Honda WR -V SUV : ಹೋಂಡಾ‌ ಕಾರ್ಸ್ ನಿಂದ ಹೊಸ ಡಬ್ಲ್ಯು ಆರ್ ವಿ ಅನಾವರಣ!!!

ಹೋಂಡಾ ಕಾರ್ಸ್ ಕಂಪನಿ ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಡಬ್ಲ್ಯುಆರ್-ವಿ ಕಂಪ್ಯಾಕ್ಟ್ SUV ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಹೊಸ ಕಾರು ಬಿಡುಗಡೆಯಾಗಲಿದೆ.

 

ಭಾರತದಲ್ಲಿ ಪ್ರೀಮಿಯಂ ಕಾರುಗಳ ಮೂಲಕ ಜನಪ್ರಿಯತೆ ಪಡೆದಿರುವ ಹೋಂಡಾ ಕಾರ್ಸ್ ಕಂಪನಿಯು ಶೀಘ್ರದಲ್ಲಿ ಇನ್ನೊಂದು ಹೊಸ ಕಾರಿನ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಕಾರಿನ ಕಂಪನಿಗಳು ತೀವ್ರ ಪೈಪೋಟಿಯಲ್ಲಿವೆ. ಹಾಗಾಗಿ ಹೋಂಡಾ ಕಂಪನಿ ಈ ಬಾರಿ ಹೊಸ ಯೋಜನೆ ಹಾಕಿದೆ. ಹೊಸ ಕಾರಿನ ಮಾದರಿಯ ಯೋಜನೆಯನ್ನು ಈಗಾಗಲೇ ಖಚಿತಪಡಿಸಿರುವ ಹೋಂಡಾ ಕಂಪನಿ ಪ್ರಮುಖ ಕಂಪ್ಯಾಕ್ಟ್ ಎಸ್ ಯುವಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಈ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರಿಗಿಂತ ಹೆಚ್ಚಿನ ಉದ್ದಳತೆಯೊಂದಿಗೆ ವಿಶಾಲವಾದ ಕ್ಯಾಬಿನ್ ನಿಂದಾಗಿ ಹೊಸ ಲುಕ್ ಹೊಂದಿದೆ. ಕಾರಿನ ಮುಂಭಾಗದ ವಿನ್ಯಾಸವು ಈ ಬಾರಿ ಸಂಪೂರ್ಣವಾಗಿ ಬದಲಾವಣೆಯಾಗಿದ್ದು, ಬಲಿಷ್ಠ ಎಸ್ ಯುವಿ ವಿನ್ಯಾಸವು ಗ್ರಾಹಕರ ಕಣ್ಮನ ಸೆಳೆಯಲಿದೆ.

ಕಾರು ಹೊಸ ತಲೆಮಾರಿನ ಸಿಟಿ ಸೆಡಾನ್ ಮತ್ತು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಪ್ಲ್ಯಾಟ್ ಫಾರ್ಮ್ ಮೇಲೆ ನಿರ್ಮಾಣಗೊಂಡಿದೆ. ಕಂಪನಿಯು ಟ್ಯಾಪರಿಂಗ್ ರೂಫ್ ಲೈನ್, ಆ್ಯಂಗುಲರ್ ಟೈಲ್ ಗೇಟ್, ಸ್ಪೋರ್ಟಿ ಶೋಡ್ಡರ್ ಲೈನ್, ಬಾಡಿ ಕ್ಲ್ಯಾಡಿಂಗ್, ವ್ಹೀಲ್ ಆರ್ಚ್ ಮತ್ತು 16 ಇಂಚಿನ ಅಲಾಯ್ ವ್ಹೀಲ್ ಸೌಲಭ್ಯವನ್ನು ಪಡೆಯಲಿದೆ. ಮತ್ತು ಕಾರಿನ ಒಳಭಾಗದಲ್ಲಿ, ಸ್ಪೋರ್ಟಿ ವರ್ಷನ್ ನಲ್ಲಿ ಆಲ್ ಬ್ಲ್ಯಾಕ್ ಇಂಟಿರಿಯರ್, ಅನಲಾಗ್ ಡಯಲ್, 4.2 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ, ಮಲ್ಟಿ ಜೋನ್ ಕ್ಲೈಮೆಟ್ ಕಂಟ್ರೋಲ್ ಗಳನ್ನು ಹೊಂದಿದೆ.

ಹಾಗೇ ಪವರ್ ಫುಲ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ರೀತಿ ಹೊಸ ಕಾರು 121 ಬಿಎಚ್ ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಸಿಟಿ ಸೆಡಾನ್ ಮಾದರಿಯಲ್ಲಿನ ಗೇರ್ ಬಾಕ್ಸ್ ಆಯ್ಕೆಯನ್ನೇ ಹೊಸ ಕಾರಿನಲ್ಲಿಯೂ ಬಳಸಲಾಗಿದೆ.

ಇನ್ನೂ, ಈ ಹೊಸ ಕಾರು ಪರ್ಫಾಮೆನ್ಸ್ ಹಾಗೂ ಪ್ರೀಮಿಯಂ ಫೀಚರ್ಸ್ ಜೊತೆಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದೆ. ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಸೇಫ್ಟಿ ಫೀಚರ್ಸ್ಗಳನ್ನು ನೀಡಿದೆ. ಈ ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ 6 ಏರ್ ಬ್ಯಾಗ್, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಮುಖ್ಯವಾದ ಫೀಚರ್ಸ್ ಗಳಿವೆ. ಹಾಗೇ ಹೊಸ ಕಾರು ಬೆಲೆಯಲ್ಲೂ ಸ್ವಲ್ಪ ದುಬಾರಿಯಾಗಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಕಾರುಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ.

Leave A Reply

Your email address will not be published.