bigg news :  ಆಕಾಶ ಬುಟ್ಟಿ ಹಚ್ಚೋ ಮುನ್ನ ಎಚ್ಚರ..! ಹುಬ್ಬಳ್ಳಿಯಲ್ಲಿ ಮನೆ ಮೇಲೆ ಬಿದ್ದು, ಸಂಪೂರ್ಣ ಭಸ್ಮ

ಆಕಾಶ ಬುಟ್ಟಿ ಹಚ್ಚೋ ಮುನ್ನ ಎಚ್ಚರ..! ಹುಬ್ಬಳ್ಳಿಯಲ್ಲಿ ಮನೆ ಮೇಲೆ ಸಂಪೂರ್ಣ ಭಸ್ಮ
ಹುಬ್ಬಳ್ಳಿ: ಘಂಟಿಕೇರಿ ಓಣಿಯ ರಾಘವೇಂದ್ರ ಮಠದ ಬಳಿ ಮನೆ ಮೇಲೆ ಆಕಾಶ ಬುಟ್ಟಿ  ಬಿದ್ದ ಪರಿಣಾಮ ಮನೆ ಧಗಧಗ ಎಂದು ಹೊತ್ತಿ ಉರಿದ ಘಟನೆ ನಡೆದಿದೆ.
ಎಲ್ಲಿಂದಲೋ ಬಂದ ಆಕಾಶ ಬುಟ್ಟಿ ದಿಢೀರ್ ಶಿವರಾಜ ತಾಳಿಕೋಟಿ ಎಂಬುವರಿಗೆ ಸೇರಿದ ಮನೆ ಮೇಲೆ ಬಿದ್ದಿದೆ. ಈ ವೇಳೆ ದೊಡ್ಡ ಮಟ್ಟದಲ್ಲಿ ಹೊತ್ತಿಕೊಂಡ ಬೆಂಕಿಗೆ ಇಡೀ ಮನೆ ಹೊತ್ತಿ ಉರಿದಿದೆ. ಈ ದೃಶ್ಯವನ್ನು ಕಂಡು ಅಕ್ಕಪಕ್ಕದ ಮನೆಯವರು ಗಾಬರಿಯಾಗಿದ್ದು, ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

 

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೆಚ್ಚಾಗಿ ಆಕಾಶಬುಟ್ಟಿಗಳು ಕಂಡುಬರುತ್ತದೆ. ಗೂಡುದೀಪ, ಬೆಳಕಿನ ಬುಟ್ಟಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಿಸಿಕೊಳ್ಳುವ ಆಕಾಶ ಬುಟ್ಟಿ ನಮ್ಮ ಭಾವನೆ, ನೆನಪು, ಸಂಸ್ಕೃತಿಯ ಜೊತೆ ಬೆಸೆದುಕೊಂಡಿದೆ. ಮೊದಲೆಲ್ಲ ಆಚರಣೆ ಒಂದು ಭಾಗವಾಗಿದ್ದ ಆಕಾಶ ಬುಟ್ಟಿಗಳು ಆಧುನಿಕತೆಯ ಭರಾಟೆಯಲ್ಲಿ ಕೆಲವರಿಗೆ ಪ್ರತಿಷ್ಠೆಯಾದರೆ ಇನ್ನೂ ಕೆಲವರು ತಮ್ಮ ಮನೆ ಅಂದ, ಅಲಂಕಾರಕ್ಕೆ ಇವುಗಳನ್ನು ಹಾಕುತ್ತಿದ್ದಾರೆ

Leave A Reply

Your email address will not be published.