Rashmika Mandanna : ಇಷ್ಟೊಂದು ನೋವನ್ನು ಹೇಗೆ ತಡೆದುಕೊಳ್ಳಲಿ?- ಸುದೀರ್ಘ ಪೋಸ್ಟ್ ಹಾಕಿದ ರಶ್ಮಿಕಾ ಮಂದಣ್ಣ! ಯಾರಿಗಾಗಿ?

ರಶ್ಮಿಕಾ ಅಂದ್ರೆ ಟ್ರೋಲ್ , ಟ್ರೋಲ್ ಅಂದ್ರೆ ರಶ್ಮಿಕಾ ಮಂದಣ್ಣ. ಹೌದು, ಒಂದಿಲ್ಲೊಂದು ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರು ಟ್ರೋಲ್​ (Rashmika Mandanna Troll) ಆಗುತ್ತಲೇ ಇರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಹೊರಟು, ಬಾಲಿವುಡ್‌ವರೆಗೆ ಸಾಲುಸಾಲು ಸಿನಿಮಾ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದೇ ಸಖತ್ ಫೇಮಸ್.

ಸೋಶಿಯಲ್​ ಮೀಡಿಯಾದಲ್ಲಿ ಕೆಲವೊಂದು ಜನರಿಂದ ನಟಿ ಯಾವಾಗಲೂ ಟಾರ್ಗೆಟ್​ ಆಗುತ್ತಾರೆ. ಹಾಗಾಗಿ ಅಂಥವರ ಬಗ್ಗೆ ರಶ್ಮಿಕಾ ಮಂದಣ್ಣ (Rashmika Mandanna) ಬಹಿರಂಗ ಪತ್ರ ಬರೆದಿದ್ದಾರೆ. ತಮಗೆ ತೊಂದರೆ ನೀಡಿದ ಮತ್ತು ಮನಸ್ಸಿಗೆ ನೋವು ಮಾಡಿದವರ ಬಗ್ಗೆ ಅವರು ವಿವರವಾಗಿ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ರಶ್ಮಿಕಾ ಈಗ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ (Rashmika Mandanna Instagram) ಈ ಕುರಿತು ಅವರು ಪೋಸ್ಟ್​ ಮಾಡಿದ್ದಾರೆ.

“ನನಗೆ ಕೆಲವು ವಿಚಾರಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ತೊಂದರೆ ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು” ಎಂದು ರಶ್ಮಿಕಾ ಮಂದಣ್ಣ ಅವರು ಬರಹ ಆರಂಭಿಸಿದ್ದಾರೆ. ‘ವೃತ್ತಿ ಜೀವನ ಆರಂಭ ಆದಾಗಿನಿಂದಲೂ ನನ್ನನ್ನು ದ್ವೇಷಿಸಲಾಗುತ್ತಿದೆ. ಟ್ರೋಲ್​ ಮತ್ತು ನೆಗೆಟಿವಿಟಿಗೆ ನಾನು ಪಂಚಿಂಗ್​ ಬ್ಯಾಗ್​ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಎಂಬಂತಿಲ್ಲ. ನನ್ನ ಬಗ್ಗೆ ನಿಮಗೆ ಉತ್ತಮ ಅಭಿಪ್ರಾಯ ಇಲ್ಲ ಎಂದ ಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

‘ನಾನು ಎಲ್ಲರನ್ನು ರಂಜಿಸಲು ನಾನು ಸತತ ಪ್ರಯತ್ನಪಡುತ್ತಿದ್ದೇನೆ. ನಾನು ಮತ್ತು ನೀವು ಇಬ್ಬರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನ ಪಡುತ್ತಿದ್ದೇ‌ನೆ. ನಾನು ಹೇಳಿಲ್ಲದೇ ಇರುವ ವಿಚಾರಕ್ಕೆ ನನ್ನನ್ನು ಟ್ರೋಲ್​ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ’ ಎಂದು ರಶ್ಮಿಕಾ ಅವರು ತಮ್ಮ ಬೇಸರ ತೋಡಿಕೊಂಡಿದ್ದಾರೆ.

‘ಸಂದರ್ಶನಗಳಲ್ಲಿ ನಾನು ಹೇಳಿದ್ದನ್ನು ನನ್ನ ವಿರುದ್ಧವೇ ತಿರುಗಿಸಲಾಗಿದೆ. ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಆಗುವಂತಹ ತಪ್ಪು ಕಥೆಗಳನ್ನು ಇಂಟರ್​ನೆಟ್​ನಲ್ಲಿ ಹರಡಿಸಲಾಗಿದೆ. ಒಳ್ಳೆಯ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ. ಅದರಿಂದ ಬೆಳವಣಿಗೆ ಸಾಧ್ಯ. ಆದರೆ ನೆಗೆಟಿವಿಟಿ ಮತ್ತು ದ್ವೇಷದಿಂದ ಏನು ಸಾಧ್ಯ’ ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಈ ಬರಹ ವೈರಲ್​ ಆಗಿದೆ.

https://www.instagram.com/p/CktPLqGp_1m/?utm_source=ig_web_copy_link

Leave A Reply

Your email address will not be published.