ಪದೇ ಪದೇ ಮೂಗಿನಲ್ಲಿ ಬೆರಳಿಡ್ತೀರಾ? ಹಾಗಾದರೆ ಈ ಆಘಾತಕಾರಿ ಮಾಹಿತಿ ಓದಿದರೆ ಉತ್ತಮ!!!
ಕೆಲವರಿಗೆ ಪದೇ ಪದೇ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವುದು ಅಭ್ಯಾಸವಾಗಿರುತ್ತದೆ. ಹೆಚ್ಚಾಗಿ ಸಣ್ಣಮಕ್ಕಳಿಗೆ ಈ ಅಭ್ಯಾಸವಿರುತ್ತದೆ. ಅವರಿಗೆ ಎಷ್ಟು ಹೇಳಿದರೂ ಕೈ ಮೂಗಲ್ಲೇ ಇರುತ್ತದೆ. ಆಶ್ಚರ್ಯವೇನೆಂದರೆ ಈ ಅಭ್ಯಾಸ ಅನಾರೋಗ್ಯಕ್ಕೂ ಕಾರಣವಾಗಬಹುದಂತೆ. ಪದೇ ಪದೇ ಮೂಗಿನಲ್ಲಿ ಬೆರಳಿಡುವ ಅಭ್ಯಾಸವು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಗೆ ಬಲಿಯಾಗಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ಮೂಗಿಗೆ ಪದೇ ಪದೇ ಬೆರಳಿಡುವುದರಿಂದ ಮೂಗಿನ ಒಳಪದರವನ್ನು ಹಾನಿಗೊಳಿಸುತ್ತದೆ. ಇದು ಬ್ಯಾಕ್ಟೀರಿಯಾ ರಕ್ತದೊಂದಿಗೆ ಬೆರೆಯಲು ಮತ್ತು ಮೆದುಳನ್ನು ತಲುಪಲು ಸುಲಭವಾದ ಮಾರ್ಗವನ್ನು ಕಂಡುಕೊಳ್ಳಲು ದಾರಿ ಮಾಡಿಕೊಡುತ್ತದೆ.
ಈ ಅಧ್ಯಯನದಲ್ಲಿ, ಮೂಗನ್ನು ಮೆದುಳಿಗೆ ನೇರವಾಗಿ ಸಂಪರ್ಕಿಸುವ ನರಗಳು ಸೈನಸ್ ದೋಷಕ್ಕೆ ಒಡ್ಡಿಕೊಳ್ಳುವುದರ ಪರಿಣಾಮವನ್ನು ಸಂಶೋಧಕರು ಅಧ್ಯಯನ ಮಾಡುತ್ತಿದ್ದಾರೆ. ಇಲಿಗಳ ಮೇಲೆ ಮಾಡಿದ ಈ ಅಧ್ಯಯನದಲ್ಲಿ, ಮೆದುಳಿನಲ್ಲಿ ಬ್ಯಾಕ್ಟೀರಿಯಾದ ಉಪಸ್ಥಿತಿಯನ್ನು 72 ಗಂಟೆಗಳ ಒಳಗೆ ಗಮನಿಸಲಾಯಿತು. ಅಷ್ಟಲ್ಲದೆ ಒಂದು ತಿಂಗಳಿನ ಒಳಗೆ ಇಲಿಗಳಲ್ಲಿ ಪ್ರೋಟೀನ್ ಪ್ಲೇಕ್ ಗಳು ರೂಪುಗೊಳ್ಳಲು ಪ್ರಾರಂಭಿಸಿದವು. ಇದು ಆಲ್ಝೈಮರ್ಗೆ ಸಂಬಂಧಿಸಿದೆ.
ಕ್ಲಮೈಡಿಯಾ ನ್ಯುಮೋನಿಯಾ ದೋಷವು ಮೂಗಿನ ಮೂಲಕ ನೇರವಾಗಿ ಮೆದುಳಿಗೆ ತಲುಪುತ್ತದೆ ಎಂದು ಆಸ್ಟ್ರೇಲಿಯಾದ ಗ್ರಿಫಿನ್ ವಿಶ್ವವಿದ್ಯಾನಿಲಯದ ಸಂಶೋಧಕರು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಕ್ಲಮೈಡಿಯಾ ನ್ಯುಮೋನಿಯಾ ಎಂಬ ಸಾಮಾನ್ಯ ಬ್ಯಾಕ್ಟೀರಿಯಾವು ಗಂಟಲು, ಕಿವಿ, ಸೈನುಸಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಬ್ಯಾಕ್ಟೀರಿಯಾ ಶ್ವಾಸಕೋಶದ ಮೂಲಕ ದೇಹವನ್ನು ಪ್ರವೇಶಿಸಿದಾಗ ದೇಹದ ರಕ್ಷಣಾತ್ಮಕ ಕವಚವು ಮೆದುಳಿಗೆ ತಲುಪದಂತೆ ತಡೆಯುತ್ತದೆ. ಆದರೆ ಮೂಗಿನ ಒಳಪದರದ ಮೂಲಕ ನೇರವಾಗಿ ಮೆದುಳಿಗೆ ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.