ಮಂಗಳೂರು : ಭೀಕರ ಅಪಘಾತ ; ಬೈಕ್‍ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ದಂಪತಿ ಸಾವು

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕಲ್ಲಾಪು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‍ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ದಂಪತಿಗಳಿಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

 

ಈ ಘಟನೆಯ ಸಂದರ್ಭ ಒಟ್ಟು ನಾಲ್ಕು ಮಂದಿ ಬೈಕ್ ಮೇಲಿದ್ದರು ಎನ್ನಲಾಗಿದ್ದು, ಮೃತ ದುರ್ದೈವಿಗಳನ್ನು ಗಂಗಾಧರ್, ಪತ್ನಿ ನೇತ್ರಾವತಿ ಎಂದು ಗುರುತಿಸಲಾಗಿದೆ. ಇನ್ನು ನೇತ್ರಾವತಿ ಮಗ ಮೋಕ್ಷ, ಸೋದರಿ ಮಗ ಜ್ಞಾನೇಶ್‍ಗೆ ಗಾಯಗೊಂಡಿದ್ದು, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಪ್ರಕರಣದ ಕುರಿತಾಗಿ , ಲಾರಿ ಚಾಲಕ ಹನೀಫ್‍ನನ್ನು ಪೋಲೀಸರು ವಶಕ್ಕೆ ಪಡೆದಿದ್ದು, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.