ಪಿಸ್ತೂಲ್ ಹಿಡಿದುಕೊಂಡು ತರಗತಿಗೆ ಬಂದ 10ನೇ ತರಗತಿ ವಿದ್ಯಾರ್ಥಿ | ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!!!

ಪುಸ್ತಕ, ಪೆನ್ ಹಿಡಿಯಬೇಕಾದ ಕೈಗಳಲ್ಲಿ ಪಿಸ್ತೂಲ್ ಹಿಡಿಯುತ್ತಿರುವುದು ವಿಪರ್ಯಾಸ. ಶಿಕ್ಷಣ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದರು ಕೂಡ ಕೆಲವೊಮ್ಮೆ ಮಕ್ಕಳು ಸಮಾಜಕ್ಕೆ ಕಂಟಕಕ್ಕೆ ತಳ್ಳುವ ಪ್ರಕ್ರಿಯೆಗಳಿಗೆ ಮಾರು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ.

 

ಇದಕ್ಕೆ ಕೆಲವೊಮ್ಮೆ ಜೊತೆಗಾರರ ಇಲ್ಲವೇ ಮಕ್ಕಳು ಬೆಳೆಯುವ ಸುತ್ತಮುತ್ತಲಿನ ಪರಿಸರ ಕೂಡ ಕಾರಣವಾಗುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳು ತಪ್ಪು ಮಾಡಿದಾಗ ಹೊಡೆದು ತಿದ್ದಿ ಬುದ್ಧಿ ಹೇಳುವ ಪರಿಪಾಠವಿತ್ತು.ಆದರೆ, ಶಿಕ್ಷಕರು ಕೋಲು ಹಿಡಿಯುವ ಮುನ್ನವೇ ಪೋಷಕರು ಶಾಲೆಯ ಮುಂದೆ ಮಕ್ಕಳಿಗೆ ಬೈದ ಕಾರಣವನ್ನು ಪ್ರಶಿಸಿ ಮಕ್ಕಳ ಪರವಾಗಿ ವಕಾಲತ್ತು ಮಾಡಲು ಮುಂದೆ ಬರುತ್ತಿರುವುದೆ ಹೆಚ್ಚು. ಹಾಗಾಗಿ, ಮಕ್ಕಳಲ್ಲಿ ಭಯವೆಂಬುದೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ನಡೆದಿದೆ.

ಉತ್ತರಾಖಂಡದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಪಿಸ್ತೂಲ್​ನೊಂದಿಗೆ ಶಾಲೆಗೆ ಬಂದ ಘಟನೆ ಹರಿದ್ವಾರದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅದೇ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ ಈ ವಿಚಾರ ಶಾಲಾ ಆಡಳಿತ ಮಂಡಳಿಗೆ ವಿಷಯ ತಲುಪಿ, ಇಬ್ಬರೂ ಮಕ್ಕಳನ್ನು ಕೂಡ ಮನವೊಲಿಸಿ ಇತ್ಯರ್ಥಪಡಿಸಿದ್ದಾರೆ.

ಶುಕ್ರವಾರ 10ನೇ ತರಗತಿ ಹಿರಿಯ ವಿದ್ಯಾರ್ಥಿಯ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪಿಸ್ತೂಲ್ ಹಿಡಿದು ವಿದ್ಯಾರ್ಥಿ ಶಾಲೆಗೆ ಬಂದಿದ್ದು, ಅಷ್ಟರಲ್ಲಿ ತರಗತಿಯಲ್ಲಿದ್ದ ಸಹಪಾಠಿಗಳು ಆತನ ಬಳಿ ಲೋಡೆಡ್​​ ಪಿಸ್ತೂಲ್ ಅನ್ನು ಗಮನಿಸಿದ್ದಾರೆ.

ಈ ವಿಷಯವನ್ನು ಮಕ್ಕಳು ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಶಿಕ್ಷಕರು ವಿದ್ಯಾರ್ಥಿಯನ್ನು ಹಿಡಿದು ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.ಈ ಘಟನೆ ಸಿಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಡಿಕಲ್ ಪೊಲೀಸ್ ಠಾಣೆ ಉಸ್ತುವಾರಿ ಪ್ರಮೋದ್ ಉನಿಯಾಲ್ ಅವರು ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿದಾಗ ಕೊಲ್ಲಲು ಪಿಸ್ತೂಲ್ ಹಿಡಿದು ಬಂದಿರುವ ವಿಚಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.

ಅಷ್ಟಕ್ಕೂ ಪಿಸ್ತೂಲ್ ವಿದ್ಯಾರ್ಥಿಗೆ ಹೇಗೆ ದೊರೆತಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಜೊತೆಗೆ ಸಣ್ಣ ಸಣ್ಣ ವಿಚಾರಕ್ಕೂ ಪಿಸ್ತೂಲ್ ಹಿಡಿದು ಕೊಲೆ ಮಾಡುವ ಮಟ್ಟಿಗೆ ಮಕ್ಕಳ ಮನಸ್ಥಿತಿ ಬೆಳೆಯುತ್ತಿರುವುದು ನಿಜಕ್ಕೂ ಅಚ್ಚರಿ ಹಾಗೂ ವಿಪರ್ಯಾಸ. ಪ್ರತಿ ಪೋಷಕರು ಮಕ್ಕಳ ಶೈಕ್ಷಣಿಕ ಹಾಗೂ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು ಉತ್ತಮವಾಗಿದ್ದು, ಇಲ್ಲದೆ ಹೋದರೆ ಕೆಲವೊಮ್ಮೆ ಸಣ್ಣ ನಿರ್ಲಕ್ಷ ದೊಡ್ಡ ಪ್ರಮಾದಕ್ಕೆ ಎಡೆ ಮಾಡಿಕೊಡುತ್ತದೆ.

Leave A Reply

Your email address will not be published.