ಯಕ್ತಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದು ಸರಿಯಲ್ಲ. ಸಾಮಾನ್ಯ ರಕ್ತದೊತ್ತಡವನ್ನು ಪರೀಕ್ಷಿಸಲು ವೈದ್ಯರನ್ನು ಸಂಪರ್ಕಿಸಿ.