Tracking Device : ವಾಹನ ಸವಾರರೇ ನಿಮಗೊಂದು ಮುಖ್ಯವಾದ ಮಾಹಿತಿ | ವಾಹನಗಳಲ್ಲಿ ಇನ್ಮುಂದೆ ಇದು ಕಡ್ಡಾಯ!!!

ಈವರೆಗೆ ವಾಹನಗಳನ್ನು ಬೇಕಾಬಿಟ್ಟಿ ತಮಗೆ ಇಷ್ಟ ಬಂದ ಹಾಗೆ ಓಡಿಸುತ್ತಿದ್ದರು. ಹಾಗೂ ಟ್ಯಾಕ್ಸ್ ನೀಡದೆ ಸಂಚರಿಸುತ್ತಿದ್ದರು. ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ. ಚಾಲಕರ ವಾಹನದ ಮೇಲೆ ಸರ್ಕಾರದ ಕಣ್ಣಿರುತ್ತದೆ. ಯಾರ ವಾಹನ ಎಲ್ಲಿದೆ ಅನ್ನೋ ಮಾಹಿತಿ ಇನ್ಮುಂದೆ ಸರ್ಕಾರದ ಬಳಿಯಿರುತ್ತದೆ. ಯಾಕಂದ್ರೆ ಖಾಸಗಿ ಹಾಗೂ ಸರಕಾರಿ ವಾಹನಗಳಲ್ಲಿ ಟ್ರ್ಯಾಕಿಂಗ್ ಡಿವೈಸ್ ಅಳವಡಿಕೆ ಮಾಡಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿನ ಸುಮಾರು ಆರು ಲಕ್ಷ ವಾಹನಗಳಿಗೆ ಈ ವ್ಯವಸ್ಥೆ ಅಳವಡಿಸಬೇಕಾಗಿದೆ.

 

ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ವಾಹನಗಳಿಗೆ ಸ್ಥಳ ಟ್ರ್ಯಾಕಿಂಗ್ ಸಾಧನಗಳು ಮತ್ತು ತುರ್ತು ಪ್ಯಾನಿಕ್ ಬಟನ್ ಗಳನ್ನು ವಾಹನಕ್ಕೆ ಅಳವಡಿಸಬೇಕೆಂದು ಸರ್ಕಾರ ತಿಳಿಸಿದೆ. ಹಾಗೂ ಕಡ್ಡಾಯವಾಗಿ ವಾಹನಗಳಿಗೆ ಇದನ್ನು ಅಳವಡಿಸಬೇಕು. ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸುವುದರಿಂದ ವಾಹನ ಯಾವ ಸ್ಥಳದಲ್ಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈ ಟ್ರ್ಯಾಕಿಂಗ್ ಡಿವೈಸ್ ನಿಂದ ಹಲವಾರು ಉಪಯೋಗಗಳಿವೆ. ಅಪಘಾತಗಳು ಸಂಭವಿಸಿದಾಗ ವಾಹನಗಳನ್ನು ಪತ್ತೆಹಚ್ಚಲು ಪೋಲಿಸರಿಗೆ ಸಹಾಯಕವಾಗಲಿದೆ. ಲೈಸೆನ್ಸ್ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ತೆರಿಗೆ ವಂಚಿಸಿ ವಾಹನ ಚಾಲಾಯಿಸುವವರನ್ನು ಹಿಡಿಯುವಲ್ಲಿ ಇದು ಸಹಾಯ ಮಾಡುತ್ತದೆ. ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದರೆ ಮತ್ತು ವಾಹನ ಚಾಲಕರಿಂದ ತೊಂದರೆ ಉಂಟಾದಾಗ ಪ್ರಯಾಣಿಕರು ತುರ್ತು ಪ್ಯಾನಿಕ್ ಬಟನ್ ಗಳನ್ನು ಬಳಸಬಹುದು.

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ವಾಹನ ಯೋಜನೆಯಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ಹಣವನ್ನು ನೀಡುತ್ತದೆ. ಈ ಯೋಜನೆಗೆ ಸಚಿವ ಸಂಪುಟ 20.36 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 6.8 ಲಕ್ಷ ವಾಹನಗಳು ಇದರ ವ್ಯಾಪ್ತಿಗೆ ಬರುತ್ತದೆ ಮತ್ತು ಅನುಸ್ಥಾಪನೆಯು ಪೂರ್ಣಗೊಂಡ ನಂತರ ಕೇಂದ್ರ ಸ್ಥಳದಿಂದ ಅವುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ವಾಹನದ ಸ್ಥಳ ಟ್ರ್ಯಾಕಿಂಗ್ ಸಿಸ್ಟಮ್ (VLTS) ಆಧಾರಿತ (GPRS) ಸಾಧನಗಳು ವಾಹನಗಳಿಗೆ ಅಳವಡಿಸುವುದರಿಂದ ವೇಗವನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ ಮತ್ತು ವಾಹನಗಳು ನಿಗದಿತ ಸಮಯದಲ್ಲಿ ಸ್ಥಳವನ್ನು ತಲುಪಿದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಒಟ್ಟು 71,248 ಬಸ್‌ಗಳು ಮತ್ತು 85,941 ವಾಣಿಜ್ಯ ಸರಕು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಕ್ಯಾಬ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳಂತಹ 4.51 ಲಕ್ಷ ಖಾಸಗಿ ವಾಹನಗಳು, 16,432 ಶಾಲಾ ಬಸ್‌ಗಳು, 24,701 ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು 1,900 ಪ್ರವಾಸಿ ವಾಹನಗಳಿವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.