Video Viral : ಬುರ್ಜ್ ಖಲೀಫಾ ಸಮೀಪದ 35 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ!!!

ನಾವು ಎಷ್ಟೋ ಕಟ್ಟಡಗಳನ್ನು ನೋಡಿರಬಹುದು. ಅದಲ್ಲದೆ ದೊಡ್ಡ ದೊಡ್ಡ ಕಟ್ಟಡಗಳಿಗೆ ಅನಾಹುತ ಆಗಿರುವುದನ್ನು ಕೆಲವೊಮ್ಮೆ ನೋಡಿರಬಹುದು, ಕೇಳಿರಬಹುದು ಆದರೆ ಕಣ್ಣಿಗೆ ಎಟುಕದ ಜಗತ್ತಿನಲ್ಲೇ ಹೆಚ್ಚು ಪ್ರಸಿದ್ಧಿ ಮತ್ತು ಎತ್ತರವಾದ ಕಟ್ಟಡ ಬುರ್ಜ್ ಖಲೀಫಾ ಸಮೀಪದಲ್ಲಿರುವ 35 ಅಂತಸ್ತಿನ ಕಟ್ಟಡವೊಂದರಲ್ಲಿ ಸೋಮವಾರ ನವೆಂಬರ್ 7ರಂದು ಬೆಳಗ್ಗೆ 4 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದಲ್ಲಿದ್ದ ನಿವಾಸಿಗಳನ್ನು ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

 

35 ಅಂತಸ್ತಿನ 8 ಬೌಲೆವರ್ಡ್ ವಾಕ್ ಟವರ್‌ನ ಒಂದು ಬದಿಯಲ್ಲಿ ಅಡಿಯಿಂದ ಮುಡಿಯವರೆಗೂ ಬೆಂಕಿಯ ಜ್ವಾಲೆ ಆವರಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕಟ್ಟಡ ವಿಶ್ವದ ಅಂತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಪಡೆದಿರುವ ಬುರ್ಜ್ ಖಲೀಫಾ ಸಮೀಪದಲ್ಲಿದೆ.

https://twitter.com/AmirAliNemati07/status/1589458220950511616?ref_src=twsrc%5Etfw%7Ctwcamp%5Etweetembed%7Ctwterm%5E1589458220950511616%7Ctwgr%5E9f298c370e1d687c9d1929e2f6d2e01e3799888e%7Ctwcon%5Es1_c10&ref_url=https%3A%2F%2Fwww.vijayavani.net%2Fmassive-fire-races-up-35-storey-dubai-tower-near-burj-khalifa%2F

ಜಗತ್ತಿನ ಅತಿದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಅರಬ್‌ನ ಎಮಾರ್ ಕಂಪನಿ ನಿರ್ಮಿಸಿರುವ 8 ಬೌಲೆವರ್ಡ್ ವಾಕ್ ಎಂದು ಕರೆಯಲ್ಪಡುವ ಸರಣಿ ಕಟ್ಟಡಗಳ ಒಂದು ಭಾಗ ಅಗ್ನಿ ಅವಘಡಕ್ಕೆ ತುತ್ತಾಗಿದೆ. ದುಬೈ ಪೊಲೀಸರು ಮತ್ತು ಸಿವಿಲ್ ಡಿಫೆನ್ಸ್ಗೆ ಬೆಂಕಿ ಅವಘಡದ ಬಗ್ಗೆ ತಕ್ಷಣವೇ ಮಾಹಿತಿ ತಿಳಿದಿಲ್ಲ ಎಂದು ಹೇಳಲಾಗಿದೆ.

ದುಬೈನ ಗಗನಚುಂಬಿದ ಕಟ್ಟಡಗಳಲ್ಲಿ ಸರಣಿ ಬೆಂಕಿ ಕಾಣಿಸಿಕೊಂಡಿರುವುದು ಕಟ್ಟಡಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿಗಳು ಹೇಳಿವೆ.

ಈಗಾಗಲೇ ಕಳೆದ ಏಪ್ರಿಲ್‌ನಲ್ಲಿ ಬುರ್ಜ್ ಖಲೀಫಾ ಎದುರು ಇರುವ ದುಬೈನ ಐಷಾರಾಮಿ ಸ್ವಿಸ್ಫೋಟೆಲ್ ಅಲ್ ಮುರೂಜ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಯಾವುದೇ ಅಪಾಯಗಳು ಸಂಭವಿಸಿರಲಿಲ್ಲ. 2015ರ ಹೊಸ ವರ್ಷದಂದು ಬುರ್ಜ್ ಖಲೀಫಾ ಸಮೀಪ ಇರುವ ಅತ್ಯಂತ ಉನ್ನತ ಮಟ್ಟದ ಹೋಟೆಲ್ ಮತ್ತು ವಸತಿ ಸಮುಚ್ಛಯವಿರುವ ಅಡ್ರೆಸ್ ಡೌನ್‌ಟೌನ್ ಕಟ್ಟಡವೂ ಸಹ ಅಗ್ನಿ ಅನಾಹುತಕ್ಕೀಡಾಗಿತ್ತು. ಪ್ರಸ್ತುತ ಇದೀಗ ಬೌಲೆವರ್ಡ್ ವಾಕ್ ಕಟ್ಟಡದ ಮೇಲಿನ ಅಂತಸ್ತಿಗೆ ಬೆಂಕಿ ಹಬ್ಬಿರುವ ವಿಷಯ ಸುದ್ದಿ ಆಗಿದೆ.

Leave A Reply

Your email address will not be published.