ಕರಾವಳಿ ಸಮುದ್ರದಲ್ಲಿ ದೊರೆತ ‘ ಅದೃಷ್ಟ ಸೂಚಕ ‘ ಮೀನು ಅಪರೂಪದ ಬಾಲವಿಲ್ಲದ ಸನ್ ಫಿಶ್ ಪತ್ತೆ !
ಕರಾವಳಿಯ ಕಿನಾರೆಯ ಮೀನುಗಾರರ ಬಲೆಗೆ ಬಹು ಅದೃಷ್ಟದ ‘ ಅದೃಷ್ಟ ಸೂಚಕ ‘ ಮೀನು ಎಂದೇ ಕರೆಸಿಕೊಳ್ಳುವ ಮೀನೊಂದು ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೊಡ ಟೊಂಕಾದಲ್ಲಿ ಲಲಿತಾ ಕಂಪನಿಯ ಜಗದೀಶ್ ತಾಂಡೇಲರ ‘ಪ್ರೀಶಾ’ ಬೋಟಿಗೆ 15 ಕೆಜಿ ತೂಕದ ವಿರಳಾತಿ ವಿರಳವಾಗಿ ಸಿಗುವ ಸನ್ ಫಿಶ್ (Sunfish) ಬಲೆಗೆ ಬಿದ್ದಿದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಮೀನು ಅಪರೂಪಕ್ಕೆ ಕಂಡುಬರುತ್ತದೆ, ಇನ್ನೂ ಅಪರೂಪಕ್ಕೆ ಈ ಮೀನು ಮೀನುಗಾರರ ಬಲೆಗೆ ಬೀಳುತ್ತದೆ. ನೆನಪಿಗೆ ಬಂದ ಹಾಗೆ, ವರ್ಷದಲ್ಲಿ ಒಂದೆರೆಡು ಬಾರಿ ಮಾತ್ರ ಮೀನುಗಾರರ ಬಲೆಗೆ ಬಿದ್ದಿರುವ ಕುರಿತು ಕಡಲ ವಿಜ್ಞಾನಿಗಳು ನೀಡಿದ್ದಾಗಿ ವರದಿಯಾಗಿದೆ.
Mola mola ಎಂಬುದಾಗಿ ವೈಜ್ಞಾನಿಕವಾಗಿ ಕರೆಸಿಕೊಳ್ಳುತ್ತಿರುವ ಈ ಮೀನು ಸನ್ ಫಿಶ್ ಎಂದು ಸ್ಥಳೀಯವಾಗಿ ಕರೆಸಿಕೊಳ್ಳುತ್ತದೆ. ಈ ಮೀನಿನಲ್ಲಿ ಹಲವು ವಿಶೇಷತೆಗಳಿವೆ. ವಿಶ್ವದಲ್ಲೇ ಅತೀ ಹೆಚ್ಚು ಮೂಳೆಗಳನ್ನು ಹೊಂದಿರುವ ಮೀನು ಇದಾಗಿದ್ದು, ಈ ಮೀನಿಗೆ ಸಾಮಾನ್ಯ ಮೀನಿನಂತೆ ಬಾಲ ಇರುವುದಿಲ್ಲ. ಈ ಸನ್ ಫಿಶ್ ನಬಹುತೇಕ ದೇಹವು ಮೂಳೆಯಿಂದ ಕೂಡಿರುತ್ತದೆ. ಮೂಳೆಗಳು ಹೆಚ್ಚಿರುವುದರಿಂದ ಇವು ಆಳ ಸಮುದ್ರದಲ್ಲಿ ವಾಸಿಸುತ್ತವೆ. ಅಗತ್ಯ ಬಿದ್ದಾಗ ನೀರಿನ ಮೇಲ್ಭಾಗಕ್ಕೆ ಬಂದು ತೇಲುತ್ತಾ ಸೂರ್ಯನ ಕಿರಣಗಳನ್ನು ಹೀರುತ್ತವೆ. ಇತರ ಸಣ್ಣ ಪುಟ್ಟ ಜಲ್ಲಿ ಫಿಷ್, ಚಿಕ್ಕ ಮೀನುಗಳು ಇವುಗಳ ಆಹಾರ.
ಅದೃಷ್ಟದ ಸಂಕೇತ ಎಂದೇ ಬಿಂಬಿತವಾಗಿರುವ ಈ ಮೀನು ಸಿಕ್ಕವರು ಲಕ್ಕಿ ಅಂತೆ. ಕರಾವಳಿಯಲ್ಲಿ ಈ ಮೀನನ್ನು ಅದೃಷ್ಟದ ಸಂಕೇತ ಎಂದೇ ನಂಬಲಾಗಿದೆ. ಈ ಮೀನು ಯಾರ ಬಲೆಗೆ ಒಲಿಯುದೆಯೋ ಆ ಮೀನುಗಾರ ಸಕತ್ ಶ್ರೀಮಂತನಾಗುತ್ತಾನೆ, ಮುಂದೆ ಆತ ಹೋದಲ್ಲೆಲ್ಲ ಹೆಚ್ಚು ಹೆಚ್ಚು ಮೀನುಗಳು ಆತನ ಬಲೆಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಮೀನುಗಾರರಲ್ಲಿದೆ.
ಇಷ್ಟೇ ಅಲ್ಲ ಈ ಮೀನಿನ ವಿಶೇಷತೆ. ವಿವಿಧ ವಂಶಕ್ಕೆ ಹಲವು ಔಷಧೀಯ ಗುಣಗಳಿವೆ. ಔಷಧೀಯ ಗುಣದ ಕಾರಣ ಈ ಮೀನಿನ ಮಾಂಸಕ್ಕೆ ಹೊರ ದೇಶದಲ್ಲಿ ಇವುಗಳ ಭಕ್ಷಣೆ ಮಾಡುತ್ತಾರೆ. ಈ ಮೀನು ತುಂಬಾ ಮೂಳೆಗಳೇ ಇರುವುದರಿಂದ ಇದು ಹೆಚ್ಚಿನ ಪ್ರಮಾಣದಲ್ಲಿ ತೂಗುತ್ತದೆ. ಇದರ ತೂಕ ಟನ್‌ಗಟ್ಟಲೇ ಇರುತ್ತದೆ.
ಈ ಮೀನುಗಳ ವಾಸಸ್ಥಾನ ಹೆಚ್ಚಾಗಿ ಉಷ್ಣವಲಯ, ಸಮಶೀತೋಷ್ಣ ವಲಯ. ಜಪಾನ್, ಕೋರಿಯಾ, ತೈವಾನ್ ನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಇವು ಕಂಡುಬರುತ್ತವೆ.