SBI Alert : ನೀವೇನಾದರೂ ನಿಮ್ಮ ಪ್ಯಾನ್ ಸಂಖ್ಯೆ ನವೀಕರಿಸದಿದ್ದರೆ ಎಸ್ ಬಿಐ ಖಾತೆ ಬಂದ್ ಆಗುತ್ತಾ? ವೈರಲ್ ಸಂದೇಶದ ಸತ್ಯಾಂಶವೇನು?

ಕಳೆದ ಹಲವಾರು ವರ್ಷಗಳಿಂದ ಭಾರತವು ಡಿಜಿಟಲೀಕರಣದತ್ತ ಬಹಳ ವೇಗವಾಗಿ ಸಾಗುತ್ತಿದೆ. ಇದರೊಂದಿಗೆ ಸೈಬರ್ ಅಪರಾಧಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಸಂಖ್ಯೆ (PAN Card), ಆಧಾರ್ ಸಂಖ್ಯೆ (KYC update) ಹೆಸರಿನಲ್ಲಿ ಜನರಿಗೆ ಅನೇಕ ಸೈಬರ್ ಅಪರಾಧಿಗಳು ಸಂದೇಶಗಳನ್ನ ಕಳುಹಿಸಿ ವಂಚಿಸುತ್ತಿದ್ದಾರೆ. ಗ್ರಾಹಕರು ವೈಯಕ್ತಿಕ ಮಾಹಿತಿ ಹಂಚಿಕೊಂಡ ಖಾತೆಯಿಂದ ಲಕ್ಷಗಟ್ಟಲೆ ಹಣ ಡ್ರಾ ಮಾಡುತ್ತಾರೆ. ಹಾಗಾಗಿ ಅಂತಹ ನಕಲಿ ಸಂದೇಶಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಇದೀಗ ಸ್ಟೇಟ್ ಬ್ಯಾಂಕ್‌ಗೆ ಸಂಬಂಧಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


Ad Widget

Ad Widget

Ad Widget

Ad Widget
Ad Widget

Ad Widget

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೋಟಿಗಟ್ಟಲೆ ಖಾತೆದಾರರಿದ್ದಾರೆ. ನೀವು ಕೂಡ ಎಸ್‌ಬಿಐ ಖಾತೆದಾರರಾಗಿದ್ದರೆ, ನಿಮಗೆ ಪ್ಯಾನ್ ಸಂಖ್ಯೆಯನ್ನ ನವೀಕರಿಸುವ ಕುರಿತು ಹಲವು ರೀತಿಯ ಸಂದೇಶಗಳನ್ನ ಕಳುಹಿಸುತ್ತಿದ್ದರೆ, ನೀವು ಅಂತಹ ಕರೆಗಳು, ವಾಟ್ಸಾಪ್ ಮತ್ತು ಮೇಲ್ ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ಲಿಂಕ್‌ಗಳನ್ನ ಕ್ಲಿಕ್ ಮಾಡುವ ಮೂಲಕ ನಿಮ್ಮ ಮಾಹಿತಿಯನ್ನು ಹಂಚಿ ವಂಚನೆಗೆ ಬಲಿಯಾಗದಂತೆ ಎಚ್ಚರವಹಿಸಿ.


Ad Widget

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ಯಾನ್‌ಗೆ ಸಂಬಂಧಿಸಿದ ಮಾಹಿತಿಯನ್ನ ನವೀಕರಿಸಲು ಜನರನ್ನು ಕೇಳಲಾಗುತ್ತಿದೆ. ಪಿಐಬಿಯು ಜನರನ್ನು ಎಚ್ಚರಿಸಿದೆ. ಈ ವೈರಲ್ ಸಂದೇಶವನ್ನು ವಾಸ್ತವಿಕವಾಗಿ ಪರಿಶೀಲಿಸಿದ ಸರ್ಕಾರಿ ಸಂಸ್ಥೆ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ, ಈ ವಾಸ್ತವ ಪರಿಶೀಲನೆಯಲ್ಲಿ ಎಸ್‌ಬಿಐ ಯು ಪ್ಯಾನ್ ಸಂಖ್ಯೆಯನ್ನ ನವೀಕರಿಸಲು ಅನೇಕ ಗ್ರಾಹಕರಿಗೆ ಸಂದೇಶವನ್ನ ಕಳುಹಿಸಿದೆ. ಮತ್ತು ಸಂದೇಶದಲ್ಲಿ ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡದೆ ನೀವು ಮಾಹಿತಿಯನ್ನು ನವೀಕರಿಸದಿದ್ದರೆ, ನಿಮ್ಮ ಖಾತೆಯನ್ನ ನಿರ್ಬಂಧಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದು ಸಂಪೂರ್ಣವಾಗಿ ನಕಲಿ ಸಂದೇಶವಾಗಿದ್ದೂ ಯಾವುದೇ ಕಾರಣಕ್ಕೂ ಕರೆ, ಸಂದೇಶ ಅಥವಾ ಇಮೇಲ್ ಮೂಲಕ ತನ್ನ ಮಾಹಿತಿಯನ್ನ ನವೀಕರಿಸಲು ಬ್ಯಾಂಕ್ ಯಾವುದೇ ಗ್ರಾಹಕರನ್ನ ಕೇಳುವುದಿಲ್ಲ ಮತ್ತು ನಿಮ್ಮವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಎಂಬುದಾಗಿ ಪಿಐಬಿ ಎಚ್ಚರಿಕೆ ನೀಡಿದೆ.

ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಮರೆತು ಸಹ ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದರು. ಅನೇಕ ಬಾರಿ ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಖಾತೆ ವಿವರಗಳು ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳಂತಹ ನಿಮ್ಮ ವೈಯಕ್ತಿಕ ವಿವರಗಳನ್ನ ಕೇಳುವ ಸೈಬರ್ ಅಪರಾಧಿಗಳು ಫಾರ್ಮ್ ಭರ್ತಿ ಮಾಡಲು ಕೇಳುತ್ತಾರೆ.

ಆಗ ಮಾಹಿತಿಯನ್ನು ಶೇರ್ ಮಾಡಬೇಡಿ. ನೀವು ಅಂತಹ ಯಾವುದೇ ಸಂದೇಶವನ್ನು ಪಡೆದರೆ, ತಕ್ಷಣವೇ ನಿಮ್ಮ ದೂರನ್ನು ಕೆಳಗಿರುವ ಮೇಲ್ report.phishing@sbi.co.in ಮೂಲಕ ನೋಂದಾಯಿಸಿ. ಇದಲ್ಲದೆ, ನೀವು ಸೈಬರ್ ಅಪರಾಧಕ್ಕಾಗಿ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆದು ಮಾಡುವ ಮೂಲಕವೂ ಸಂಪರ್ಕಿಸಬಹುದು.

error: Content is protected !!
Scroll to Top
%d bloggers like this: