ಕುಡ್ಲದ ರಿಯಲ್ “ಆಟೋ ರಾಜ ‘ ಇನ್ನಿಲ್ಲ | Montu Lobo ಇನ್ನು ಕೇವಲ ನೆನಪು !

ಕುಡ್ಲದ ‘ಆಟೋ ರಾಜ’ ಎಂದೇ ಗುರುತಿಸಿಕೊಂಡು ಫೇಮಸ್ ಆಗಿದ್ದ ಅತ್ಯಂತ ಹಿರಿಯ ಆಟೋ ಚಾಲಕ ಖ್ಯಾತಿಯ ಮೋಂತು ಲೋಬೋ ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ತನ್ನ ತೀರಾ ಇಳಿವಯಸ್ಸಿನಲ್ಲೂ ಆಟೋ ಓಡಿಸೋ ಮೂಲಕ ಈ ವ್ಯಕ್ತಿ ನಿಜ ಜೀವನದ ಆಟೋ ರಾಜ ಆಗಿದ್ದರು. ಅಲ್ಲದೇ ಇವರು ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಪ್ರಖ್ಯಾತಿಯನ್ನು ಕೂಡಾ ಗಳಿಸಿದ್ದರು.

ಅವರು ಮಂಗಳೂರಿನ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಮೋಂತು ಲೋಬೋ(Montu Lobo) ಇಂದು ಕೊನೆಯುಸಿರೆಳೆದಿದ್ದು, ಅವರಿಗೆ ಬರೋಬ್ಬರಿ 86 ವರ್ಷ ವಯಸ್ಸಾಗಿತ್ತು. ಅಚ್ಚರಿ ಅಂದ್ರೆ ಕೊನೆಯ ದಿನಗಳವರೆಗೂ ಮೋಂತು ಲೋಬೋ ಆಟೋ ಓಡಿಸ್ತಿದ್ದರು. ಅಷ್ಟರ ಮಟ್ಟಿಗೆ ಆಟೋ ಅವರ ಜೀವನ ಸಂಗಾತಿಯಾಗಿತ್ತು.

ಇಂದು ಕೊನೆಯ ಉಸಿರು ಚೆಲ್ಲುವ ತನಕ, ತನ್ನ 86ರ ವಯಸ್ಸಲ್ಲೂ ನಿರಾಯಾಸವಾಗಿ ಆಟೋ ಓಡಿಸ್ತಿದ್ದ ಮೋಂತು ಲೋಬೋ ಮಂಗಳೂರನ ಜೆಪ್ಪು – ವೆಲೆನ್ಸಿಯಾ ನಿವಾಸಿ. ವಯೋಸಹಜ ದೇಹ ಬದಲಾವಣೆ ಕಾರಣ ನಿಧಾನಕ್ಕೆ ನಡೆದು ಆಟೋ ಏರಿ ಹ್ಯಾಂಡಲ್ ಹಿಡಿದು ಕುಳಿತರೆ ಸಾಕು ಅವರಿಗೆ ಎಲ್ಲಿಲ್ಲದ ಹುಡುಗಾಟಿಕೆ ಬಂದು ಬಿಡುತ್ತಿತ್ತು. ಒಂದಿಷ್ಟು ಎಕ್ಸಿಲೇಟರ್ ಹಿಂಡಿದ್ರೆ ಸಾಕು ಲೀಲಾಜಾಲವಾಗಿ ಮಂಗಳೂರಿನ   ಒಳಭಾಗದ ಕಣಿವೆಗಳಂತಹಾ ರಸ್ತೆಗಳಲ್ಲಿ ಕೂಡಾ ಅವರ ಆಟೋ ಹುಚ್ಚೆದ್ದ ಕುದುರೆಯಂತೆ ಓಡುತ್ತಿತ್ತು. ಅವತ್ತಿನಿಂದ,  ಕೊನೆಯತನಕ ಆಟೋ ಚಾಲಕರಾಗಿ ಅವರು ಅದೇ ಯುವಕನ ಗತ್ತು ಗೈರತ್ತನ್ನು ಉಳಿಸಿಕೊಂಡಿದ್ದರು ರಿಯಲ್ ಆಟೋ ರಾಜ ಮೋಂತು ಲೋಬೋ !

