Reliance Jio : ಜಿಯೋ ನೀಡುತ್ತಿದೆ ಅನ್ಲಿಮಿಟೆಡ್ ಕರೆ |ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಜಿಯೋ !!!

ಟೆಲಿಕಾಂ ಜಗತ್ತಿನಲ್ಲಿ ತನ್ನದೇ ಪಾರುಪತ್ಯ ಕಾಯ್ದುಕೊಳ್ಳುತ್ತಿರುವ ರಿಲಯನ್ಸ್ ಒಡೆತನದ ಪ್ರಸಿದ್ಧ ಜಿಯೋ ಜನರನ್ನು ಸೆಳೆಯಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದೆ. ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಡೇಟಾ ಪ್ಯಾಕ್ ನೀಡುವ ಯೋಜನೆಯಲ್ಲಿದ್ದು , ಈಗಾಗಲೇ ಕೆಲವೆಡೆ 5G ಸೇವೆ ನೀಡಲು ಆರಂಭಿಸಿದ್ದು, ಎಲ್ಲೆಡೆ 5G ಸೇವೆ ನೀಡಲು ಸಕಲ ಸಿದ್ಧತೆ ಭರದಿಂದ ನಡೆಯತ್ತಿದೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು ತಿಳಿದಿರುವ ವಿಚಾರ.
ರಿಲಯನ್ಸ್ ಜಿಯೋ ಈಗಾಗಲೇ ಡೇಟಾ ಪ್ರಯೋಜನದ ಯೋಜನೆಗಳ ಮೂಲಕ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಜಿಯೋದ ಬಹುತೇಕ ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಸೌಲಭ್ಯ, ಎಸ್ಎಮ್ಎಸ್ ಪ್ರಯೋಜನವನ್ನು ಹೊಂದಿದೆ.

ಜಿಯೋ ಟೆಲಿಕಾಂನಲ್ಲಿ ಮುಖ್ಯವಾಗಿ 299 ರೂ. ಪ್ರಿಪೇಯ್ಡ್ ಯೋಜನೆ ಹೆಚ್ಚು ಗಮನ ಸೆಳೆದಿದ್ದು, ಇದರಲ್ಲಿ ಬಳಕೆದಾರರು ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನವನ್ನು ಪಡೆಯಬಹುದು. ಇದಲ್ಲದೆ, ಸಂಪೂರ್ಣ ಅನಿಯಮಿತ ಉಚಿತ ಕರೆ ಸೌಲಭ್ಯ ಕೂಡ ನೀಡಲಾಗಿದೆ.
299 ರೂ. ಪ್ಲಾನ್ ನೊಂದಿಗೆ ಪ್ರತಿದಿನ 100 ಎಸ್ ಎಮ್ ಎಸ್ ಸೌಲಭ್ಯ ಲಭ್ಯವಿದ್ದು, 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆ ಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಇದರ ಜೊತೆಗೆ ಜಿಯೋ ಆ್ಯಪ್ ಅನ್ನು ಕೂಡ ಪಡೆಯಬಹುದಾಗಿದೆ.

ಜಿಯೋದ 239 ರೂ. ಪ್ರಿಪೇಯ್ಡ್ ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42 GB ಡೇಟಾ ಪ್ರಯೋಜನ ಪಡೆಯಬಹುದಾಗಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ್ ವಾಯಿಸ್ ಕರೆಗಳು ಅನಿಯಮಿತ ಉಚಿತವಾಗಿದ್ದು, ಜಿಯೋ ಆ್ಯಪ್ ಗಳ ಪ್ರಯೋಜನ ಕೂಡ ಪಡೆಯಬಹುದು.
ಇನ್ನು ಜಿಯೋ 479 ರೂ. ಪ್ರಿಪೈಡ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯವನ್ನು ಪಡೆಯಬಹುದು. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಸೌಲಭ್ಯದ ಜೊತೆಗೆ ಜಿಯೋ 479 ರೂ. ಪ್ರಿಪೇಯ್ಡ್ ಯೋಜನೆ 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.

ಇದರೊಂದಿಗೆ ಜಿಯೋದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯವಿದೆ.
ಜಿಯೋ ಟೆಲಿಕಾಂನ 119 ರೂ. ಪ್ರಿಪೇಯ್ಡ್ ಯೋಜನೆ 14 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪಡೆಯಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಸೌಲಭ್ಯವನ್ನು ಪಡೆಯಬಹುದು.

ಟೆಲಿಕಾಂ ಸರ್ವೀಸ್ ಗಳಾದ ಏರ್ಟೆಲ್, ಜಿಯೋ ಜಿದ್ದಿಗೆ ಬಿದ್ದಂತೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ನೆರವಾಗಲು ನವೀನ ಯೋಜನೆಗಳನ್ನು ತರಲಾಗಿದ್ದು, ಅನಿಯಮಿತ ಕರೆ, ಪ್ರತಿದಿನ ಎಸ್ ಎಂ ಎಸ್ ಸೌಲಭ್ಯದ ಜೊತೆ ಜಿಯೋ ಆ್ಯಪ್ ಕೂಡ ಬಳಸಬಹುದಾಗಿದೆ.

Leave A Reply

Your email address will not be published.