ವಯಸ್ಸು 30ರ ನಂತರವೂ ಮೊಡವೆ ಸಮಸ್ಯೆ ಇದೆಯೇ? ಹಾಗಾದರೆ ಇದನ್ನ ತಡೆಗಟ್ಟಲು ಏನು ಮಾಡಬೇಕು?
ಮೊಡವೆ ಸಮಸ್ಯೆಗಳು ಹದಿಹರೆಯದ ಪ್ರಾಯದಿಂದ ಶುರುವಾಗಿ ಯೌವ್ವನದ ಪ್ರಾಯದ ತನಕ ಇರುತ್ತದೆ. ಆಮೇಲೆ ನಿಧಾನವಾಗಿ ದೂರಾಗುತ್ತದೆ. ಆದರೆ ಕೆಲವರಿಗೆ ಹದಿಹರೆಯದ ಪ್ರಾಯದಲ್ಲಿರದ ಮೊಡವೆ ಸಮಸ್ಯೆಯು 30-40 ಪ್ರಾಯದಲ್ಲಿ ಕಂಡುಬರುತ್ತದೆ. ಇದಕ್ಕೆಲ್ಲಾ ಕಾರಣವೇನು? ಇದನ್ನು ಹೇಗೆ ತಡೆಗಟ್ಟಬಹುದು? ಇದಕ್ಕೆಲ್ಲಾ ಉತ್ತರ ಇಲ್ಲಿದೆ.
ವಯಸ್ಕರಲ್ಲಿ ಅಂದರೆ 30 ವರ್ಷ ದಾಟಿದವರಲ್ಲಿ ಕಂಡು ಬರುವ ಈ ಮೊಡವೆಯನ್ನು ಅಡಲ್ಟ್ ಏಕ್ನೆ ಎಂದು ಕರೆಯುತ್ತಾರೆ. ಈ ಮೊಡವೆ ಸಮಸ್ಯೆಯಿಂದಾಗಿ ಮುಖದಲ್ಲಿ ರಂಧ್ರಗಳು, ಕಲೆಗಳು ಬೀಳುವುದು, ಹೀಗಾಗಿ ಮುಖದ ಅಂದವೇ ಹಾಳಾಗುತ್ತದೆ. ಅಲ್ಲದೇ ಇದು ಟೀನೇಜ್ ಮೊಡವೆ ಸಮಸ್ಯೆಗಿಂತ ತುಂಬಾ ಗಂಭೀರ ಸಮಸ್ಯೆಯಾಗಿದೆ.
ಹದಿಹರೆಯದ ಪ್ರಾಯದಲ್ಲಿ ಮೊಡವೆ ಬಂದರೆ ಅದರ ಕಲೆ ಉಳಿಯುವುದಿಲ್ಲ. ಏಕೆಂದರೆ ಹದಿ ಹರೆಯದ ಪ್ರಾಯದ ಮೊಡವೆ ತ್ವಚೆ ಮೇಲ್ಪದರದಲ್ಲಿ ಕಂಡು ಬರುತ್ತದೆ. ಅದೇ ವಯಸ್ಕರಲ್ಲಿ ಮೊಡವೆ ತ್ವಚೆಯು ಒಳ ಪದರ (ಡರ್ಮಿಸ್ಟ್)ದಲ್ಲಿ ಮೊಡವೆ ಎದ್ದು ಮೇಲಕ್ಕೆ ಬರುತ್ತದೆ.
ಹಣೆ, ಗಲ್ಲ, ಕೆನ್ನೆಯ ಮೇಲ್ಭಾಗ, ಬೆನ್ನು, ಕೈಗಳಲ್ಲಿ ಈ ಮೊಡವೆ ಹೆಚ್ಚಾಗಿ ಕಂಡು ಬರುತ್ತದೆ. ಮೊಡವೆ ಬಂತೆಂದು ಅದನ್ನು ಚಿವುಟುವುದು, ಮುಟ್ಟುವುದು ಮಾಡಲೇಬಾರದು. ಈ ರೀತಿ ಮಾಡಿದರೆ ಮೊಡವೆ ಒಂದು ಬರುವಲ್ಲಿ 3-4 ಮೊಡವೆಗಳು ಕಂಡು ಬರುತ್ತದೆ.
ಅಡಲ್ಟ್ ಏಕ್ನೆಯನ್ನು ತಡೆಗಟ್ಟಲು ಕೆಲವೊಂದು ಸರಳ ಉಪಾಯಗಳು ಇಲ್ಲಿವೆ.
ಮಾನಸಿಕ ಒತ್ತಡ:- ವಯಸ್ಕರಾದಾಗ ಸಂಸಾರದ, ಕೆಲಸದ ಇಂತಹ ಹಲವಾರು ಒತ್ತಡಗಳಿರುತ್ತದೆ. ಆದರೆ ಆ ಒತ್ತಡಗಳನ್ನು ಮನಸ್ಸಿಂದ ಹೊರಹಾಕದಿದ್ದರೆ ಮೊಡವೆ ಸಮಸ್ಯೆ ಮಾತ್ರವಲ್ಲದೇ ಆರೋಗ್ಯ ಸಮಸ್ಯೆಯೂ ಹೆಚ್ಚುವುದು. ಮಾನಸಿಕ ಒತ್ತಡ ಕಡಿಮೆ ಮಾಡಲು
ಧ್ಯಾನ, ಯೋಗ, ಹಾಡು ಕೇಳುವುದು, ಮಕ್ಕಳಿದ್ದರೆ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಾಲ ಕಳಿಯುವುದು ಹೀಗೆ ಮನಸ್ಸಿಗೆ ನೆಮ್ಮದಿ ನೀಡುವುದನ್ನು ಮಾಡಿ.
ನಿದ್ದೆ ಮತ್ತು ವ್ಯಾಯಾಮ :- ನಿದ್ದೆಯು ಮಾನಸಿಕ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಮಾಮೂಲಿ ಮಲಗುವುದಕ್ಕಿಂತ ಸ್ವಲ್ಪ ಬೇಗ ಮಲಗಿದರೆ ಉತ್ತಮ ಸಾಧ್ಯವಾದರೆ 9.30 ಒಳಗೆ ನಿದ್ದೆ ಮಾಡಿ. ದಿನಾ 30 ನಿಮಿಷದಂತೆ ವಾರದಲ್ಲಿ 5 ಬಾರಿ ವ್ಯಾಯಾಮವನ್ನು ಮಾಡಿ.
ಸೂಕ್ತವಾದ ಆಹಾರ: ಉತ್ತಮ ಆಹಾರ ಸೇವನೆಯಿಂದ ನಮ್ಮ ಕೆಲವೊಂದು ಆರೋಗ್ಯದ ಸಮಸ್ಯೆಯನ್ನು ಬಗೆಹರಿಸುತ್ತದೆ. ಮೊಡವೆ ಸಮಸ್ಯೆಗೆ ಪ್ರತಿದಿನ ಸ್ವಲ್ಪ ಕೊಬ್ಬರಿ ತಿನ್ನಿ,ಬಾಳೆ ಹೂವಿನ ಪಲ್ಯವನ್ನು ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಮಾಡಿ ತಿನ್ನಿ. ಸೀಸನಲ್ ಹಣ್ಣುಗಳನ್ನು ಸೇವಿಸಿ.