ನೂತನ ಮನೆಗೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನ!

Share the Article

ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಾ ಇರುವ ಡಾರ್ಲಿಂಗ್ ಕೃಷ್ಣ ಇದೀಗ ನಟ, ನಿರ್ದೇಶನದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತ ಇದ್ದಾರೆ.

ಇದಾದ ನಂತರ ಜೋಡಿಯ ಮೇಲೆ ಲವ್  ಮಾಕ್ಟೈಲ್ ಸಿನಿಮಾ  ತೆರೆಯ ಮೇಲೆ ಬಂದಿತು. ಇದಾದ ನಂತರ ಜೋಡಿ ಮತ್ತು ಸಿನಿಮಾ ಸಖತ್ ಹಿಟ್ ಆಯ್ತು. ಇದರಿಂದ ಲವ್
ಮಾಕ್ಟೈಲ್ ಪಾರ್ಟ್ 2 ಕೂಡ ಬಂತು. ಹಿಟ್ ಕೂಡ ಕಂಡಿದೆ. ಇದ್ರೆ ಇಂತ ಜೋಡಿ ಇರ್ಬೇಕು ಅಂತ ಅನಿಸೋ ಹಾಗೆ ಇದ್ದಾರೆ ಮಿಲನ ಮತ್ತು ಡಾರ್ಲಿಂಗ್ ಕೃಷ್ಣ.

ಇದೀಗ ಈ ಜೋಡಿ ನೂತಾನ ಮನೆಯನ್ನು ಕಟ್ಟಿಸಿ ಅದಕ್ಕೆ ನಾಮರಕರಣ ಕೂಡ ಮಾಡಿದ್ದಾರೆ.   ಮನೆಗೆ ‘ಕ್ರಿಸ್ಮಿ ನೆಸ್ಟ್’ ಎಂದು ಹೆಸರಿಟ್ಟಿದ್ದಾರೆ. ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಹೆಸರುಗಳ ಮೊದಲೆರಡು ಅಕ್ಷರಗಳನ್ನು ತೆಗೆದುಕೊಂಡು ಈ ಹೆಸರನ್ನು ಇಡಲಾಗಿದ್ದು, ‘ಕೃಷ್ಣ ಹಾಗೂ ಮಿಲನ ಗೂಡು’ ಎಂಬರ್ಥವನ್ನು ಈ ಹೆಸರು ನೀಡಲಿದೆ.

ಒಟ್ಟಿನಲ್ಲಿ ಹೀಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ತಮ್ಮ ಗೃಹ ಪ್ರವೇಶದ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು ಬೆಳವಣಿಗೆ ಎಂದರೆ ಹೀಗಿರಬೇಕಪ್ಪಾ, ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗ ಪ್ರವೇಶಿಸಿ ಸಣ್ಣ ಪುಟ್ಟ ಪಾತ್ರ ಮಾಡಿ ನಂತರ ನಾಯಕ ನಟನಾಗಿ ಬಡ್ತಿ ಪಡೆದು ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಬೆಳೆದು ಸದ್ಯ ಸುಂದರ ಸಂಸಾರ ನಡೆಸುತ್ತಾ ಭವ್ಯ ಮನೆ ಕಟ್ಟುವ ಮಟ್ಟಕ್ಕೆ ಡಾರ್ಲಿಂಗ್ ಕೃಷ್ಣ ಬೆಳೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಅತ್ತ ಮಿಲನ ನಾಗರಾಜ್ ಕುರಿತಾಗಿಯೂ ಇದೇ ರೀತಿಯ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನೀವು ಕೂಡ ಈ ಜೋಡಿಯನ್ನು ನೋಡಿ ಮತ್ತು ದೃಷ್ಟಿ ತೆಗೆಯಿರಿ.

Leave A Reply

Your email address will not be published.