Black Water : ಈ ಕಪ್ಪು ನೀರು ಆರೋಗ್ಯಕ್ಕೆ ಒಳ್ಳೆಯದೇ?
ನಮಗೆಲ್ಲಾ ನೀರು ಮಾತ್ರ ಗೊತ್ತಿರೋದು. ಹಾಗಾದರೆ ಈ ಕಪ್ಪು ನೀರು ಅಂದ್ರೆ ಏನಿರಬಹುದು. ಈ ಕಪ್ಪು ನೀರು ಆರೋಗ್ಯಕ್ಕೆ ಉತ್ತಮವಾದ ಕಪ್ಪಾದ ನೀರು, ಈ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆಯಂತೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಊರ್ವಶಿ ರೌಟೇಲಾ, ಮಲೈಕಾ ಅರೋರಾ ಮುಂತಾದ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಶ್ರೀಮಂತರು ಕಪ್ಪು ನೀರನ್ನು ಕುಡಿಯುತ್ತಾರೆ. ಇನ್ನೂ, ಆನ್ಲೈನ್ನಲ್ಲಿ 500 ಮಿಲಿ ಕಪ್ಪು ನೀರಿನ ಬೆಲೆ 100 ರೂ. ಇದೆ.
UNICEF ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಜನರು ಶುದ್ಧ ನೀರನ್ನು ಕುಡಿಯಲು ಸಮರ್ಥರಾಗಿದ್ದಾರೆ. ಈಗ ನೀರನ್ನು ಶ್ರೀಮಂತರ ಮತ್ತು ಬಡವರ ನೀರು ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಹಾಗೇ ಈ ನೀರು ಯಾಕೆ ಇಷ್ಟೊಂದು ದುಬಾರಿಯಾಗಿದೆ? ಇದರ ವಿಶೇಷತೆ ಏನು? ಎಂಬುದನ್ನು ತಜ್ಞರಿಂದ ತಿಳಿಯೋಣ.
ಶಾಲಿಮಾರ್ ಬಾಗ್ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಮುಖ್ಯಸ್ಥೆ ಗೀತಾ ಬುರಿಯೋಕ್ ಅವರ ಪ್ರಕಾರ, ಕಪ್ಪು ನೀರು ಬಣ್ಣದಲ್ಲಿ ಮಾತ್ರವಲ್ಲದೆ ಸಾಮಾನ್ಯ ಜನರು ಕುಡಿಯುವ ನೀರಿನ ಗುಣಲಕ್ಷಣಕ್ಕಿಂತ ಭಿನ್ನವಾಗಿದೆ. ಜಿಮ್ ಅಥವಾ ವ್ಯಾಯಾಮದ ನಂತರ ಅಥವಾ ಅತಿಯಾದ ಬೆವರುವಿಕೆಯ ನಂತರ, ಈ ಕಪ್ಪು ನೀರನ್ನು ಕುಡಿದರೆ ಇದು ದೇಹದಲ್ಲಿ ನೀರನ್ನು ತಕ್ಷಣವೇ ಮರುಪೂರಣಗೊಳಿಸುತ್ತದೆ. ಸಾಮಾನ್ಯ ನೀರು ದೇಹದಲ್ಲಿ ಪೂರೈಸುವ ಪೋಷಕಾಂಶಗಳ ಪ್ರಮಾಣಕ್ಕಿಂತ ಕಪ್ಪು ನೀರಿನಲ್ಲಿ ಹೆಚ್ಚು. ಆದರೆ ಕಪ್ಪು ನೀರು ಎಷ್ಟು ಆರೋಗ್ಯಕರ ಎಂಬುದು ದೇಹದ ಅಗತ್ಯದ ಮೇಲೆ ಅವಲಂಬಿಸಿರುತ್ತದೆ.
ಆಹಾರ ತಜ್ಞೆ ಗೀತಾ ಪ್ರಕಾರ, ಸಾಮಾನ್ಯ ನೀರಿನ ಪ್ರಯೋಜನಗಳನ್ನು ಪಡೆಯಬೇಕು ಅಂದ್ರೆ ಮೊದಲು ದಿನವಿಡೀ ಸರಿಯಾದ ಪ್ರಮಾಣದ ನೀರನ್ನು ಕುಡಿಯುವುದು ಅವಶ್ಯಕವಾಗಿರುತ್ತದೆ. ಪ್ರತೀ ವ್ಯಕ್ತಿಯು ದಿನಕ್ಕೆ ಕನಿಷ್ಠ ಅಂದ್ರೆ 8-10 ಲೋಟ ನೀರು ಕುಡಿಯಬೇಕು ಎಂದಿದ್ದರೂ, ದಿನವಿಡೀ ದೇಹವನ್ನು ತೇವಾಂಶದಿಂದ ಇಡಲು ಸುಮಾರು 12-15 ಗ್ಲಾಸ್ ನೀರನ್ನು ಕುಡಿಯಬೇಕು ಎಂಬುದಾಗಿದೆ.
