ಟೈಟ್ ಗುರೂ | ಯುವತಿಯರ ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಕಿತ್ತಾಟ : ಕೂದಲು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರ video viral |

ಎಣ್ಣೆ ಪ್ರಿಯರ ಬಗ್ಗೆ ಒಂದಲ್ಲ ಒಂದು ವಿಚಾರ ಚರ್ಚೆಗೆ ಕಾರಣವಾಗುವುದು ಸಾಮಾನ್ಯ. ಎಣ್ಣೆಯ ಮಹಿಮೆ ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ!!.. ಎಣ್ಣೆ ಕುಡಿದವರಿಂದ ಆಗುವ ರಾದ್ದಂತಗಳು ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಗಂಡಸರು ಕುಡಿದು ಸಿಕ್ಕಿದಲ್ಲಿ ತೂರಾಡುತ್ತಾ ಹೊಸ ಪ್ರಹಸನ ಮಾಡುವುದು ಸಹಜ. ಆದರೆ, ಪುರುಷರಿಗೆ ನಾವೇನು ಕಡಿಮೆಯಿಲ್ಲ ಎಂದು ಬಿಂಬಿಸುವ ರೀತಿ ಮಹಿಳೆಯರು ಕೂಡ ಎಣ್ಣೆಯ ದಾಸರಾಗಿ ಕೈ ಮಿಲಾಯಿಸುವ ಘಟನೆಗಳು ಕೂಡ ಇವೆ.

 

ಇದೇ ರೀತಿಯ ಘಟನೆಯೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳಿಗೆ ನಾಲ್ವರು ಯುವತಿಯರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ಜಿಲ್ಲೆಯಲ್ಲಿ ನಡೆದಿದೆ.

ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಇಂದೋರ್‌ನ ಎಲ್‍ಐಜಿ ಛೇದಕದಲ್ಲಿ ನೆಲಕ್ಕುರುಳಿಸಿ, ಆಕೆಯ ಜುಟ್ಟು ಎಳೆದಾಡುತ್ತಾ, ಬೆಲ್ಟ್‌ನಿಂದ ಥಳಿಸಿರುವ ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಸಂತ್ರಸ್ತ ಯುವತಿ ಇಂದೋರ್‍ನ ಧೇನು ಮಾರುಕಟ್ಟೆಯಲ್ಲಿ ಕೀಟನಾಶಕ ಅಂಗಡಿಯಲ್ಲಿ ಮಾರಾಟಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಕುಡಿದು ಬಂದ ಯುವತಿಯರು ಸಂತ್ರಸ್ತೆಯ ಜುಟ್ಟು ಹಿಡಿದು ಎಳೆದಾಡಿ, ಮುಖಕ್ಕೆ ಗುದ್ದುತ್ತಾ, ಕಾಲಿನಿಂದ ಒದ್ದಿರುವ ಘಟನೆ ನಡೆದಿದೆ. ಇಷ್ಟೇ ಅಲ್ಲದೇ ಆಕೆಯನ್ನು ಥಳಿಸುತ್ತಿದ್ದರೆ, ಅಕ್ಕ, ಪಕ್ಕದಲ್ಲಿ ನಿಂತಿದ್ದ ಸ್ಥಳೀಯರು ಅಲ್ಲಿ ನಡೆಯುತ್ತಿದ್ದ ನಾಟಕ ಪ್ರಹಸನದ ಮಜಾ ತೆಗೆದುಕೊಳ್ಳುತ್ತಿದ್ದರೆ ವಿನಃ ಯಾರು ಕೂಡ ಈ ರೀತಿ ಹಲ್ಲೆ ನಡೆಸುವುದನ್ನು ನಿಲ್ಲಿಸಲು ಮುಂದಾಗಿಲ್ಲ.

ಯಾವುದೇ ಕಾರಣವಿಲ್ಲದೇ ಅಷ್ಟು ಜನ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇದೀಗ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.

Leave A Reply

Your email address will not be published.