ಇವತ್ತು ದೇಶದಲ್ಲಿ ಆಟೋ ಓಡಿಸೋ ಹೆಚ್ಚಿನ ಯಾವ ಆಟೋ ಚಾಲಕನಿಗೂ ಇವರ ಲೈಸೆನ್ಸ್ ನಷ್ಟೂ ವಯಸ್ಸಾಗಿರಕ್ಕಿಲ್ಲ. ಅವರು ತನ್ನ 20ನೇ ವಯಸ್ಸಿನಲ್ಲೇ ಆಟೋ ಹತ್ತಿದ್ದು, ಅಂದಿನಿಂದ ಮೋಂತು ಲೋಬೋರ ಆಟೋ ಬರೋಬ್ಬರಿ 66 ವರ್ಷ ನಿರಂತರವಾಗಿ ಓಡಿದೆ. ಆದರೆ ತನ್ನ ಕೊನೆ ದಿನಗಳವರೆಗೂ ಇವರು ಆಟೋ ಓಡಿಸಿದ್ದು, ಅವರಿಗೆ ಆರೂವರೆ ದಶಕಗಳ ಚಾಲನಾ ಅನುಭವ ಕೊಟ್ಟಿದೆ ಈ ವೃತ್ತಿ.

1935ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮೋಂತು ಲೋಬೋ ಕಲಿತದ್ದು ಆರನೇ ತರಗತಿ. ಅವರು ಮೊಟ್ಟ ಮೊದಲ ಬಾರಿಗೆ ಲ್ಯಾಂಬ್ರೆಟ್ಟಾ ಆಟೋ ರಿಕ್ಷಾದಲ್ಲಿ ತಮ್ಮ ಮೊದಲ ಡ್ರೈವ್ ಆರಂಭಿಸಿದ್ರು. ಅಚ್ಯುತ್ ಸಾಲಿಯಾನ್ ಎಂಬವರ
ಎರಡು ಆಟೋಗಳಲ್ಲಿ ಒಂದನ್ನ ಮೊದಲ ಬಾರಿಗೆ ಈ ಮೋಂತು ಲೋಬೋ ರಸ್ತೆಗಿಳಿಸಿದ್ರು.

ಅದು ಶ್ರೀಮಂತರು ಮಾತ್ರ ರಿಕ್ಷಾಗಳನ್ನು ಆರಿಸಿಕೊಳ್ಳುತ್ತಿದ್ದ ಕಾಲ. ಆಗ ಬೇರೆಯವರ ಆಟೋ ಓಡಿಸುತ್ತಾ ಅದರಲ್ಲಿ ಧಣಿಗೆ ಮುಕ್ಕಾಲು ಭಾಗ ದುಡಿಮೆಯನ್ನು ಕೊಟ್ಟು ಉಳಿದ ಕಾಲುಭಾಗ ತಾನು ಇಟ್ಟುಕೊಳ್ಳುವ ಪರಿಸ್ಥಿತಿ ಇತ್ತು. ತಾನು ರಕ್ಷಾ ಕಲಿತ ಬರೋಬ್ಬರಿ 40 ವರ್ಷಗಳ ನಂತರ ಅಂದರೆ, 2001ರಲ್ಲಿ ಬ್ಯಾಂಕ್ ಲೋನ್ ಮಾಡಿ ಸ್ವಂತ ಆಟೋ ರಿಕ್ಷಾ ಖರೀದಿಸಿದ  ಮೋಂತು ಲೋಬೋ, ನಂತರ ಒಟ್ಟು ಈವರೆಗೆ 14 ಆಟೋಗಳನ್ನ ಖರೀದಿಸಿ.ಮಾರಾಟ ಮಾಡಿ ಮತ್ತೆ ಹೊಸ ಆಟೋ ಕೊಂಡಿದ್ದಾರೆ.

