ಅರೇ ಇದೇನಿದು? ವಿದ್ಯಾರ್ಥಿನಿಯ ಮೇಲೆ ಲವ್ | ಲಿಂಗ ಪರಿವರ್ತನೆ ಮಾಡಿಕೊಂಡ ಶಾಲಾ ಶಿಕ್ಷಕಿ !

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಲಿಂಗ, ಜಾತಿ ಬೇರೆಲ್ಲ ಕಟ್ಟುಪಾಡುಗಳನ್ನು ಮೀರಿದ್ದು ಎಂದು ನಿರೂಪಿಸುವ ಅನೇಕ ದೃಷ್ಟಾಂತಗಳನ್ನು ನಾವು ಕಂಡಿದ್ದೇವೆ.. ಪ್ರೀತಿಸಿದವರಿಗಾಗಿ ಮನೆ, ಸಮಾಜದವರ ಎದುರು ಹಾಕಿಕೊಂಡು ಜೀವನ ಕಟ್ಟಿಕೊಂಡಿರುವರು ಕೂಡ ಇದ್ದು, ಇದರ ನಡುವೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ಮನೆಯವರಿಂದಲೇ ಬಲಿಯಾದ ಘಟನೆಗಳು ಕೂಡ ಇದೆ ಎಂಬುದು ಅಷ್ಟೆ ಸತ್ಯ.

 

ಪ್ರೀತಿಗೆ ಕಣ್ಣಿಲ್ಲ ಎಂಬ ಸಂದೇಶ ಸಾರುವ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೌದು. ಮೀರಾ ತನ್ನದೇ ಶಾಲೆಯ ವಿದ್ಯಾರ್ಥಿನಿ ಕಲ್ಪನಾಳನ್ನು ಪ್ರೀತಿಸಿದ್ದಾಳೆ. ಈ ಪ್ರೀತಿಯ ಬೇರು ತುಂಬಾ ಆಳವಾಗಿ ಬೇರೂರಿದ್ದು, ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೀರಾ, ಲಿಂಗ ಪರಿವರ್ತನೆ ಮಾಡಿಕೊಂಡು ಗಂಡಾಗಿ ಬದಲಾಗಿದ್ದಾರೆ. ಇದಲ್ಲದೆ, ಎರಡು ದಿನಗಳ ಹಿಂದಷ್ಟೇ ತಮ್ಮ ವಿದ್ಯಾರ್ಥಿನಿ ಕಲ್ಪನಾ ಅವರನ್ನು ಮದುವೆಯಾಗಿ ಸಪ್ತಪದಿ ತುಳಿದಿದ್ದಾರೆ.

ಪ್ರೀತಿಗಾಗಿ ಒಬ್ಬ ವ್ಯಕ್ತಿ ಏನು ಬೇಕಾದರು ಮಾಡಬಲ್ಲ!!!. ಜೊತೆಗೆ ಪ್ರೀತಿಗಾಗಿ ತನ್ನ ಸರ್ವಸ್ವವನ್ನೇ ಕಳೆದುಕೊಂಡವರನ್ನು ಕಂಡಿದ್ದೇವೆ. ಆದರೆ, ರಾಜಸ್ಥಾನದ ಭರತ್‌ಪುರದಲ್ಲಿ ಪ್ರೀತಿಗಾಗಿ ಶಾಲಾ ಶಿಕ್ಷಕಿಯೊಬ್ಬಳು ಲಿಂಗ ಪರಿವರ್ತನೆ ಮಾಡಿಕೊಂಡಿರುವ ಅಪರೂಪದ ಘಟನೆ ನಡೆದಿದೆ.

