ಡ್ರೈವಿಂಗ್ ಕಲಿ ಮಗಳೇ ಅಂತ ಅಪ್ಪ ಕಳಿಸಿದರೆ, ಈ ಮಗಳು ಮಾಡಿದ್ದಾದರೂ ಏನು ನೋಡಿ!!!

ಈಗಂತೂ ಎಲ್ಲರೂ ಪ್ರೀತಿಯ ಬಲೆಯಲ್ಲಿ ಬೀಳುವವರೇ ಹೆಚ್ಚು. ಅದರಲ್ಲೂ ಕೆಲವರಿಗೆ ಹೇಗೆ,ಯಾವಾಗ ಪ್ರೀತಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೂ ಪ್ರೀತಿಯಲ್ಲಿ ಬಿದ್ದವರನ್ನ ಕೇಳಿದ್ರೆ ಒಬ್ಬೊಬ್ಬರ ಬಳಿ ಒಂದೊಂದು ಉತ್ತರವಿರುತ್ತದೆ. ಕೆಲವರಿಗೆ ಒಳ್ಳೆಯ ವ್ಯಕ್ತಿತ್ವ, ಪರಸ್ಪರ ತೋರುವ ಕಾಳಜಿ, ಒಂದೇ ರೀತಿಯ ಮನಸ್ಥಿತಿಯ ಕಾರಣಕ್ಕೆ ಪ್ರೀತಿ ಮೂಡಿದರೆ, ಇನ್ನೂ ಕೆಲವರಿಗೆ ಸೌಂದರ್ಯ, ಶ್ರೀಮಂತಿಕೆಯ ಕಾರಣಕ್ಕೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಮೂಡುತ್ತದೆ. ಆದರೆ ಪಾಕಿಸ್ತಾನದಲ್ಲಿ ಓರ್ವ ಮಹಿಳೆಗೆ ವಿಚಿತ್ರವಾದ ಕಾರಣಕ್ಕೆ ತನ್ನ ಕಾರು ಚಾಲಕನ ಮೇಲೆ ಪ್ರೀತಿಯಾಗಿದೆ. ಹಾಗಾದರೆ ಆ ಕಾರಣ ಏನಿರಬಹುದು? ನೋಡೋಣ.

 

ಪಾಕಿಸ್ತಾನದ 17 ವರ್ಷದ ಯುವತಿಗೆ 21 ವರ್ಷದ ತನ್ನ ಕಾರು ಚಾಲಕನ ಮೇಲೆ ಪ್ರೀತಿಯಾಗಿದೆ. ಪಾಕಿಸ್ತಾನದ ಮಾಧ್ಯಮ ಡೈಲಿ ಪಾಕಿಸ್ತಾನ್ ಈ ಜೋಡಿಯ ಸಂದರ್ಶನ ಮಾಡಿದ್ದು, ಕಾರು ಚಾಲಕನ ಮೇಲೆ ಪ್ರೀತಿಯಾಗಲು ಕಾರಣವೇನು ಎಂದು ಕೇಳಿದ್ದಾರೆ. ಈ ವೇಳೆ ಯುವತಿಯು ವಿಚಿತ್ರವಾದ ಉತ್ತರ ನೀಡಿದ್ದಾಳೆ.

ಯುವತಿ ಖತೀಜಾಳ ತಂದೆ ಮಗಳಿಗೆ ಡ್ರೈವಿಂಗ್ ಕಲಿಸಲು ಯುವಕನೋರ್ವನನ್ನು ನೇಮಿಸಿದ್ದಾರೆ. ಆದರೆ ಈತನಿಂದ ಚಾಲನಾ ತರಬೇತಿ ಪಡೆಯುವ ಬದಲು ಈ ತರುಣಿ ಆತನ ಚಾಲನಾ ಕೌಶಲ್ಯಕ್ಕೆ ಮಾರು ಹೋಗಿ, ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ. ಡ್ರೈವಿಂಗ್ ಕಲಿಯುವ ಬದಲು ಜೋಡಿಹಕ್ಕಿಗಳು ಪ್ರೇಮ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಪರಿಣಾಮ ಇವರಿಬ್ಬರ ಸಂಭಾಷಣೆ ಪ್ರೇಮಕ್ಕೆ ತಿರುಗಿದ್ದು, ಈಗ ಮದುವೆಯೂ ಆಗಿದ್ದಾರೆ.

ಆತನ ಚಾಲನಾ ಕೌಶಲ್ಯ ಹಾಗೂ ಆತ ಗೇರ್ ಬದಲಿಸುವ ಸ್ಟೈಲ್ ನೋಡಿ ನನಗೆ ಪ್ರೀತಿಯಾಯ್ತು ಎಂದು ಯುವತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಆಕೆ ತನ್ನ ಪ್ರಿಯಕರನಿಗಾಗಿ 1973ರ ಬಾಲಿವುಡ್ ಸಿನಿಮಾ ‘ಬಾಬಿ’ಯ (Boby) ಹಮ್ ತುಮ್ ಏಕ್ ಕಮ್ರೆ ಮೇ ಬಂದ್ ಹೋ ಎಂಬ ಹಾಡನ್ನು ಹಾಡಿದ್ದಾಳೆ ಎಂದು ಹೇಳಿದ್ದಾಳೆ. ಒಟ್ಟಿನಲ್ಲಿ ಅಪ್ಪ ತನ್ನ ಮಗಳು ಡ್ರೈವಿಂಗ್ ಕಲಿಯಲಿ ಎಂದು ಯುವಕನನ್ನು ನೇಮಿಸಿದರೆ, ಈ ತರುಣಿ ಆತನನ್ನೇ ತನ್ನ ಜೀವನ ಹಾಗೂ ಕಾರಿನ ಚಾಲಕನನ್ನಾಗಿ ಮಾಡಿಕೊಂಡಳು.

Leave A Reply

Your email address will not be published.