Prize Money For Students 2022 : ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ | ಅರ್ಜಿ ಸಲ್ಲಿಕೆಗೆ ಡಿ.31 ಕೊನೆಯ ದಿನ

ಇಂದಿನ ಮಕ್ಕಳು ಮುಂದಿನ ಭವಿಷ್ಯ ರೂಪಿಸುವವರು ಈ ನಿಟ್ಟಿನಲ್ಲಿ ಅವರನ್ನು ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ವಿವಿಧ ಕೋರ್ಸ್‌ಗಳನ್ನು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ.

ವಿವಿಧ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಮಾತ್ರ ಈ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ . ಮತ್ತು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಆದೇಶ ನೀಡಲಾಗಿದೆ.

ವಿದ್ಯಾರ್ಥಿಗಳು ಆನ್‌ಲೈನ್‌ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು. ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ / ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್: https://sw.kar.nic.in/index.aspx ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು :
•ಅಂಕಪಟ್ಟಿ,
•ಪಾಸ್ ಸರ್ಟಿಫಿಕೇಟ್‌,
•ಆಧಾರ್ ಕಾರ್ಡ್‌,
• ಬ್ಯಾಂಕ್‌ ಪಾಸ್‌ ಪುಸ್ತಕ,
• ಫೋಟೋ ಇತರೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಿರುತ್ತದೆ.

ಕೋರ್ಸ್ ಅನುಸಾರ ಪ್ರೋತ್ಸಾಹಧನ ಮೊತ್ತ ಹೀಗಿದೆ :
• ದ್ವಿತೀಯ ಪಿಯುಸಿ ಮತ್ತು 3 ವರ್ಷದ ಪಾಲಿಟೆಕ್ನಿಕ್ • ಡಿಪ್ಲೊಮ : 20,000
• ಪದವಿ : 25,000
• ಯಾವುದೇ ಸ್ನಾತಕೋತ್ತರ ಪದವಿ : 30,000
• ಅಗ್ರಿಕಲ್ಚರ್, ಇಂಜಿನಿಯರ್, ವೆಟರಿನರಿ, ಮೆಡಿಷನ್‌: 35,000

ಆನ್‌ಲೈನ್ ಅರ್ಜಿಕೆಗೆ ಈ ಲಿಂಕ್ : https://sw.kar.nic.in/swprizemoney/WebPages/validation.aspx HAL
ಈ ಮೂಲಕ ಡಿಸೆಂಬರ್ 31,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಅರ್ಜಿ ಮರುಮುದ್ರಣ ಅಥವಾ :
ಅಭ್ಯರ್ಥಿಗಳು ನೀವು ನಿಮ್ಮ ಕೋರ್ಸ್ ನಲ್ಲಿ ಉತ್ತೀರ್ಣರಾದ ವರ್ಷವನ್ನು ಆಯ್ಕೆ ಮಾಡಿ. ತದನಂತರ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ಅಂತಿಮವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
ಅರ್ಜಿ ಮರುಮುದ್ರಣ ಲಿಂಕ್: https://sw.kar.nic.in/swprizemoney/WebPages/ReprintAcknowledgement.aspx KEA

ಕಾಲೇಜು/ವಿಶ್ವವಿದ್ಯಾಲಯ ಪಟ್ಟಿ :
ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ನೀವು ಅಧ್ಯಯನ ಮಾಡಿದ ಕಾಲೇಜು ಮತ್ತು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿ.
ಕಾಲೇಜು/ವಿಶ್ವವಿದ್ಯಾಲಯ ಪಟ್ಟಿ ಲಿಂಕ್ : https://sw.kar.nic.in/swprizemoney/WebPages/UniversityList.aspx

ಆಹ್ವಾನ ಅರ್ಜಿ ತಿದ್ದುಪಡಿ :
ಒಂದು ವೇಳೆ ನೀವು ಅರ್ಜಿ ತಿದ್ದುಪಡಿ ಮಾಡಲು ಇದ್ದಲ್ಲಿ ನೀವು ನಿಮ್ಮ ಕೋರ್ಸ್ ನಲ್ಲಿ ಉತ್ತೀರ್ಣರಾದ ವರ್ಷ, ರಿಜಿಸ್ಟ್ರೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ನೀವು ಸಿಬಿಎಸ್ಇ/ಕರ್ನಾಟಕ/ಇತರೆ ರಾಜ್ಯ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಲ್ಲಿ ಆಯ್ಕೆ ಮಾಡಿಕೊಳ್ಳಿ.
ಅರ್ಜಿ ತಿದ್ದುಪಡಿಗೆ ಲಿಂಕ್ : https://sw.kar.nic.in/swprizemoney/WebPages/EditProcessPage.aspx

ಅರ್ಜಿಯ ಅಂಕಿ ಅಂಶ :
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮೊದಲು ಪ್ರೋತ್ಸಾಹಧನದ ಅಂಕಿ ಅಂಶಗಳನ್ನು ವೀಕ್ಷಿಸಬಹುದು. ಅರ್ಜಿಯ ಅಂಕಿ ಅಂಶ ವೀಕ್ಷಿಸಲು ಲಿಂಕ್ : https://sw.kar.nic.in/swprizemoney/WebPages/ApplicationStatistics.aspx

ಅರ್ಜಿಯ ಸ್ಥಿತಿ :
ಅಭ್ಯರ್ಥಿಗಳು ನಿಮ್ಮ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ ಅರ್ಜಿ ಸಂಖ್ಯೆ ಅಥವಾ ಕಾಲೇಜು ಆಯ್ಕೆ ಮಾಡಿ. ತದನಂತರ ನಿಮ್ಮ ಅರ್ಜಿ ಸಂಖ್ಯೆ ಅಥವಾ ಕಾಲೇಜು ವಿವರವನ್ನು ಭರ್ತಿ ಮಾಡಿ. ತದನಂತರ ವೀಕ್ಷಿಸಬಹುದು. ಅರ್ಜಿಯ ಸ್ಥಿತಿ ವೀಕ್ಷಿಸಲು ಈ ಲಿಂಕ್ : https://sw.kar.nic.in/swprizemoney/WebPages/ApplicationStatus.aspx

ವಿವಿಧ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳು ಈ ಮೇಲಿನ ನಿಯಮಗಳ ಅನುಸಾರ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ.

5 Comments
  1. MichaelLiemo says

    ventolin salbutamol: Ventolin inhaler price – ventolin proventil
    ventolin order online without prescription

  2. Josephquees says

    neurontin capsules 100mg: neurontin 200 – neurontin pills

  3. Josephquees says

    drug neurontin 200 mg: medication neurontin – purchase neurontin online

  4. Josephquees says

    gabapentin buy: neurontin 800 mg tablets – neurontin cost in singapore

  5. Timothydub says

    best online pharmacies in mexico: medicine in mexico pharmacies – mexican mail order pharmacies

Leave A Reply

Your email address will not be published.