ತನ್ನದೇ ಕುಟುಂಬದವರ ಹತ್ಯೆ ಮಾಡಿ ಬಾವಿಗೆಸೆದು, ಜೊತೆಗೆ ನೆರೆಮನೆಯವರ ಹತ್ಯೆ ಮಾಡಿದ 16 ವರ್ಷದ ಬಾಲಕ |

16 ವರ್ಷದ ಬಾಲಕನೋರ್ವ ತನ್ನದೇ ಕುಟುಂಬದ ಸದಸ್ಯರನ್ನು ಹಾಗೂ ನೆರೆಹೊರೆಯವರನ್ನು ಸಾಯಿಸಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಿಜಕ್ಕೂ ಜನ ಬೆಚ್ಚಿಬಿದ್ದಿದ್ದಾರೆ.

 

ತ್ರಿಪುರಾದ ದಲೈ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಮೂವರು ಸದಸ್ಯರನ್ನು ಮತ್ತು ನೆರೆಹೊರೆಯವರನ್ನು ಕೊಲೆ ಮಾಡಿ ಶವಗಳನ್ನು ಬಾವಿಗೆ ಎಸೆದಿರುವ ಘಟನೆ ನಡೆದಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಆರೋಪಿ ಬಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ”ಕಮಲ್ಲುರ ಉಪವಿಭಾಗದ ನಿವಾಸಿಯಾದ ಬಾಲಕ ನಿತ್ಯ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ತಂದೆ ಇಲ್ಲದಿದ್ದಾಗ ತಾಯಿ, ಅಜ್ಜ, 10 ವರ್ಷದ ಸಹೋದರಿ ಹಾಗೂ ನೆರೆಹೊರೆಯವರನ್ನು ಕೊಂದಿದ್ದಾನೆ. ಅಪರಾಧದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಅಧಿಕಾರಿ ಹೇಳಿದ್ದಾರೆ.

ಅಧಿಕಾರಿಯ ಪ್ರಕಾರ, ಬಾಲಕನ ತಂದೆ ಮನೆಗೆ ಬಂದ ಸಂದರ್ಭದಲ್ಲಿ, ಎಲ್ಲೆಂದರಲ್ಲಿ ರಕ್ತ ಚಿಮ್ಮಿದ್ದು, ಶವಗಳನ್ನು ಮನೆಯ ಪಕ್ಕದ ಬಾವಿಯಲ್ಲಿ ಬಿಸಾಡಿದ್ದಾನೆ. ಇದನ್ನು ನೋಡಿದ ತಂದೆ ಜೋರಾಗಿ ಕೂಗಾಡಿದ್ದು, ನಂತರ ಗ್ರಾಮಸ್ಥರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟು ಮಾತ್ರವಲ್ಲ, ಆರೋಪಿಯ ಮನೆಯಲ್ಲಿ ಬೆಳಗ್ಗೆ 9.30 ರ ಸುಮಾರಿಗೆ ಜೋರಾಗಿ ಸಂಗೀತ ಹಾಕಿರುವುದು ಕೇಳಿಸುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ ಹಾಗೂ ಸುಮಾರು ಗಂಟೆಗಳ ನಂತರ ಅವರ ತಂದೆ ಬಾವಿಯಲ್ಲಿ ನಾಲ್ಕು ಶವಗಳನ್ನು ನೋಡಿದ್ದಾರೆ ಎಂದು ಹೇಳಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.