ಅತ್ಯಂತ ಆಶ್ಚರ್ಯದ ಸಂಗತಿ ಏನೆಂದರೆ ತಮ್ಮ 66 ವರ್ಷಗಳ ಚಾಲನಾ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಫಾತ ಕೂಡಾ ಎಸಗದ ದಾಖಲೆಯ ಚಾಲನಾ ಕೌಶಲ್ಯ ಇವರದ್ದು. ಯಾವತ್ತೂ 40 ಕಿ.ಮೀ ಒಳಗಿನ ವೇಗದಲ್ಲಿ ಆಟೋ ಓಡಿಸೋ ಈ ಆಟೋ ಡ್ರೈವರ್ ಯಾವತ್ತೂ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೇ ಇಲ್ಲವಂತೆ.
ಬಹುಶಹ ಪೆಟ್ರೋಲ್ ಇಲ್ಲದೆ ಕೂಡ ಆಟೋ ಚಲಿಸುತ್ತೇನೋ, ಒಂದು ಸಿಂಗಲ್ ಆರೋಗ್ಯದ ಗುಟ್ಟು ಕಣ್ಣನ್ ದೇವನ್ ಚಾ!

ಇವರ ಆಟೋ ಸೇವೆ ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ‌. ಲೋಬೋರ ಅವರ ಸೇವೆಯನ್ನು ದ.ಕ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಗುರುತಿಸಿದೆ. 19 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭದಲ್ಲಿ ಅವರಿಗೆ ಮಾನ್ಯತೆ ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳೂರಿನಲ್ಲಿ ‘ಆಟೋ ರಾಜ’ ಬಿರುದು ಹಾಗೂ ಬೆಂಗಳೂರಿನಲ್ಲಿ ‘ಸಾರಥಿ ನಂಬರ್ 1’ ಪ್ರಶಸ್ತಿ ನೀಡಿದ್ದು, ಇನ್ನೂ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

ಇನ್ನು ಇವರ ಆರೋಗ್ಯದ ಗುಟ್ಟು ಕಣ್ಣನ್ ದೇವನ್ ಚಾಹ್ ಅಂತ ಅವರೇ ಹೇಳಿಕೊಂಡಿದ್ದರು. ಹಲವು ವರ್ಷಗಳಿಂದ ನಿತ್ಯ 20 ಗ್ಲಾಸ್ ಚಹಾ ಕುಡಿಯೋ ಮೋಂತು ಲೋಬೋ, ಅವರ ಆಟೋದಲ್ಲೂ ಕಣ್ಣನ್ ದೇವನ್ ಚಹಾದ ಬಗ್ಗೆ ಬರೆದು ಅದರ ಬಗ್ಗೆ ಪ್ರಚಾರ ಮಾಡ್ತಿದ್ದರು. ನಿತ್ಯ ಒಂದು ಗಂಟೆಗೆ ಎದ್ದು ಚಹಾ ಸೇವಿಸಿ ಬೆ.4-5ಗಂಟೆಗೆಲ್ಲಾ ಆಟೋ ಓಡಾಟ ಶುರು‌. ಇದರ ಜೊತೆಗೆ ಗರ್ಭಿಣಿಯರಿಗೆ ಮತ್ತು ಅಸಕ್ತರಿಗೆ ಆಟೋದಲ್ಲಿ ಉಚಿತ ಸೇವೆ ನೀಡ್ತಾ ಇದ್ದರು. 

ಇವತ್ತು ಮೊಂತು ಲೋಬೋ ಅವರು ಸ್ವಾವಲಂಬಿ ಜೀವನಕ್ಕೆ, ನಿರ್ಲಕ್ಷ್ಯದಿಂದ ಆಟೋ ಓಡಿಸೋ ಇಂದಿನ ಚಾಲಕರಿಗೆ ಒಂದು ಮಾದರಿ. ಜೀವನೋತ್ಸಹಕ್ಕೆ ಒಂದು ಒಳ್ಳೆಯ ಉದಾಹರಣೆ.

Leave A Reply

Your email address will not be published.