ಇಂಟರ್ನೆಟ್ ಹೈ ಸ್ಪೀಡ್ ಬಳಸಲು ಈ ಟ್ರಿಕ್ ಫಾಲೋ ಮಾಡಿ ರಿಸಲ್ಟ್ ನೋಡಿ!!!

ಮೊಬೈಲ್ ಎಂಬ ಮಾಯಾವಿ ಬಂದ ಮೇಲೆ ಜನರ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದು ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಶುರುವಾಗಿ ರಾತ್ರಿ ಮರಳಿ ನಿದ್ದೆ ಮಾಡುವವರೆಗು ಸರ್ವಾಂತರ್ಯಾಮಿ ಸಾಧನವಾಗಿ ಬಿಟ್ಟಿದೆ. ಆದರೆ , ಈ ಮೊಬೈಲ್ ಬಳಕೆಗೆ ಇಂಟರ್ನೆಟ್ ಹಾಗೂ ನೆಟ್ವರ್ಕ್ ಸಮಸ್ಯೆ ದೊಡ್ಡ ತೊಡಕಾಗಿ ಪರಿಣಮಿಸಿದೆ.

 

ಈಗ ದೇಶದಲ್ಲಿ 3G, 4G ಆಗಿ 5G ಕೂಡ ಆರಂಭವಾಗುತ್ತಿದೆ. ಯಾವುದೆ ಸೇವೆ ಬಂದರೂ ಕೂಡ ಇಂಟರ್ನೆಟ್ ಸಮಸ್ಯೆಯಿಂದ ಹೆಚ್ಚಿನವರಿಗೆ 4ಜಿ ಹಾಗೂ ಇನ್ನೂ 5ಜಿ ಸೇವೆ ಬಂದರು ಕೂಡ ಮರೀಚಿಕೆ ಎಂದರೂ ತಪ್ಪಾಗಲಾರದು.

ಅನಿವಾರ್ಯ ಸಂದರ್ಭಗಳಲ್ಲಿ ಕರೆ ಇಲ್ಲವೆ ಇಂಟರ್ನೆಟ್ ಬಳಸಲು ನೆಟ್ವರ್ಕ್ ಸಮಸ್ಯೆ ಎದುರಾಗಿ ಹೆಚ್ಚಿನವರು ಪರದಾಡುವಂತಾಗುತ್ತದೆ. ಆದರೆ ಸಿಮ್ ಕಾರ್ಡ್​ನ ಸಹಾಯದಿಂದ ತಮ್ಮ ಫೋನಿನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದಾದ ಆಯ್ಕೆಯೊಂದಿದೆ.

ಇಂದು ಮೊಬೈಲ್ (Mobile) ತಂತ್ರಜ್ಞಾನ ಸಾಕಷ್ಟು ಬದಲಾಗಿದ್ದು, ನಮ್ಮ ಬೆರಳ ತುದಿಯಿಂದಲೇ ಕ್ಷಣ ಮಾತ್ರದಲ್ಲಿಯೆ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಬಹುದಾಗಿದೆ. ಇದಕ್ಕೆ ಇಂಟರ್ನೆಟ್ ಮುಖ್ಯ ಪಾತ್ರ ವಹಿಸುತ್ತದೆ. ಈಗ ದೇಶದಲ್ಲಿ 3G, 4G ಆಗಿ 5G ಕೂಡ ಆರಂಭವಾಗುತ್ತಿದೆ. ಇದಕ್ಕೇನು ಪರಿಹಾರವೇ ಇಲ್ಲವೇ ಎಂದೆನಿಸುವುದುಂಟು!!.

ಇದಕ್ಕೆ ಅನೇಕ ಥರ್ಡ್ ಪಾರ್ಟಿ ಆ್ಯಪ್ ಬಳಸಿಕೊಂಡರೂ ಪ್ರಯೋಜನ ಆಗುವುದಿಲ್ಲ. ಹೀಗೆ ಇಂಟರ್ನೆಟ್ ವೇಗ ಕಡಿಮೆಯಾದಾಗ ತಲೆ ಕಡೆಸಿಕೊಳ್ಳುವವರೇ ಜಾಸ್ತಿ. ಆದರೆ ಸಿಮ್ ಕಾರ್ಡ್​ನ (Sim Card) ಸಹಾಯದಿಂದ ತಮ್ಮ ಫೋನಿನ ಇಂಟರ್ನೆಟ್ ವೇಗವನ್ನು (Internet Speed) ಹೆಚ್ಚಿಸಬಹುದಾದ ಆಯ್ಕೆಯೊಂದಿದೆ.

ಸರಿಯಾದ ಸಿಮ್ ಬಳಕೆಯ ವಿಧಾನವನ್ನು ಅಳವಡಿಸಿಕೊಂಡರೆ ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು. ಅದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ.ಸ್ಮಾರ್ಟ್​ಫೋನ್​ನಲ್ಲಿ ಕೇವಲ ಇಂಟರ್ನೆಟ್ ಸಮಸ್ಯೆ ಮಾತ್ರವಲ್ಲ ನೆಟ್​ವರ್ಕ್​ ತೊಂದರೆ ಅನುಭವಿಸುತ್ತಿದ್ದರೂ ಕೂಡ ಈ ಟ್ರಿಕ್ ಸಹಾಯ ಮಾಡಲಿದೆ.

