ಹುಂಜವನ್ನು ಕೆಣಕಲು ಹೋದ ವ್ಯಕ್ತಿ | ಸಿಟ್ಟುಗೊಂಡ ಹುಂಜ ಮಾಡಿದ್ದೇನು ಗೊತ್ತೇ? ವೀಡಿಯೋ ವೈರಲ್!!!

ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಹಲವಾರು ವ್ಯತ್ಯಾಸಗಳಿವೆ. ಅಲ್ಲದೆ ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ. ಆದರೆ ಕೆಲವೊಮ್ಮೆ ಮನುಷ್ಯ ಬುದ್ಧಿ ಇದ್ದರೂ ಸಹ ಪ್ರಾಣಿ ಪಕ್ಷಿಗಳನ್ನು ಸುಖಾ ಸುಮ್ಮನೆ ಕೆದಕುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ.

 

ಹಾಗೆಯೇ ಇಲ್ಲೊಬ್ಬ ಯುವಕ ಹುಂಜವನ್ನು ಕೆಣಕಲು ಹೋಗಿದ್ದಾನೆ. ಆದರೆ ಹುಂಜಗಳು ಕೆಲವೊಮ್ಮ ಆಕ್ರಮಣಕಾರಿಯಾಗಿರುತ್ತವೆ ಎಂಬ ಮಾತನ್ನು ಕೇಳಿದ್ದರೆ ಈ ವಿಡಿಯೋ ನೋಡಿ.

ಸುಮ್ಮನೇ ನಿಂತಿದ್ದ ಹುಂಜವನ್ನು ಹುಡುಗನೊಬ್ಬ ಕೆಣಕಲು ಹೋಗಿದ್ದಾನೆ. ಕೋಲನ್ನು ಕೈಯಲ್ಲಿ ಹಿಡಿದು ಹುಂಜಕ್ಕೆ ಹೊಡೆಯಲು ಮುಂದಾಗಿದ್ದಾನೆ. ತಾನೇನೋ ದೊಡ್ಡ ಸಾಹಸ ಮಾಡುತ್ತಿರುವುದಾಗಿ ಅಂದುಕೊಂಡಿರುವ ಈತ ಅದನ್ನು ವಿಡಿಯೋ ಮಾಡುವಂತೆ ಸ್ನೇಹಿತನಿಗೆ ಹೇಳಿದ್ದ. ಆದರೆ ಕೊನೆಗೆ ಆಗಿದ್ದೇ ಬೇರೆ. ಕೋಲು ಹಿಡಿದುಕೊಂಡು ಹೊಡೆಯಬೇಕು ಎನ್ನುವಷ್ಟರಲ್ಲಿಯೇ ಅಪಾಯವನ್ನು ಅರಿತ ಹುಂಜ ಆತನತ್ತ ತಿರುಗಿಬಿದ್ದಿದೆ. ಇದರಿಂದ ಗಾಬರಿಗೊಂಡ ಆತ ಕಾಲ್ಕಿತ್ತಿದ್ದಾನೆ. ದೊಡ್ಡದಾಗಿ ಕಿರುಚುತ್ತಾ ಭಯದಿಂದ ಆತ ಓಡಿದರೆ ಆತನ ಬೆನ್ನಟ್ಟಿ ಹುಂಜ ಹೋಗಿದೆ. ಓಡುವ ವೇಗದಲ್ಲಿ ಹುಡುಗ ಮೇಲಿನಿಂದ ಕೆಳಕ್ಕೆ ಬಿದ್ದಿದ್ದು ಇದರ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ವೀಕ್ಷಕರು ಹುಡುಗನಿಗೆ ತಕ್ಕಶಾಸ್ತಿಯಾಯ್ತು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕೆಲವರು ಸಖತ್ ಮನೋರಂಜನೆ ಪಡೆದಿದ್ದಾರೆ.

Leave A Reply

Your email address will not be published.