Credit Card : ಕ್ರೆಡಿಟ್ ಕಾರ್ಡ್ ರದ್ದು ಗೊಳಿಸುವ ವಿಧಾನ ಹೇಗೆ?
ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಆದರೆ ವ್ಯವಹಾರ ನಡೆಸುವಾಗ ಕ್ರೆಡಿಟ್ ಕಾರ್ಡ್ ಬಹಳ ಜಾಗ್ರತೆಯಿಂದ ಬಳಸಬೇಕಾದ ಹಣಕಾಸು ವಹಿವಾಟು ಸಾಧನ.
ಕ್ರೆಡಿಟ್ ಕಾರ್ಡ್ ನಮಗೆ ನಗದುರಹಿತ ವಹಿವಾಟು ನಡೆಸಲು ಸಾಧ್ಯ ಮಾಡಿಕೊಡುತ್ತದೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಮೂಲಕ ಸಾಲದ ರೂಪದಲ್ಲಿ ನಾವು ಖರ್ಚು ಮಾಡಬಹುದು.
ಮುಖ್ಯವಾಗಿ ಪ್ರತಿಯೊಂದು ಕ್ರೆಡಿಟ್ ಕಾರ್ಡ್‌ಗೂ ನಿರ್ದಿಷ್ಟ ಸಾಲ ಮಿತಿ ಒಸಗಿಸಲಾಗಿರುತ್ತದೆ. ನಮ್ಮ ಹಿಂದಿನ ಕ್ರೆಡಿಟ್ ಸ್ಕೋರ್, ಸಾಲ ಮರುಪಾವತಿ ಇತಿಹಾಸ, ತಿಂಗಳ ವರಮಾನ ಇತ್ಯಾದಿ ಅಂಶಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್‌ನಲ್ಲಿ ಹಣದ ಮಿತಿ ನೀಡಲಾಗಿರುತ್ತದೆ. ಬೇರೆ ಬೇರೆ ಕಾರಣಗಳಿಂದ ಅನಗತ್ಯವಾಗಿ ಹಲವು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೇವೆ. ಕೆಲವೊಮ್ಮೆ ಕಾರ್ಡ್ ಇದೆ ಎಂದು ಅನಗತ್ಯವಾಗಿ ಬಳಕೆ ಮಾಡಿ ಮಿತಿಮೀರಿ ಸಾಲ ಸೃಷ್ಟಿಸಿಕೊಳ್ಳುತ್ತೇವೆ. ಇದರಿಂದಾಗಿ ನಾವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.
ಅಲ್ಲದೆ ತೀರಾ ಹೆಚ್ಚು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದು ಅನಗತ್ಯ ಆಗಿದೆ . ಇಂಥ ಕ್ರೆಡಿಟ್ ಕಾರ್ಡನ್ನು ನಾವು ರದ್ದು ಮಾಡಬಹುದು, ಅಥವಾ ಮರಳಿಸಬಹುದು.
ಕ್ರೆಡಿಟ್ ಕಾರ್ಡನ್ನು ರದ್ದು ಮಾಡುವ ಕ್ರಮಗಳು :
• ನಿಮಗೆ ಕ್ರೆಡಿಟ್ ಕಾರ್ಡ್ ಒದಗಿಸಿದ ಬ್ಯಾಂಕ್‌ನ ಕಸ್ಟಮರ್ ಸರ್ವಿಸ್ ವಿಭಾಗವನ್ನು ಸಂಪರ್ಕಿಸಿ, ಕ್ರೆಡಿಟ್ ಕಾರ್ಡ್ ರದ್ದು ಮಾಡಬೇಕೆಂದು ಮನವಿ ಮಾಡುವುದು ಒಂದು ವಿಧಾನ.
• ಬ್ಯಾಂಕ್‌ನ ಮ್ಯಾನೇಜರ್‌ಗೆ ಪತ್ರದ ಮೂಲಕ, ಅಥವಾ ಅರ್ಜಿಯ ಮೂಲಕ ಕ್ರೆಡಿಟ್ ಕಾರ್ಡ್ ಖಾತೆ ರದ್ದುಗೊಳಿಸಬೇಕೆಂಬ ಮನವಿ ಸಲ್ಲಿಸಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್, ಅದರಲ್ಲಿರುವ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಅರ್ಜಿಯಲ್ಲಿ ನೀಡಬೇಕು.
