ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ಇಣುಕುತ್ತಿರುವ ನಾಯಿ | ಆನಂದ್ ಮಹಿಂದ್ರ ಹಂಚಿಕೊಂಡ ವಿಡಿಯೋದಲ್ಲಿ ನಾಯಿ ವೀಕ್ಷಿಸಿದ್ದಾದರೂ ಏನು?

ಮನುಷ್ಯ ಅಂದಮೇಲೆ ಹೊಟ್ಟೆಕಿಚ್ಚು, ದ್ವೇಷ, ಜಗಳ ಕಾಮನ್. ಇಂತಹ ಲಕ್ಷಣವಿಲ್ಲದ ಮನುಜ ಮನುಷ್ಯನೇ ಅಲ್ಲ ಅಂದರೂ ತಪ್ಪಾಗಲಾರದು. ಅದೆಷ್ಟೇ ಒಳ್ಳೆತನ ಆತನಲ್ಲಿ ಇದ್ದರೂ ಇನ್ನೊಬ್ಬನಿಗೆ ತೊಂದರೆ ಆಗುವುದನ್ನು ನೋಡಲೆಂದೆ ಕ್ಯೂ ನಲ್ಲಿ ನಿಲ್ಲುತ್ತಾರೆ. ಆದ್ರೆ, ಬದಲಾವಣೆ ಏನಪ್ಪ ಅಂದ್ರೆ, ನಾಯಿ ಕೂಡ ಮನುಷ್ಯನಂತೆ ವರ್ತಿಸಲು ಶುರು ಮಾಡಿಕೊಂಡಿದೆ.

 

ಏನು ಹೇಳ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಬಹುಶಃ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ನೋಡಿದ್ರೆ, ಹೌದು ಎನ್ನದೆ ಇರಲು ಸಾಧ್ಯವಿಲ್ಲ. ಅಷ್ಟಕ್ಕೂ ವೈರಲ್ ಆದ ವಿಡಿಯೋದಲ್ಲಿ ನಾಯಿ ಮಾಡಿದ್ದಾದ್ರು ಏನು ಎಂದು ನೀವೇ ನೋಡಿ..

ಈ ವಿಡಿಯೋದಲ್ಲಿ ಗೋಡೆಯಿಂದಾಚೆಗೆ ನೆರೆಹೊರೆಯವರ ಗಲಾಟೆ ವೀಕ್ಷಿಸಲು ನಾಯಿ ಸರ್ಕಸ್​ ಪಡುವುದನ್ನು ನೋಡಬಹುದು. ಮರವೇರಲು ಆಗದೆ ಗೋಡೆಯನ್ನು ಹತ್ತಲು ಆಗದ ನಾಯಿ ಎರಡರ ಸಹಾಯದಿಂದ ನೆರೆಯ ಘಟನೆಯನ್ನು ವೀಕ್ಷಿಸಿದೆ. ಅಷ್ಟಕ್ಕೂ ಆ ನಾಯಿ ಗೋಡೆಗೆ ಎರಡು ಕಾಲು ಮತ್ತು ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ವೀಕ್ಷಿಸಿದ್ದು ಮಾತ್ರ ನೆರೆಮನೆಯ ಮಾತುಕತೆ.

ಈ ತಮಾಷೆಯ ವಿಡಿಯೋವನ್ನು ಆನಂದ್ ಕಂಪೆನಿಯ ಚೇರ್ಮನ್ ಆನಂದ್ ಮಹಿಂದ್ರ ಹಂಚಿಕೊಂಡಿದ್ದು, “T20WorldCup2022 ರ ಫೈನಲ್‌ನಲ್ಲಿ ಯಾರು ಇರುತ್ತಾರೆ ಎಂದು ಹೇಳಲು ನಾನು ಈ ನಾಯಿಯನ್ನು ಕೇಳಿದೆ. ಇದು ‘ಗೋಡೆ’ಯನ್ನು ಹತ್ತಲು ಈ ಚತುರ ಮಾರ್ಗವನ್ನು ಕಂಡುಹಿಡಿಯಿತು. ಅದು ಏನು ನೋಡಿತು ಎಂದು ನೀವು ಹೇಳಬಹುದೆ?” ಎಂದು ಬರೆದು ಆನಂದ್ ಮಹಿಂದ್ರ ಟ್ವೀಟ್ ತಮಾಷೆಯ ಶೀರ್ಷಿಕೆ ಕೊಟ್ಟಿದ್ದಾರೆ. ಒಟ್ಟಾರೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರನ್ನು ಮನಸಾರೆ ನಗಿಸಿದೆ.

Leave A Reply

Your email address will not be published.