Viral video : ಭಜನೆಯ ಮೂಲಕ ಗಣಿತ ಪಾಠ | ಅಚ್ಚರಿಗೊಂಡ ನೆಟ್ಟಿಗರು- ವೀಡಿಯೊ ವೈರಲ್!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೋ ವಿಶಿಷ್ಟ ವೀಡಿಯೋಗಳು ಕಾಣಸಿಗುತ್ತದೆ. ಅವುಗಳಲ್ಲಿ ಕೆಲವು ಅತ್ಯುತ್ತಮ ಶಿಕ್ಷಕರು ವಿಶೇಷ ರೀತಿಯಲ್ಲಿ, ಮಕ್ಕಳನ್ನು ಮನರಂಜಿಸುತ್ತಾ ಬೋಧನೆ ಮಾಡುವುದನ್ನ ಕಾಣಬಹುದು. ಈ ರೀತಿಯ ಬೋಧನಾ ಕ್ರಮವು ಎಷ್ಟು ಪರಿಣಾಮ ಬೀರಿದೆ ಎಂದರೆ ತರಗತಿಯಲ್ಲಿ ಹಾಜರಿರುವ ಮಗು ಅದನ್ನ ಆನಂದಿಸುವುದು ಮತ್ತು ಓದುವುದನ್ನ ಕಾಣಬಹುದು.

ಇದೀಗ ಶಿಕ್ಷಕರೊಬ್ಬರು ಮಕ್ಕಳಿಗೆ ಗಣಿತ ವಿಷಯವನ್ನು ಭಜನೆಯ ಮೂಲಕ ಹೇಳಿಕೊಡುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಗಣಿತ ಎಂದರೆ ಮಕ್ಕಳಿಗೆ ಅದೊಂದು ಜಗಿಯಲಾಗದ ಕಬ್ಬಿಣದ ಕಡಲೇಕಾಯಿ. ಅಷ್ಟೊಂದು ಕಠಿಣವಾದ ವಿಷಯವನ್ನು ಮಕ್ಕಳಿಗೆ ಆಟವನ್ನಾಗಿ ಮಾಡಿದ್ದಾರೆ. ಗಣಿತವನ್ನು ಭಜನೆಯ ಮೂಲಕ ಕಲಿಸುತ್ತಿದ್ದಾರೆ!!

ಈ ವಿಡಿಯೋದಲ್ಲಿ ಶಿಕ್ಷಕರು ಭಜನೆ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಪಾಠಗಳನ್ನು ಕಲಿಸುತ್ತಿದ್ದೂ, ವಿದ್ಯಾರ್ಥಿಗಳು 8 ಮತ್ತು 9ರ ಮಗ್ಗಿಗಳನ್ನ ಸುಲಭವಾಗಿ ಶಿಕ್ಷಕರೊಂದಿಗೆ ಹಾಡುತ್ತಿದ್ದಾರೆ.

ಈ ವೀಡಿಯೊವನ್ನು ಅಂಕಿತ್ ಯಾದವ್ ಬೋಜಾ ಎಂಬ ವ್ಯಕ್ತಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ತುಂಬಾ ಆಶ್ಚರ್ಯಚಕಿತರಾಗಿದ್ದು, ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಗಣಿತವನ್ನ ವಿಶಿಷ್ಟ ರೀತಿಯಲ್ಲಿ ಕಲಿಸುವ ಶಿಕ್ಷಕರನ್ನ ಕೆಲವು ಬಳಕೆದಾರರು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಬಳಕೆದಾರರಿಂದ ಮೆಚ್ಚುಗೆ ಪಡೆದು 86 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದಿದೆ. ಇದಲ್ಲದೆ, ಈ ವೀಡಿಯೊ ಟ್ವಿಟ್ಟರ್ನಲ್ಲಿ ಸುಮಾರು 7 ಸಾವಿರ ಲೈಕ್ ಗಳನ್ನು ಪಡೆದಿದೆ.

Leave A Reply

Your email address will not be published.