ಇ- ಸಿಗರೇಟ್ ಸೇದುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಹೆಚ್ಚಿನ ಕಡೆಗಳಲ್ಲಿ ದೂಮಪಾನ ಹಾನಿಕಾರಕ ಎಂದು ಬರೆಯುವುದನ್ನು ನಾವು ನೋಡಿರುತ್ತೇವೆ!! ಅಷ್ಟೆ ಏಕೆ ಸಿಗರೇಟ್ ಪ್ಯಾಕೆಟ್ ಮೇಲೆ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಉಲ್ಲೇಖಿಸಿದ್ದರು ಕೂಡ ಸಿಗರೇಟ್ ಸೇದುವ ಚಾಳಿ ಅಷ್ಟು ಸುಲಭದಲ್ಲಿ ಬಿಡಲು ಸಾಧ್ಯವಿಲ್ಲ.

ಸಿಗರೇಟ್ ಸೇದುವ ಹವ್ಯಾಸ ಅನೇಕ ಅಪಾಯಗಳಿಗೆ ಆಹ್ವಾನ ನೀಡಿದಂತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಹಾಗಾಗಿ, ಹೆಚ್ಚಿನವರು ಈ ಅಪಾಯ ತಪ್ಪಿಸಲು ಇ – ಸಿಗರೇಟ್ ಮೊರೆ ಹೋಗುತ್ತಾರೆ.

ಇ-ಸಿಗರೇಟ್ ಸೇದುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂಬುದು ಹೆಚ್ಚಿನವರ ನಂಬಿಕೆಯಾಗಿದೆ. ಆದರೆ , ಇ-ಸಿಗರೇಟುಗಳು ಸಾಮಾನ್ಯ ಸಿಗರೇಟುಗಳಂತೆ ಹೃದಯವನ್ನು ಹೆಚ್ಚಾಗಿಯೇ ಹಾನಿಗೊಳಿಸುತ್ತವೆ ಎಂಬುದನ್ನು ಅನೇಕ ಅಧ್ಯಯನಗಳು ಬಹಿರಂಗಪಡಿಸಿದೆ.

ಇಂದಿನ ಯುಗದಲ್ಲಿ, ಇ-ಸಿಗರೇಟ್ ( e cigarette) ಸೇದುವ ಹವ್ಯಾಸ ವೇಗವಾಗಿ ಹೆಚ್ಚುತ್ತಿದೆ. ಅದರಲ್ಲೂ ಯುವಜನತೆ ಇ-ಸಿಗರೇಟ್ ಸೇದುವುದನ್ನು ಟ್ರೆಂಡ್ ನ ಜೊತೆಗೆ ಫ್ಯಾಷನ್ ರೀತಿಯಲ್ಲಿ ಮಾಡಿಕೊಂಡಿರುವುದು ವಿಪರ್ಯಾಸ. ಸಾಮಾನ್ಯ ಸಿಗರೇಟುಗಳಿಗೆ ಹೋಲಿಸಿದರೆ ಇ-ಸಿಗರೇಟ್ ಅಪಾಯಕಾರಿಯಲ್ಲ ಎಂಬುದು ಹೆಚ್ಚಿನವರ ನಂಬಿಕೆಯಾಗಿದ್ದು, ಆದರೆ, ವಾಸ್ತವವಾಗಿ ಇದು ತಪ್ಪು ಕಲ್ಪನೆಯಾಗಿದೆ.

ಇ-ಸಿಗರೇಟ್ ಹೃದಯಕ್ಕೆ ತುಂಬಾ ಅಪಾಯಕಾರಿ (effect on heart) ಎಂದು ಅಧ್ಯಯನಗಳು ತಿಳಿಸಿದ್ದು, ನಿಯಮಿತವಾಗಿ ಬಳಸುವ ಜನರ ಹೃದಯ ಮತ್ತು ರಕ್ತನಾಳದ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ಇತ್ತೀಚಿನ ಅಧ್ಯಯನವೊಂದರಲ್ಲಿ ಇದು ಬಹಿರಂಗವಾಗಿದ್ದು, ಸಾಮಾನ್ಯ ಸಿಗರೇಟುಗಳಂತೆ ಇ-ಸಿಗರೇಟ್ ಸಹ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗಿದೆ.

ಇದಲ್ಲದೆ, ನಿರಂತರವಾಗಿ ಸೇದುತ್ತಿದ್ದರೆ ಮಾರಣಾಂತಿಕ ಪರಿಣಾಮಗಳು ಉಂಟಾಗುತ್ತವೆ ಕಳೆದ ಕೆಲವು ವರ್ಷಗಳಲ್ಲಿ, ದೇಶ ಮತ್ತು ವಿಶ್ವದಲ್ಲಿ ಹೃದಯಾಘಾತದ (heart attack) ಪ್ರಕರಣಗಳಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದ್ದು, ವಿಶೇಷವಾಗಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.

ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಸ್ಮೋಕಿಂಗ್. ಸ್ಮೋಕಿಂಗ್ ನಿಂದಾಗಿ ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಸ್ಮೋಕಿಂಗ್ ಅಭ್ಯಾಸವು ಯುವಕರನ್ನು ಹೃದಯಾಘಾತ ಮತ್ತು ಇತರ ಅಪಾಯಕಾರಿ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿವೆ.

ಇ-ಸಿಗರೇಟ್ ಮತ್ತು ಸಾಮಾನ್ಯ ಸಿಗರೇಟುಗಳ ನಡುವಿನ ವ್ಯತ್ಯಾಸ ಗಮನಿಸಿದರೆ:

ಸಾಮಾನ್ಯ ಸಿಗರೇಟ್ ತಂಬಾಕು ಮತ್ತು ನಿಕೋಟಿನ್ (nicotine) ಹೊಂದಿದ್ದು, ಆದರೆ ಇ-ಸಿಗರೇಟ್ ಕೇವಲ ನಿಕೋಟಿನ್ ಮಾತ್ರ ಹೊಂದಿರುತ್ತವೆ. ನಿಕೋಟಿನ್ ಸೇವನೆಯು ಅದರ ವ್ಯಸನಿಯನ್ನಾಗಿ ಮಾಡುತ್ತವೆ. ಇ ಸಿಗರೇಟು ಸೇದುವುದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗಿ ಇದರಿಂದ ಹೃದಯ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಉಂಟಾಗುತ್ತದೆ. ಇದು ಅಪಧಮನಿಯ ಗೋಡೆಗಳಿಗೆ ಹಾನಿಯುಂಟುಮಾಡುವ ಅಪಾಯವನ್ನು ಉಂಟುಮಾಡುತ್ತದೆ.

ಈ ಅಧ್ಯಯನದ ಅನ್ವಯ ಇ-ಸಿಗರೇಟ್ ಅಥವಾ ಸಾಮಾನ್ಯ ಸಿಗರೇಟುಗಳನ್ನು ಸೇದಿದ ತಕ್ಷಣ ರಕ್ತದೊತ್ತಡ (blood pressure), ಹೃದಯ ಬಡಿತ ಮತ್ತು ರಕ್ತನಾಳಗಳ ಟೋನ್ ನಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತವೆ. ಇ-ಸಿಗರೇಟಿನ ವ್ಯಸನದಿಂದಾಗಿ ಮೆದುಳಿಗೆ ಹಾನಿಯುಂಟಾಗುವ ಅಪಾಯವೂ ಇದೆ.

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (American Heart association) ಸೈಂಟಿಫಿಕ್ ಸೆಷನ್ನಲ್ಲಿ ಪ್ರಸ್ತುತಪಡಿಸಿದ ಒಂದು ಅಧ್ಯಯನವು ಇ-ಸಿಗರೇಟುಗಳನ್ನು ಸೇದಿದ 15 ನಿಮಿಷಗಳಲ್ಲಿ ಜನರ ಹೃದಯ ಬಡಿತವು ಇದ್ದಕ್ಕಿದ್ದಂತೆ ಹೆಚ್ಚಾಗುವುದೆಂದು ಬಹಿರಂಗವಾಗಿದೆ. ಇದು ದೇಹದ ‘ಫೈಟ್ ಮತ್ತು ಫ್ಲೈಟ್’ ಮೋಡನ್ನು ಆನ್ ಮಾಡುವುದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.

ಇ-ಸಿಗರೇಟ್ ಸಾಮಾನ್ಯ ಸಿಗರೇಟುಗಳಿಗಿಂತ ಕಡಿಮೆ ಹಾನಿಕಾರಕವಾಗಿವೆ. ಆದರೆ ಇದು ಹೃದಯ ಮತ್ತು ರಕ್ತನಾಳಗಳ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದಾಗಿದೆ. ಇ-ಸಿಗರೇಟಿನ ಹೊಗೆಯು ಇತರ ಧೂಮಪಾನ ವಸ್ತುಗಳಂತೆ ಅಪಾಯಕಾರಿ ಮತ್ತು ದೇಹವನ್ನು ತಲುಪುವ ಮೂಲಕ ಆಂತರಿಕ ಹಾನಿಯನ್ನುಂಟು (internal damage) ಮಾಡುತ್ತವೆ.

ಹೃದಯವನ್ನು ಆರೋಗ್ಯಕರವಾಗಿಡಲು ಧೂಮಪಾನದಿಂದ ದೂರವಿರಬೇಕಾಗಿದ್ದು, ಇದಲ್ಲದೆ, ಆರೋಗ್ಯಕರ ಜೀವನಶೈಲಿಯನ್ನು (healthy lifestyle) ಅನುಸರಿಸುವುದು ಒಳ್ಳೆಯದು. ಯೋಗ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಆಹಾರ ಕ್ರಮವನ್ನೂ ಅಳವಡಿಸಿಕೊಳ್ಳುವುದು ಉತ್ತಮ.

Leave A Reply

Your email address will not be published.