OTT ಯಲ್ಲಿ ಕಾಂತಾರ ರಿಲೀಸ್’ಗೆ ಕ್ಷಣಗಣನೆ | ರಿಲೀಸ್ ಡೇಟ್ ಫಿಕ್ಸ್

ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿ ಎಲ್ಲಾ ‘ವುಡ್ ‘ ಗಳಲ್ಲೂ ಇದ್ದ ಸಾರ್ವಕಾಲಿಕ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರ ದಿನದಿಂದ ದಿನಕ್ಕೆ ತನ್ನ ಕ್ರೇಜ್’ನ್ನು ಹೆಚ್ಚಿಸಿಕೊಳ್ಳುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಜಗತ್ತಿನ ಗಣ್ಯಾತಿ ಗಣ್ಯರು ಸಹ ಕಾಂತಾರದ ಸೊಗಸಿಗೆ ಮಾರು ಹೋಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ಅನುಷ್ಕಾ ಶೆಟ್ಟಿ, ಪ್ರಭಾಸ್, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಹೀಗೆ ಕಾಂತಾರ ನೋಡಿ ಹಾಡಿಹೊಗಳಿದವರು ಯಾರಿದ್ದಾರೆ ಹೇಳಿ ?

 

ಕೇವಲ ಸಿನಿಮಾ ಜಗತ್ತಿನ ಗಣ್ಯರು ಮಾತ್ರವಲ್ಲದೇ ರಾಜಕೀಯ ಗಣ್ಯರು ಸಿನಿಮಾಗೆ ಫಿದಾ ಆಗಿದ್ದಾರೆ. ಸದಾ ಫೈಲುಗಳ ಮಧ್ಯೆ, ಲೆಕ್ಕಪತ್ರಗಳ ಚಿಂತನೆಯಲ್ಲಿ ಹುದುಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಕೂಡಾ ಸಿನಿಮಾ ವೀಕ್ಷಿಸಿ ಚಿಕ್ಕ. ಮಗುವಿನ ಹಾಗೆ ಸಂತಸ ಪಟ್ಟಿದ್ದಾರೆ. ಅಲ್ಲದೇ ರಿಷಬ್ ಶೆಟ್ಟಿ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಹೊಡೆದದ್ದು ಥೇಟ್ ಕೊಳ್ಳೆ ! ದೇಶದ ಒಂದಷ್ಟು ದುಡ್ಡು ಕಾಂತಾರ ಟೀಮ್ ಬಳಿ ಈಗ ಬಂದು ಬಿದ್ದಿದೆ. ಚಿತ್ರ ಈಗಾಗಲೇ 300 ಕೋಟಿ ಕಲೆಕ್ಷನ್ ಮಾಡಿಯಾಗಿದೆ. ಅಷ್ಟರಲ್ಲಿ ಕಾಂತಾರ ಚಿತ್ರಕ್ಕೆ ಇನ್ನೊಂದು ಸಿಹಿ ಸುದ್ದಿ ಸಿಕ್ಕಿದೆ.

ದೇಶದಾದ್ಯಂತ ಸಿನಿಮಾದ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಾಂತಾರ ಒಟಿಟಿ ರಿಲೀಸ್ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಒಟಿಟಿಗಳ ಅಧಿಪತಿ ಅಮೆಜಾನ್ ಪ್ರೈಮ್ ನಲ್ಲಿ ಕಾಂತಾರ ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈಗಾಗಲೇ ಕಾಂತಾರ ಹಕ್ಕನ್ನು ಅಮೆಜಾನ್ ಪ್ರೈಮ್ ಖರೀದಿ ಮಾಡಿದ್ದು ಸದ್ಯದಲ್ಲೇ ಸ್ಟ್ರೀಮಿಂಗ್ ಪ್ರಾರಂಭಿಸಲಿದೆಯಂತೆ.

ಇವತ್ತು ಕಾಂತಾರ ಒಟಿಟಿ ಎಂಟ್ರಿಯ ದಿನಾಂಕ ವೈರಲ್ ಆಗುತ್ತಿದೆ. ಕಾಂತಾರವು ನ.18 ರಂದು ಓಟಿಟಿ ವೇದಿಕೆ ಪ್ರೈಮ್ ನಲ್ಲಿ ಕಾಂತಾರಾ ಬಿಡುಗಡೆಯಾಗಲಿದೆ. ಯಾರೂ ಊಹಿಸದ 60 ಕೋಟಿ ಬೃಹತ್ ಮೊತ್ತಕ್ಕೆ ಕಾಂತಾರಾ ಮಾರಾಟವಾಗಿದೆ ಎನ್ನಲಾಗುತ್ತಿದೆ.

ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಗುಳಿಗ ದೈವ ಮತ್ತು ಪಂಜುರ್ಲಿ ಯರು ಕಾಂತಾರವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತಿದ್ದಾರೆ. ಒಟಿಟಿಯಲ್ಲೂ ಇನ್ನೆಷ್ಟು ಗೆಲುವು, ಮತ್ತೆಷ್ಟು ದಾಖಲೆ, ಮಗದೆಷ್ಟು ಮೊಗೆದು ಮೊಗೆದು ಹಣ ಸುರಿಸುತ್ತೆ ಕಾಂತಾರ ಎನ್ನುವುದನ್ನು ನೋಡಲು ಇನ್ನು ಹೆಚ್ಚು ದಿನ ಬೇಕಿಲ್ಲ.

Leave A Reply

Your email address will not be published.