ಏನಿದು ವಿಚಿತ್ರ : ಭಾರತ್ ಮಾತಾ ಕಿ ಜೈ ಎಂದು ಹೇಳಿದ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಶಿಕ್ಷಕಿ| ಗ್ರಾಮಸ್ಥರ ಪ್ರತಿಭಟನೆ!!!

ಭಾರತ್‌ ಮಾತಾ ಕಿ ಜೈ ಎಂದ ವಿದ್ಯಾರ್ಥಿಗೆ ಶಿಕ್ಷೆ ನೀಡಿದ್ದಾರೆ ಎಂದರೆ ಆಶ್ಚರ್ಯವೆನಿಸುತ್ತದೆ. ಭಾರತದಲ್ಲಿಯೇ ಇದ್ದು ಭಾರತದ್ದೇ ಆದ ಘೋಷಣೆಯನ್ನು ಹೇಳಿದ್ದಕ್ಕೆ ಶಿಕ್ಷೆ ಎಂದರೆ ವಿಸ್ಮಯವೆನಿಸುತ್ತದೆ. ಹಾಗಾದರೆ ನಿಜವಾಗಿಯೂ ನಡೆದಿದ್ದಾದರೂ ಏನು ಎಂಬುದನ್ನು ನೋಡೋಣ.

 

ಮಧ್ಯಪ್ರದೇಶದ ಗುಣ ಜಿಲ್ಲೆಯ ಶಾಲೆಯಲ್ಲಿ ಭಾರತ್‌ ಮಾತಾಕೀ ಜೈ ಅಂದ ವಿದ್ಯಾರ್ಥಿಗೆ ಶಿಕ್ಷೆ ವಿಧಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಹೆತ್ತವರು ಮತ್ತು ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಶಾಲೆಯಲ್ಲಿ ಬೆಳಗ್ಗಿನ ಅಸೆಂಬ್ಲಿಯ ನಂತರ ರಾಷ್ಟ್ರಗೀತೆ‌‌ ಮುಕ್ತಾಯವಾಗುತ್ತಿದ್ದಂತೆ ವಿದ್ಯಾರ್ಥಿಯೊಬ್ಬ ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಹಾಕಿದ್ದಾನೆ. ವಿದ್ಯಾರ್ಥಿ ಘೋಷಣೆ ಕೂಗಿದ ಕಾರಣ ಶಿಕ್ಷಕಿ ಜಾಸ್ಮಿನಾ ಖಾತುನ್‌ ಆತನಿಗೆ ಗ್ರೌಂಡ್‌ನ‌ಲ್ಲಿ ಕೂರುವ ಶಿಕ್ಷೆಯನ್ನು ವಿಧಿಸಿದ್ದಾರೆ.

ತರಗತಿ ಮುಗಿದ ನಂತರ ವಿದ್ಯಾರ್ಥಿ ಮನೆಗೆ ಬಂದು ಹೆತ್ತವರ ಬಳಿ ವಿಷಯ ತಿಳಿಸಿದ್ದಾನೆ. ಇದರಿಂದಾಗಿ ಹೆತ್ತವರು ಮತ್ತು ಸ್ಥಳೀಯರು ಶಾಲೆಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ನಂತರ ಶಾಲೆ ಕ್ಷಮೆ ಕೋರಿದ್ದಲ್ಲದೆ,ಪ್ರತಿದಿನ ಅಸೆಂಬ್ಲಿಯ ಕೊನೆಯಲ್ಲಿ ರಾಷ್ಟ್ರಗೀತೆ ಬಳಿಕ ಭಾರತ್‌ ಮಾತಾ ಕಿ ಜೈ ಘೋಷಣೆ ಹಾಕುವಂತೆ ಸೂಚಿಸಿದೆ. ಈ ಘಟನೆಯ ಬಗ್ಗೆ ಗುಣಾ ಜಿಲ್ಲಾಡಳಿತ ಪ್ರತಿಕ್ರಿಯೆ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದೆ.

Leave A Reply

Your email address will not be published.