ಪ್ರೀತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಗಂಡಾಗಿ ಪರಿವರ್ತನೆಯಾದ ಶಾಲಾ ಶಿಕ್ಷಕಿ, ತನ್ನ ಶಾಲೆಯ ವಿದ್ಯಾರ್ಥಿನಿಯನ್ನೇ ವಿವಾಹವಾಗಿದ್ದಾರೆ. ದೈಹಿಕ ಶಿಕ್ಷಕಿ ಮೀರಾ, ದೀಗ್ ಉಪವಿಭಾಗದ ಮೋತಿ ಕಾ ನಾಗ್ಲಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಶಾಲೆಯಲ್ಲಿ ಓದುತ್ತಿರುವ ಕಲ್ಪನಾ ಎಂಬ ವಿದ್ಯಾರ್ಥಿನಿಗೆ ಮೀರಾ ಕಬಡ್ಡಿ ಆಟವನ್ನು ಹೇಳಿಕೊಡುತ್ತಿದ್ದರು. ಇದಲ್ಲದೆ, ಕಲ್ಪನಾ ಅವರನ್ನು ರಾಜ್ಯಮಟ್ಟದ ಕಬಡ್ಡಿ ಪ್ಲೇಯರ್‌ ಮಾಡುವ ನಿಟ್ಟಿನಲ್ಲಿ ಮೀರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಆಟದ ತರಬೇತಿ ಮಾಡುವ ವೇಳೆ ಶಿಕ್ಷಕಿಗೆ ವಿದ್ಯಾರ್ಥಿನಿ ಕಲ್ಪನಾ ಮೇಲೆ ಪ್ರೇಮಾಂಕುರವಾಗಿದೆ. ಕಬಡ್ಡಿ ಆಟವನ್ನು ಹೇಳಿಕೊಳ್ಳುವ ಸಮಯದಲ್ಲಿಯೇ ಮೀರಾ, ಕಲ್ಪನಾಳನ್ನು ಅತಿಯಾಗಿ ಪ್ರೀತಿ ಮಾಡಲು ಆರಂಭಿಸಿದ್ದು, ಪ್ರೀತಿ ಎಲ್ಲಿಯ ತನಕ ಹೋಗಿ ಮುಟ್ಟಿತ್ತೆಂದರೆ, ಮೀರಾ ತನ್ನ ಲಿಂಗ ಪರಿವರ್ತನೆ ಮಾಡಿಕೊಂಡು ಆರವ್‌ ಹೆಸರಿನ ಹುಡುಗನಾಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಆರವ್‌ ಹಾಗೂ ಕಲ್ಪನಾಳ ವಿವಾಹವಾಗಿದ್ದು, ಅವರ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಮದುವೆಯ ಚಿತ್ರಗಳಲ್ಲಿ ಇಬ್ಬರು ಖುಷಿ ಖುಷಿಯಾಗಿ ಚಿತ್ರ ತೆಗೆಸಿಕೊಂಡಿದ್ದಾರೆ.

ಮೀರಾ ಆರವ್‌ ಆಗಿ ಬದಲಾಗಿ ಕಲ್ಪನಾಳ ಕೈ ಹಿಡಿದ ಕಾರಣದಿಂದ ಇಬ್ಬರೂ ಕುಟುಂಬಗಳು ಖುಷಿಯಾಗಿದೆ. ಲಿಂಗ ಬದಲಾವಣೆ ಮಾಡಿಕೊಂಡ ನಂತರ ಮೀರಾ ತನ್ನ ಹೆಸರನ್ನು ಆರವ್‌ ಆಗಿ ಮಾಡಿಕೊಂಡಿರುವುದಾಗಿ ಹೇಳಿದ್ದು, ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದೆ ಎಂದು ಹೇಳಿದ್ದಾರೆ. ಅದೇ ಗ್ರಾಮದ ವಿದ್ಯಾರ್ಥಿನಿ ಕಲ್ಪನಾ ಕಬಡ್ಡಿ ಆಟದಲ್ಲಿ ನಿಪುಣರಾಗಿದ್ದು, ಆಟ ಹೇಳಿಕೊಡುತ್ತಾ ನಾವಿಬ್ಬರು ಪ್ರೀತಿಯಲ್ಲಿ ಬಿದ್ದುದಾಗಿ ಹೇಳಿಕೊಂಡಿದ್ದಾರೆ.

