Government Schemes : ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಿಗುತ್ತೆ ಪಿಂಚಣಿ!!!

ಹಿರಿಯ ನಾಗರಿಕರು ಜೀವನ ನಿರ್ವಹಣೆಗೆ ಕುಟುಂಬದವರನ್ನು ಅವಲಂಭಿಸಬೇಕಾಗುತ್ತದೆ. ಅನೇಕ ಬಾರಿ ಆರ್ಥಿಕ ಸಂಕಟವನ್ನು ಹಿರಿಯರು ಅನುಭವಿಸ್ತಾರೆ. ಅವರ ಜೀವನವನ್ನು ಸುಗಮಗೊಳಿಸಲು ಸರ್ಕಾರ ಇಂದಿರಾ ಗಾಂಧಿ ಪಿಂಚಣಿ ಯೋಜನೆ ಶುರು ಮಾಡಿದೆ.
ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಎಚ್ಚರ ವಹಿಸಲು
ಜನರ ಅನುಕೂಲಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಗೆ ಬಲ ನೀಡುವುದು ಈ ಯೋಜನೆಗಳ ಉದ್ದೇಶವಾಗಿದೆ. ಪ್ರಸ್ತುತ ಇಂದಿರಾ ಗಾಂಧಿ ಯೋಜನೆಗಳು ಕೂಡ ಸೇರಿವೆ.

ಇಂದಿರಾ ಗಾಂಧಿ ಪಿಂಚಣಿ ಯೋಜನೆ:
ಇಂದಿರಾ ಗಾಂಧಿ ವಿಧವಾ ಯೋಜನೆ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ವಿಕಲಾಂಗ ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಇಂದಿರಾ ಗಾಂಧಿ ಪಿಂಚಣಿ ಯೋಜನೆಯನ್ನು ನವೆಂಬರ್ 9, 2007 ರಲ್ಲಿ ಕೇಂದ್ರ (Center) ಸರ್ಕಾರ ಶುರು ಮಾಡಿದೆ. ವೃದ್ಧರಿಗೆ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ಶುರು ಮಾಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ನಿಮ್ಮ ಮನೆಯಲ್ಲೂ ಹಿರಿಯ ನಾಗರಿಕರಿದ್ದರೆ ನೀವು ಅರ್ಜಿ ಸಲ್ಲಿಸಿ ಈ ಯೋಜನೆ ಲಾಭ ಪಡೆಯಬಹುದು. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಬಡ ಕುಟುಂಬದ ವೃದ್ಧರಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸುವುದಾಗಿದೆ. ಯಾವುದೇ ಆದಾಯದ ಮೂಲವಿಲ್ಲದ ವೃದ್ಧರು ಈ ಯೋಜನೆಯ ಪ್ರಯೋಜನ ಪಡೆಯಬೇಕು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಪಿಂಚಣಿ ಮೊತ್ತವು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಬರುತ್ತದೆ.

ಇಂದಿರಾ ಗಾಂಧಿ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ :
• ಈ ಯೋಜನೆಗೆ ವಯಸ್ಸಿ ನ ಮಿತಿಯಿದೆ.
• ಹಾಗೆ ಆರ್ಥಿಕ ಸ್ಥಿತಿಯ ಗಡಿಯಿದೆ.
• ಅರ್ಜಿ ಸಲ್ಲಿಸುವ ವೃದ್ಧರ ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿರಬೇಕು.
• ಬಿಪಿಎಲ್ (BPL) ಕಾರ್ಡ್ ಹೊಂದಿರುವವರು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯ ಲಾಭವನ್ನು ಪಡೆಯಬಹುದು. ಅಂದರೆ ಬಡತನ ರೇಖೆಗಿಂತ ಕೆಳಗಿರುವ, ಪ್ರಮಾಣಪತ್ರ ವನ್ನು ಹೊಂದಿರುವವರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಇಂದಿರಾ ಗಾಂಧಿ ಪಿಂಚಣಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಬೇರೆ ಬೇರೆ ಮೊತ್ತ ಸಿಗುತ್ತದೆ. 60ರಿಂದ 79 ವರ್ಷದ ವೃದ್ಧರಿಗೆ 300ರಿಂದ 500 ರೂಪಾಯಿವರೆಗೆ ಸರ್ಕಾರ ಪಿಂಚಣಿ ನೀಡುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಫಲಾನುಭವಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 800 ರೂಪಾಯಿಗಳನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ.

ಇಂದಿರಾ ಗಾಂಧಿ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :
• ಮೊದಲೇ ಹೇಳಿದಂತೆ ಅರ್ಹ ವ್ಯಕ್ತಿಗಳು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬೇಕು.
• ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್,
• ಪ್ಯಾನ್ ಕಾರ್ಡ್,
• ಆದಾಯದ ದಾಖಲೆ,
• ವಯಸ್ಸಿನ ದಾಖಲೆ,
• ಬಿಪಿಎಲ್ ಕಾರ್ಡ್ ಮತ್ತು
• ವಿಳಾದದ ದಾಖಲೆ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ನೀಡಬೇಕಾಗುತ್ತದೆ.

ಇಂದಿರಾ ಗಾಂಧಿ ಪಿಂಚಣಿ ಯೋಜನೆ ಲಾಭ ಪಡೆಯಲು ಬಯಸುವವರು ಮೊದಲು ಅರ್ಜಿ ಫಾರ್ಮ್ ಅನ್ನು ಪಡೆಯಬೇಕು. ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಉಚಿತವಾಗಿ ನೀವು ಅರ್ಜಿಯನ್ನು ತೆಗೆದುಕೊಳ್ಳಬಹುದು. ಇದರ ನಂತರ ನೀವು ಆ ಅರ್ಜಿಯಲ್ಲಿ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು. ಇದರ ನಂತರ ಅಗತ್ಯ ದಾಖಲೆಗಳ ಜೊತೆ ಅರ್ಜಿಯನ್ನು ನೀವು ಬಿಡಿಒ ಕಚೇರಿಗೆ ಸಲ್ಲಿಸಬೇಕು. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಸರ್ಕಾರ ಪಿಂಚಣಿಯನ್ನು ಬ್ಯಾಂಕ್ ಖಾತೆಗೆ ಕಳುಹಿಸುತ್ತದೆ. ಇದರ ನಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಬರುತ್ತದೆ.

Leave A Reply

Your email address will not be published.