ಇದಕ್ಕೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕಾಗುತ್ತದೆ. ಸ್ಮಾರ್ಟ್​ಫೋನ್ ಉಪಯೋಗಿಸುವ ಎಲ್ಲರಿಗೂ ಮೊದಲನೇ ಸಿಮ್ ಮತ್ತು ಎರಡನೇ ಸಿಮ್ ಎಂಬ ಒಂದು ಟ್ರೇ ಇರುವುದು ಗೊತ್ತಿರುತ್ತದೆ. ಈಗ ಮೊದಲನೇ ಸಿಮ್ ಟ್ರೇ ನಲ್ಲಿ ಯಾವ ಸಿಮ್ ಕಾರ್ಡ್ ಇದೆ ಮತ್ತು ಎರಡನೇ ಟ್ರೇನಲ್ಲಿ ಯಾವ ಸಿಮ್ ಕಾರ್ಡ್ ಇದೆ ಎಂಬುದನ್ನು ಪರಿಶೀಲಿಸಬೇಕು.

ಮೊದಲನೇ ಸಿಮ್ ಟ್ರೇನಲ್ಲಿ ಇಟ್ಟಿರುವ ಸಿಮ್ ಕೇವಲ ಕಾಲ್​ಗಳಿಗೆ ಮಾತ್ರ ಮತ್ತು ಎರಡನೇ ಸಿಮ್ ಟ್ರೇನಲ್ಲಿ ಇರುವ ಸಿಮ್ ಇಂಟರ್ನೆಟ್​ಗಾಗಿ ಮಾತ್ರ ಎಂದು ಉಪಯೋಗಿಸುತ್ತಿದ್ದರೆ ಅದು ದೊಡ್ಡ ತಪ್ಪು. ಸ್ಮಾರ್ಟ್​ಫೋನ್​ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಬಯಸಿದರೆ ಮೊದಲಿಗೆ ನಿಮ್ಮ ಸಿಮ್ ಕಾರ್ಡ್​ಗಳನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಹೇಗೆಂದರೆ, ಇಂಟರ್ನೆಟ್ ಬಳಕೆಯ ಸಿಮ್ ಕಾರ್ಡ್ ಅನ್ನು ಮೊದಲನೇ ಸಿಮ್ ಟ್ರೇನಲ್ಲಿ ಮತ್ತು ಇನ್ನೊಂದು ಸಿಮ್ ಕಾರ್ಡ್ ಎರಡನೇ ಟ್ರೇನಲ್ಲಿ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.

ಸಿಮ್ ಟ್ರೇ ಒಂದರಲ್ಲಿ ಡೇಟಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕರೆ ಸಿಮ್ ಟ್ರೇ ಒಂದರಲ್ಲಿ ಮತ್ತು ಡೇಟಾ ಸಿಮ್ ಟ್ರೇ ಎರಡರಲ್ಲಿ ಇದ್ದರೆ, ನೀವು ಅದನ್ನು ಡೇಟಾ ಸಿಮ್ ಟ್ರೇ ಒಂದಕ್ಕೆ ಬದಲಾಯಿಸಬೇಕು. ಈ ರೀತಿ ಮಾಡುವುದರಿಂದ ಫೋನ್​ನಲ್ಲಿ ಇಂಟರ್ನೆಟ್ ವೇಗವು ಅಧಿಕವಾಗುತ್ತದೆ.

ಅಂತೆಯೆ ಇಂಟರ್‌ನೆಟ್ ಬಳಸುವ ಸಿಮ್ ನೆಟ್‌ವರ್ಕ್ APN ಅನ್ನು ಬದಲಾಯಿಸಿ ಕೂಡ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇನ್ನು ಕೆಲ ಸಿಂಪಲ್ ಟ್ರಿಕ್ ಮೂಲಕವೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು. ಇದಕ್ಕಾಗಿ ವಿವಿಧ ಆ್ಯಪ್ ನ ಸ್ಟೋರೆಜ್​ಗಳನ್ನು (Clear Cache) ತೆಗೆದುಹಾಕಬೇಕು.

ಆದಷ್ಟು ತಮ್ಮ ಮೊಬೈಲ್ ಫೋನ್​ನಲ್ಲಿ ಸ್ಟೋರೆಜ್ ಖಾಲಿ ಇರುವಂತೆ ನೋಡಿಕೊಳ್ಳಬೇಕು. ಆಗ ಮೊಬೈಲ್ ಜೊತೆಗೆ ಇಂಟರ್ನೆಟ್ ಕೂಡ ವೇಗವಾಗುತ್ತದೆ. ಉಪಯೋಗವಿಲ್ಲದ ಆ್ಯಪ್ ಗಳನ್ನು ತೆಗೆದುಹಾಕುವುದರಿಂದ ನಿಮ್ಮ ಮೊಬೈಲ್​ನಲ್ಲಿ ಸಾಕಷ್ಟು ಸ್ಟೋರೆಜ್ ಲಭ್ಯವಾಗಲಿದೆ.

ಮುಖ್ಯವಾಗಿ ನಿಮ್ಮ ನೆಟ್‌ವರ್ಕ್ ಸಂಪರ್ಕ LTE ನಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಒಳ್ಳೆಯದು. ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿ ಮೊಬೈಲ್ ನೆಟ್ವರ್ಕ್ ವೇಗಗೊಳಿಸಬಹುದು.

Leave A Reply

Your email address will not be published.