• ಇಮೇಲ್ ಮೂಲಕವೂ ಕ್ರೆಡಿಟ್ ಕಾರ್ಡ್ ಖಾತೆ ರದ್ದುಗೊಳಿಸುವ ಮನವಿ ಸಲ್ಲಿಸಬಹುದು.
• ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವ ಮನವಿಯನ್ನು ಆನ್‌ಲೈನ್ ಮೂಲಕವೂ ಸಲ್ಲಿಸಲು ಅವಕಾಶ ಇರುತ್ತದೆ. ಅದಕ್ಕಾಗಿ ಬ್ಯಾಂಕ್‌ನ ವೆಬ್‌ಸೈಟ್‌ಗೆ ಹೋಗಿ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಆ ಬಳಿಕ ಬ್ಯಾಂಕ್‌ನ ಪ್ರತಿನಿಧಿಯೊಬ್ಬರು ನಿಮ್ಮನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಾರೆ.
ಕ್ರೆಡಿಟ್ ಕಾರ್ಡ್ ರದ್ದು ಗೊಳಿಸುವ ಮುನ್ನ ಗಮನಿಸಬೇಕಾದ ಅಂಶಗಳು :
• ನೀವು ಕ್ರೆಡಿಟ್ ಕಾರ್ಡ್ ರದ್ದು ಮಾಡುವ ಮುನ್ನ ಆ ಕಾರ್ಡ್‌ನಲ್ಲಿ ಯಾವುದೇ ಬ್ಯಾಲನ್ಸ್ ಉಳಿದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
• ಹಿಂದಿನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ತೆಗೆದು ಗಮನಿಸಿ ಯಾವುದೇ ಶುಲ್ಕ ಉಳಿದಿಲ್ಲದಿರುವುದನ್ನು ಖಚಿಪಡಿಸಿಕೊಳ್ಳಿ.
• ಕ್ರೆಡಿಟ್ ಕಾರ್ಡ್ ಮುಚ್ಚುವ ವಿಧಾನಗಳೇನಿವೆ ಎಂಬುದನ್ನು ಬ್ಯಾಂಕ್‌ನ ನಿಯಮಗಳಿಂದ ತಿಳಿದುಕೊಳ್ಳಿ.
• ನೀವು ಯಾವುದೇ ಕ್ರೆಡಿಟ್ ಕಾರ್ಡ್ ಬಳಸಿ ವೆಚ್ಚ ಮಾಡಿದಾಗ ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಮುಚ್ಚುವ ಮುನ್ನ ರಿವಾರ್ಡ್ ಪಾಯಿಂಟ್ಸ್ ಎಷ್ಟಿದೆ ನೋಡಿ ಅದನ್ನು ಬಳಸಿಕೊಳ್ಳಿ.
• ಹಲವು ಬಾರಿ ನಾವು ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಆಟೊಮ್ಯಾಟಿಕ್ ಬಿಲ್ ಪೇಮೆಂಟ್ ಮತ್ತು ಮನಿ ಟ್ರಾನ್ಸ್‌ಫರ್ ನಿಗದಿ ಮಾಡಿರುತ್ತೇವೆ. ಇಂಥ ಸೇವೆಯನ್ನು ನಿಲ್ಲಿಸದಿದ್ದರೆ ಮುಂದೆ ಕಷ್ಟವಾಗಬಹುದು.
• ಕ್ರೆಡಿಟ್ ಕಾರ್ಡ್ ರದ್ದು ಮಾಡಲು ಮನವಿ ಮಾಡಿ ಎಲ್ಲವೂ ಮುಕ್ತಾಯವಾಯಿತು ಎಂದು ಸುಮ್ಮನಾಗದಿರಿ. ಯಾವಾಗ ರದ್ದಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಈ ರೀತಿಯಾಗಿ ಕ್ರೆಡಿಟ್ ಕಾರ್ಡನ್ನು ರದ್ದುಗೊಳಿಸಬಹುದಾಗಿದೆ.