Skin Care Tips: ವಯಸ್ಸಾಗುವಿಕೆಯನ್ನು ಹೆಚ್ಚಿಸುವ ಈ 4 ಪಾನೀಯಗಳನ್ನು ಸೇವಿಸಬೇಡಿ!!!

ವಯಸ್ಸಾದಂತೆ ನಮ್ಮ ಯೌವ್ವನದ ಕಾಂತಿಯು ಕಡಿಮೆಯಾಗುವುದು ಸಹಜ. ಇದಕ್ಕೆ ಕಾರಣ ಜೀವನಶೈಲಿ, ಒತ್ತಡ, ಕಡಿಮೆ ನಿದ್ರೆ ಮತ್ತು ಕಳಪೆ ಆರೋಗ್ಯ. ದಿನ ಕಳೆದಂತೆ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕೇವಲ ವಯಸ್ಸು ಮಾತ್ರ ಕಾರಣವಲ್ಲ, ಆಹಾರ ಕ್ರಮಗಳಿಂದಲೂ ಹೀಗಾಗುತ್ತದೆ. ಇದನ್ನು ಸರಿಪಡಿಸಲು ಉತ್ತಮವಾದ ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಅಲ್ಲದೆ ಕೆಲವೊಂದು ಪಾನೀಯವನ್ನು ಸೇವಿಸುವುದರಿಂದಲೂ ಚರ್ಮದ ವಸ್ಸಾಗುವಿಕೆಗೆ ಕಾರಣವಾಗಿದೆ. ನಮ್ಮ ಚರ್ಮದ ವಯಸ್ಸನ್ನು ವೇಗವಾಗಿ ಹೆಚ್ಚಿಸುವ ಆ ಪಾನಿಯಗಳ ಬಗ್ಗೆ ತಿಳಿದುಕೊಳ್ಳೋಣ.

 

ಸ್ಯಾಚುರೇಟೆಡ್ ಕೊಬ್ಬು, ಕೃತಕ ಸಿಹಿಕಾರಕ, ಆಲ್ಕೋಹಾಲ್ ಮುಂತಾದ ಕೆಲವು ಆಹಾರಗಳು ನಮ್ಮ ಚರ್ಮವನ್ನು ಹಾಳುಮಾಡುತ್ತವೆ. ಚರ್ಮವನ್ನು ತಾರುಣ್ಯದಿಂದ ಮತ್ತು ಹೊಳೆಯುವಂತೆ ಇರಿಸಿಕೊಳ್ಳಲು ನಾವು ಅನುಸರಿಸುವ ಆಹಾರಕ್ರಮವು ಸಂಬಂಧವಿದೆ. ಇದರಲ್ಲಿ ನಾವು ಕುಡಿಯುವ ಪಾನೀಯಗಳು ಒಳಗೊಂಡಿರುತ್ತದೆ.

ಸೋಡಾ: ಸೋಡಾವು ನಮ್ಮ ಚರ್ಮದ ಆರೋಗ್ಯಕ್ಕೆ ಕೆಟ್ಟ ಪಾನೀಯವಾಗಿದೆ. ಸೋಡಾದಲ್ಲಿರುವ ಸಕ್ಕರೆ ಮತ್ತು ಕೃತಕ ಸಿಹಿಕಾರಕಗಳೇ ಮುಖ್ಯವಾದ ವಿಷಕಾರಿ ಪದಾರ್ಥಗಳು. ಈ ಎರಡೂ ಅಂಶಗಳು ಅಕಾಲಿಕವಾಗಿ ವಯಸ್ಸಾದವರಂತೆ ಮಾಡುತ್ತದೆ. ಇದಲ್ಲದೆ, ಇದು ಸಂಧಿವಾತ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದ್ರೋಗಕ್ಕೂ ಕಾರಣವಾಗಬಹುದು.

ಸಂಸ್ಕರಿಸಿದ ಜ್ಯೂಸ್: ಇದರಲ್ಲಿ ಬಹಳಷ್ಟು ಕೆಮಿಕಲ್ ಮಿಶ್ರಣ ಮಾಡಿರುತ್ತರೆ ಅಲ್ಲದೆ ಸಕ್ಕರೆಯ ಪ್ರಮಾಣವು ಹೆಚ್ಚು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಚರ್ಮವನ್ನು ಅಕಾಲಿಕವಾಗಿ ವಯಸ್ಸಾಗಿಸುತ್ತದೆ ಮತ್ತು ನೀವು ಇರುವ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದವರಂತೆ ಮಾಡುತ್ತದೆ.

ಮದ್ಯಪಾನ: ಅತಿಯಾದ ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ಚರ್ಮಕ್ಕೆ ಎಂದಿಗೂ ಒಳ್ಳೆಯದಲ್ಲ. ವೈನ್ ಮತ್ತು ಬಿಯರ್‌ನಂತಹ ಪಾನೀಯಗಳು ಅಕಾಲಿಕ ವಯಸ್ಸಿಗೆ ಕಾರಣವಾಗಬಹುದು.

ಕೃತಕ ಸಿಹಿಕಾರಕ: ಹೆಚ್ಚು ಕೃತಕ ಸಿಹಿಯನ್ನು ಸೇವಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಇದು ನಿಮ್ಮ ಕರುಳಿನ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಹಾಗಾಗಿ ಈ ಕೆಮಿಕಲ್ ಯುಕ್ತ ಪಾನೀಯವನ್ನು ಸೇವಿಸಿ ನಿಮ್ಮ ಆರೊಗ್ಯವನ್ನು ಹಾಳು ಮಾಡಬೇಡಿ.

Leave A Reply

Your email address will not be published.