ಸಾಮಾನ್ಯ ಅಥವಾ ಕಪ್ಪು ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. 80 – 90% ರಷ್ಟು ಜನ ಸಾಮಾನ್ಯ ನೀರನ್ನೇ ಕುಡಿಯುತ್ತಿದ್ದಾರೆ. ಕಪ್ಪು ನೀರನ್ನು ಕುಡಿಯುವವರ ಸಂಖ್ಯೆ ಅತಿ ಕಡಿಮೆ. ಕಪ್ಪು ನೀರು ಅದರ ಹೆಚ್ಚಿನ pH ಮಟ್ಟದಿಂದಾಗಿ ಆರೋಗ್ಯದ ಮೇಲೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದೆ. ಆದರೆ ಅತಿಯಾದರೆ ಅಮೃತ ಕೂಡ ವಿಷ ಎನ್ನುವ ಹಾಗೆ, ಕಪ್ಪು ನೀರಿನ ಅತಿಯಾದ ಬಳಕೆಯು ಒಳ್ಳೆಯದಲ್ಲ.
ಇನ್ನೂ, ಈ ಕಪ್ಪು ನೀರಿನ ವಿಶೇಷತೆ ಏನೆಂದರೆ, ಕ್ಷಾರೀಯ ನೀರು ಅಥವಾ ಕಪ್ಪು ನೀರು ದೇಹವನ್ನು ಸಾಮಾನ್ಯ ನೀರಿಗಿಂತ ಹೆಚ್ಚು ಸಮಯದವರೆಗೆ ಹೈಡ್ರೀಕರಿಸುತ್ತದೆ. ಇದರ ಪಿಎಚ್ ಮಟ್ಟವು ಸಾಮಾನ್ಯ ನೀರಿಗಿಂತ 8 ರಿಂದ 8.5 ಆಗಿರುತ್ತದೆ. ಕಪ್ಪು ನೀರನ್ನು ಉತ್ತಮ ಡಿಟಾಕ್ಸ್ ಪಾನೀಯವೆಂದು ಪರಿಗಣಿಸಲಾಗುತ್ತದೆ. ಇದು ದೇಹದಿಂದ ವಿಷ ಹೊರಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಕಪ್ಪು ನೀರಿನ ಸೇವನೆಯಿಂದ ಅಸಿಡಿಟಿ ಸಮಸ್ಯೆ ಉಂಟಾಗುವುದಿಲ್ಲ. ಹಾಗೂ ಕಪ್ಪು ನೀರು ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.
ಈ ಕಪ್ಪು ನೀರಿನ ಅಡ್ಡ ಪರಿಣಾಮಗಳು ಯಾವುದೆಂದರೆ, Webmd ಪ್ರಕಾರ, ಮೂತ್ರಪಿಂಡದ ಕಾಯಿಲೆಯನ್ನು ಹೊಂದಿಲ್ಲದಿದ್ದರೆ, ಕಪ್ಪು ನೀರು ಯಾವುದೇ ರೀತಿಯ ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡುವುದಿಲ್ಲ. ಹೆಚ್ಚಿನ pH ಚರ್ಮವನ್ನು ಡ್ರೈ ಆಗಿಸುವುದಲ್ಲದೆ ಮತ್ತು ತುರಿಕೆಗೆ ಕಾರಣವಾಗಬಹುದು ಅಥವಾ ಹೊಟ್ಟೆ ಅಸಮಾಧಾನವನ್ನು ಉಂಟುಮಾಡಬಹುದು. ಆ ಸಮಯದಲ್ಲಿ ದೀರ್ಘಕಾಲದವರೆಗೆ ಕಪ್ಪು ನೀರಿನ ಸೇವನೆ ಹಾನಿಕಾರಕವಾಗಿದೆ. ಕಪ್ಪು ನೀರನ್ನು ಸೇವಿಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
ಇನ್ನೂ, ಸಾಮಾನ್ಯ ನೀರನ್ನು ಕುಡಿಯುವ ಮೊದಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾನ್ಯ ನೀರನ್ನು ನಲ್ಲಿಯಿಂದ ನೇರವಾಗಿ ಕುಡಿಯಬಾರದು. ಬದಲಾಗಿ ಆ ನೀರನ್ನು ಚೆನ್ನಾಗಿ ಕುದಿಸಬೇಕು. ಕುದಿಯುವ ನೀರು ಅದರಲ್ಲಿರುವ ವಿಷವನ್ನು ಕೊಲ್ಲುತ್ತದೆ. ಇದು ಮಲಬದ್ಧತೆಯನ್ನು ನಿವಾರಣೆ, ವಿಷವನ್ನು ತೊಡೆದುಹಾಕುವುದು ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುವಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದಲ್ಲದೆ, ಉತ್ತಮ ನಿರ್ವಿಶೀಕರಣ, ಉತ್ತಮ ಜೀರ್ಣಕ್ರಿಯೆಗಾಗಿ ಉಪಯುಕ್ತ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಅಥವಾ ಚಿಯಾ ಬೀಜಗಳನ್ನು ಬೆರೆಸಿ ಸೇವಿಸಬಹುದು.