ಬಂದಳೋ ಬಂದಳೋ..ಸನ್ನಿ ಲಿಯೋನ್!!! ಹೂ ಮುಡಿದು ಸೀರೆಯುಟ್ಟು ರಥವನೇರಿ ಬಂದೇ ಬಿಟ್ಟಳು ಚೆಲುವೆ!!!

ಬಾಲಿವುಡ್ ಸೇರಿ ಎಲ್ಲಾ ಚಿತ್ರರಂಗದ ಬಹು ಬೇಡಿಕೆಯ ನಟಿ ಸನ್ನಿ ಲಿಯೋನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದವರು. ಪ್ರಸ್ತುತ ನೀಲಿ ಚಿತ್ರಗಳಿಗೆ ಗುಡ್ ಬೈ ಹೇಳಿರುವ ಸನ್ನಿ ಹೊಸ ಜೀವನದ ಪಯಣದಲ್ಲಿ ಸಾಗುತ್ತಿದ್ದು, ಚಿತ್ರರಂಗ ಹಾಗೂ ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಆಸ್ವಾದಿಸುತ್ತಿದ್ದಾರೆ.

 

ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯಲ್ಲಿರುವ ನಟಿ ಇದೀಗ ಸೀರೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅಪ್ಪಟ ಹಿಂದೂ ಸಂಪ್ರದಾಯದ ಸಂಸ್ಕೃತಿಯ ಪ್ರತೀಕದಂತೆ ಸೀರೆಯಲ್ಲಿ ಮಿನುಗುತ್ತಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಅವರು ಇದೀಗ ತಮಿಳಿನ ‘ಓ ಮೈ ಘೋಸ್ಟ್’ ಸಿನಿಮಾದಲ್ಲಿ ಅಭಿನಯಿಸಿದ್ದು, ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹಾರರ್ ಕಾಮಿಡಿ ಮಿಶ್ರಿತ ಕಥೆ ಹೊಂದಿರುವ ಸಿನಿಮಾದ ಆಡಿಯೊ ಬಿಡುಗಡೆಗೆ ಬುಧವಾರ ಸನ್ನಿ ಚೆನ್ನೈಗೆ ಆಗಮಿಸಿದ್ದಾರೆ.

ಅವರ ಆಗಮನವನ್ನು ಎದುರು ನೋಡುತ್ತಿದ್ದ ಜನತೆ ಫುಲ್ ಖುಷ್ ಆಗಿದ್ದಾರೆ. ಅವರು ಬಂದ ಶೈಲಿಯನ್ನು ಕಂಡು ಅರೆವ್ಹಾ!! ..ಎಂದು ಅಭಿಮಾನಿ ವರ್ಗ ಮೆಚ್ಚುಗೆಯ ಸುರಿಮಳೆ ಗೈದಿದೆ.

ಹಸಿರು ಸೀರೆಯುಟ್ಟು ಅದಕ್ಕೆ ಒಪ್ಪುವ ಕೆಂಪು ರವಿಕೆ ಧರಿಸಿ ಹೂ ಮುಡಿದು ಅಪ್ಪಟ ಸಂಪ್ರದಾಯಸ್ಥ ನಾರಿಯಾಗಿ ಕಂಗೊಳಿಸಿದ ಸನ್ನಿಯನ್ನು ಕಂಡವರು ಅಪ್ಸರೆ ಎಂದು ಹೇಳಿದರೂ ಕೂಡ ಅಚ್ಚರಿಯಿಲ್ಲ.

ಪ್ರವಾಸ, ಫೋಟೊಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಸನ್ನಿ ಅವರು ತಮ್ಮ ಅಭಿಮಾನಿಗಳಿಗೆ ಎಂದಿಗೂ ಎವರ್ ಗ್ರೀನ್ ಫೇವರೇಟ್ ಆಗಿ ಸಂಪರ್ಕದಲ್ಲಿರುತ್ತಾರೆ.

ಸನ್ನಿಯವರ ಸೀರೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸನ್ನಿ ಅವರನ್ನು ಸೀರೆಯಲ್ಲಿ ನೋಡಿ ಅವರ ಅಭಿಮಾನಿಗಳು ಸಂತಸಪಟ್ಟಿದ್ದು, ಡಿ.ವೀರಸಕ್ತಿ ಹಾಗೂ ಕೆ.ಸಾಯಿಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸತೀಶ್, ಯೋಗಿ ಬಾಬು ಸೇರಿದಂತೆ ಅನೇಕರ ತಾರಾಗಣವನ್ನು ಈ ಸಿನಿಮಾ ಹೊಂದಿದೆ.

ಇನ್ನು ಆರ್ ಯುವನ್ ನಿರ್ದೇಶನದಲ್ಲಿ ಮೂಡಿಬಂದಿರುವ ಓ ಮೈ ಘೋಸ್ಟ್ ಸಿನಿಮಾ ಮುಂದಿನ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಅಣಿಯಾಗಿದೆ.

Leave A Reply

Your email address will not be published.