ಆರವ್‌ ಪ್ರಕಾರ ಮೊದಲಿನಿಂದಲೂ ತಾನೊಬ್ಬ ಹುಡುಗ ಎಂಬ ಭಾವನೆ ಮೊದಲಿಂದಲೂ ಇದ್ದುದ್ದಾಗಿ ಹೇಳಿಕೊಂಡಿದ್ದಾರೆ. ತನಗೆ ಮೊದಲಿನಿಂದಲೂ ಲಿಂಗ ಬದಲಾಯಿಸಬೇಕೆಂಬ ಅಭಿಲಾಷೆ ಹೊತ್ತಿದ್ದೆ. 2012ರಲ್ಲಿ ಯಾರೋ ಲಿಂಗ ಪರಿವರ್ತನೆ ಮಾಡಿರುವ ಕುರಿತಾದ ವರದಿ ಕಂಡು ಅದಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆಗ ಯೂಟ್ಯೂಬ್ ಮೂಲಕ ಇದಕ್ಕಾಗಿಯೇ ಒಬ್ಬರು ಡಾಕ್ಟರ್ ಇರುವ ಬಗ್ಗೆ ಮಾಹಿತಿ ದೊರೆತಿದೆ. ದೆಹಲಿಯಲ್ಲಿ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಪಡೆದುಕೊಂಡಿದ್ದು, 2019 ರಿಂದ ಪ್ರಾರಂಭವಾಗಿ ಕೊನೆಯ ಶಸ್ತ್ರಚಿಕಿತ್ಸೆ 2021 ರಲ್ಲಿ ಮುಕ್ತಾಯ ಹೊಂದಿದೆ. ಹುಡುಗಿಯಾಗಿ ಜನಿಸಿದರು ಕೂಡ ತಾನೊಬ್ಬ ಹುಡುಗನೆಂಬ ಭಾವ ಮೊದಲಿನಿಂದಲೂ ಕಾಡುತ್ತಿತ್ತು.

ಹಾಗಾಗಿ, ಲಿಂಗವನ್ನು ಬದಲಾಯಿಸಿ ತನ್ನ ವಿದ್ಯಾರ್ಥಿನಿ ಕಲ್ಪನಾ ಅವರೊಂದಿಗೆ 2 ದಿನಗಳ ಹಿಂದೆ ವಿವಾಹವಾಗಿದ್ದಾರೆ. ಈಗ ನಮ್ಮ ಕುಟುಂಬ ಸದಸ್ಯರು ಸಂತೋಷವಾಗಿದ್ದಾರೆ ಎಂದು ಆರವ್‌ ಹೇಳಿದ್ದಾರೆ.

ಈ ಕುರಿತು ವಧು ಕಲ್ಪನಾ ಕೂಡ ಪ್ರತಿಕ್ರಿಯೆ ನೀಡಿದ್ದು, ತನ್ನ ಶಾಲೆಯಲ್ಲಿ ಮೀರಾ ದೈಹಿಕ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದರು. 10 ನೇ ತರಗತಿಯಿಂದ ತನಗೆ ಆಟಕ್ಕೆ ಸಹಾಯ ಮಾಡಿದ್ದು, ಕ್ರೀಡೆ ಕಬಡ್ಡಿ ಮತ್ತು ತಾನು ಇಂದು ಏನೇ ಆಗಿದ್ದರೂ ಕೂಡ ನನ್ನ ಪತಿಯಾದ ಆರವ್ ಕಾರಣ ಎಂದಿದ್ದಾರೆ.

ಜೊತೆಗೆ ಆರಂಭದಿಂದಲೂ ಅವರು ತನ್ನ ಸಂಗಾತಿಯಾಗಬೇಕೆಂದು ಬಯಸಿದ್ದೆ. ಇದಲ್ಲದೆ, ಅವರು ಸರ್ಜರಿ ಮಾಡಿಸಿಕೊಳ್ಳದೆ ಹುಡುಗನಾಗದೇ ಇದ್ದರೂ ಕೂಡ ಮೀರಾ ಹೆಸರಿನಲ್ಲೇ ಅವರನ್ನು ಮದುವೆಯಾಗುತ್ತಿದ್ದೆ ಎಂದಿದ್ದಾರೆ ನಾವು ಗುರುಗಳು ಮತ್ತು ಶಿಷ್ಯರು ಎಂದು ಜನರು ಹೇಳುವ ವಿಷಯವೂ ನಮ್ಮ ಮನಸ್ಸಿನಲ್ಲಿದ್ದರು ಕೂಡ ನಾವು ನಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಒಪ್ಪಿಸಿ ಮದುವೆಯಾಗಿದ್ದೇವೆ .

ಮೀರಾ ಅವರು ತನಗಾಗಿ ಲಿಂಗ ಬದಲಾಯಿಸಿಕೊಂಡು ಹುಡಗರಾಗಿದ್ದು, ಅತಿಯಾಗಿ ಪ್ರೀತಿ ಮಾಡುತ್ತಿದ್ದ ಕಾರಣ ಎರಡು ದಿನಗಳ ಮದುವೆ ಎಂಬ ಬಾಂಧವ್ಯಕ್ಕೆ ಅಣಿಯಾಗಿ ಸತಿ ಪತಿಯಾಗಿರುವ ಕುರಿತು ಸಂತೋಷ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.